ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಸಂವಿಧಾನ ಓದು ಅಭಿಯಾನ- ಕರ್ನಾಟಕದ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ಆರಂಭವಾದ ಜಿಲ್ಲಾ ಮಟ್ಟದ ಸಂವಿಧಾನ ಓದು ಅಧ್ಯಯನ ಶಿಬಿರ ಉದ್ಘಾಟಿಸಿ, ಸಂವಿಧಾನ ರಚನೆ ಮತ್ತು ಮೂಲತತ್ವಗಳು ಎಂಬ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಾಂಸ್ಕೃತಿಕ ದಿವಾಳಿತನ, ಭಯೋತ್ಪಾದನೆ, ದೌರ್ಜನ್ಯವೆಲ್ಲವನ್ನು ಮೆಟ್ಟಿ ನಿಲ್ಲುವ ಮೂಲಕ ದಬ್ಬಾಳಿಕೆಯನ್ನು ಬುಡ ಸಮೇತ ಕಿತ್ತುಹಾಕುವ ಆತ್ಮಸ್ಥೈರ್ಯವನ್ನು ಕೊಡುವುದೇ ನಮ್ಮ ಸಂವಿಧಾನ ಎನ್ನುವುದನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದರು.ಸಂವಿಧಾನದ ಮೂಲ ತತ್ವಗಳನ್ನೇ ಬಹುತೇಕ ಜನರು ಇನ್ನೂ ಓದಿಕೊಳ್ಳದಿರುವುದು ಬೇಸರ ತರಿಸಿದೆ. ದೇಶದಲ್ಲಿ ೬.೫೦ ಲಕ್ಷ ಹಳ್ಳಿಗಳಿವೆ. ಪ್ರತಿ ಹಳ್ಳಿಯಲ್ಲಿಯೂ ಚಮ್ಮಾರನಿಂದ ಹಿಡಿದು ಶ್ಯಾನುಭೋಗ ತನಕವೂ ನೋಡಿದ್ದೇವೆ. ಜೊತೆಗೆ ಕೃಷಿಕರೇ ಇಲ್ಲಿ ಪ್ರಧಾನ ಎಂಬುದನ್ನು ಅರಿತುಕೊಳ್ಳಬೇಕು. ಏಕೆಂದರೆ ಜನರ ಜೀವನ ನಿಂತಿರುವುದು ರೈತನ ಮೇಲೆ ಎನ್ನುವುದನ್ನು ಮರೆಯಬಾರದು, ಬೇರೆ ಬೇರೆ ಕಾರಣಕ್ಕೆ ನಾವು ಬಂದಿದ್ದೇವೆ, ನಾವೆಲ್ಲರೂ ಒಟ್ಟಿಗೆ ದೇಶದಲ್ಲಿ ಬಾಳಿದ್ದೇವೆ, ಬ್ರಿಟಿಷರ ವಿರುದ್ಧವೂ ಹೋರಾಡಿದ್ದೇವೆ, ಸ್ವಾತಂತ್ರ್ಯಹೋರಾಟದಲ್ಲಿ ಕೇವಲ ಹಿಂದೂಗಳ ರಕ್ತ ಮಾತ್ರವಲ್ಲ, ಕ್ರೈಸ್ತರ, ಮುಸಲ್ಮಾನರು, ಪಾರ್ಸಿಯಾ, ಸಿಕ್ಕರ ರಕ್ಷವೂ ಹರಿದಿದೆ. ಯಾವ ಧರ್ಮದ ರಾಷ್ಟ್ರ ಬೇಡ, ಬೇಕಿರುವುದೊಂದೇ ಜಾತ್ಯತೀತ ರಾಷ್ಟ್ರವೆಂದು ಜನರೇ ಒಪ್ಪಿದ್ದಾರೆ ಎಂದು ಪ್ರತಿಪಾದಿಸಿದರು.
ಸಂವಿಧಾನ: ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆ ಕುರಿತು ನಿವೃತ್ತ ಉಪನ್ಯಾಸಕ ಕಿಗ್ಗ ರಾಜಶೇಖರ ಮಾತನಾಡಿ, ಜಿಲ್ಲೆಯಲ್ಲಿ ಹೋರಾಟದ ನಾಯಕರ ಕೊರತೆ ಕಾಣುತ್ತಿದೆ. ಮಂಡ್ಯದಂತಹ ಹೋರಾಟ ಜಿಲ್ಲೆಯಲ್ಲಿಯೂ ಕೂಡ ಹಣ ಕೊಟ್ಟರೆ ಚುನಾವಣೆ ಗೆಲ್ಲಬಹುದೆಂಬ ಸನ್ನಿವೇಶ ಇರುವುದು ದುರಂತ. ಜನ ಚುನಾವಣೆಯಲ್ಲಿ ಹಣ ತೆಗೆದುಕೊಳ್ಳುವುದಿಲ್ಲ ಎಂಬ ತೀರ್ಮಾನಕ್ಕೆ ಬರಬೇಕು. ಹೀಗಿದ್ದಾಗ ಉತ್ತಮ ಜನಪ್ರತಿನಿಧಿ ಆಯ್ಕೆಯಾಗಿ ಜನಪರ ಕೆಲಸಗಳು ಆಗುತ್ತವೆ ಎಂದು ಅಭಿಪ್ರಾಯಪಟ್ಟರು.