ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತಿತಿಮತಿ ಅರಣ್ಯ ವ್ಯಾಪ್ತಿಯ ಮರ ಸಂಗ್ರಹಾಲಯದ ಗೇಟಿಗೆ ಕಾಡಾನೆಯ ತಲೆ ಸಿಲುಕಿ ಕೆಲ ನಿಮಿಷ ಸಮಯ ಪರದಾಡಿದೆ. ಅತ್ತಿಂದಿತ್ತ ಎಷ್ಟೇ ಪರದಾಡಿದರೂ ಆಚೆಗೆ ಬರಲು ಸಾಧ್ಯವೇ ಆಗಿಲ್ಲ. ಈ ವೇಳೆ ಜೊತೆಗೆ ಇದ್ದ ಮತ್ತೊಂದು ಕಾಡಾನೆ ಇದರ ರಕ್ಷಣೆಗೆ ಮುಂದಾಗಿದೆ. ಅಷ್ಟರಲ್ಲಿ ಈ ಕಾಡಾನೆ ತನ್ನ ಚಾಣಾಕ್ಷತೆಯಿಂದಲೇ ಗೇಟಿಗೆ ಸಿಲುಕಿದ್ದ ತನ್ನ ತಲೆಯನ್ನು ಹೇಗೋ ಬಿಡಿಸಿಕೊಂಡು ಅಲ್ಲಿಂದ ಪರಾರಿಯಾಗಿದೆ. ಇದೆಲ್ಲವನ್ನೂ ಅಲ್ಲಿಯೇ ಇದ್ದ ಅಥಂಲೀಯರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.