ಕರ್ನಾಟಕ ವಿಧಾನಪರಿಷತ್ ಈಶಾನ್ಯ ಪದವೀಧರರ ಚುನಾವಣೆಕನ್ನಡಪ್ರಭ ವಾರ್ತೆ ಕೊಪ್ಪಳ
ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಸೋಮವಾರ ನಡೆದ ಮತದಾನದಲ್ಲಿ ಕೊಪ್ಪಳ ಡಿಸಿ, ಸಿಇಒ, ಎಸ್ಪಿ ಹಾಗೂ ಇತರ ಅಧಿಕಾರಿಗಳು ಸರದಿಯಲ್ಲಿ ನಿಂತು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.ನಗರದ ತಾಪಂ ಕಚೇರಿಯಲ್ಲಿನ ಮತಗಟ್ಟೆ ಸಂಖ್ಯೆ 128 ಕೇಂದ್ರದಲ್ಲಿ ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ, ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಹಾಗೂ ಇತರ ಅಧಿಕಾರಿಗಳು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಈ ಸಂದರ್ಭದಲ್ಲಿ ಹೊಸಪೇಟೆ ಉಪವಿಭಾಗಾಧಿಕಾರಿ ಮಹ್ಮದ್‌ಅಲಿ ಅಕ್ರಮ್ ಷಾ, ಕೊಪ್ಪಳ ತಹಸೀಲ್ದಾರ ವಿಠ್ಠಲ್ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ಸೇರಿದಂತೆ ಮತ್ತಿತರರಿದ್ದರು.ಹಿರಿಯ ಮತದಾರರಿಂದ ಮತದಾನ:ನಗರದ ತಾಪಂ ಕಚೇರಿಯಲ್ಲಿನ ಮತಗಟ್ಟೆ ಸಂಖ್ಯೆ 128ಎ ಕೇಂದ್ರದಲ್ಲಿ 80 ವರ್ಷದ ಶೋಭಾ ಅಗಡಿ ಇಳಿ ವಯಸ್ಸಿನಲ್ಲೂ ತುಂಬಾ ಉತ್ಸಾಹದಿಂದ ಮತದಾನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.ದಂಪತಿಗಳಿಂದ ಮತದಾನ:
ನಗರದ ಜಗದೀಶ್ವರಯ್ಯ ಹಿರೇಮಠ ಹಾಗೂ ಸುವರ್ಣ ಜೆ. ಹಿರೇಮಠ ಎಂಬ ದಂಪತಿ ತಾಪಂ ಕಚೇರಿಯಲ್ಲಿನ ಮತಗಟ್ಟೆ ಸಂಖ್ಯೆ 128 ರಲ್ಲಿ ಮತದಾನದ ಹಕ್ಕನ್ನು ಚಲಾಯಿಸಿದರು.ಗಂಗಾವತಿಯಲ್ಲಿ ಶಾಂತಿಯುತ ಮತದಾನ:ಪದವೀಧರರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ತಾಲೂಕಿನ ಮರಳಿ, ವೆಂಕಟಗಿರಿ, ಗಂಗಾವತಿ ನಗರದ ಮತಗಟ್ಟೆಯ ಮತದಾನವು ಶಾಂತಿಯುತವಾಗಿ ನಡೆಯಿತು.ಪದವೀಧರ ಕ್ಷೇತ್ರದ ಮತದಾರರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು ೪ ಮತಗಟ್ಟೆಗಳನ್ನು ತೆರೆಯಲಾಗಿತ್ತು. ೪ ಮತಗಟ್ಟೆಗಳಲ್ಲಿ ಕೂಡ ಬೆಳಗ್ಗೆ ೮ ಗಂಟೆಯಿಂದ ಮತದಾನ ಆರಂಭವಾಗಿದ್ದು, ಮತದಾರರು ಸರತಿ ಸಾಲಿನಲ್ಲಿ ನಿಂತುಕೊಂಡು ಮತದಾನ ಮಾಡಿದರು. ಸಂಜೆ ೬ ಗಂಟೆಯವರೆಗೂ ಮತದಾನ ನಡೆದಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ. ಗಂಗಾವತಿ ನಗರದಲ್ಲಿರುವ ಮತಗಟ್ಟೆ ಸಂಖ್ಯೆ ೧೨೦ರಲ್ಲಿ ೧೩೩೯ ಮತದಾರರಿದ್ದು, ಅದರಲ್ಲಿ ೧೦೧೫ ಜನ ಮತದಾನ ಮಾಡಿದರು. ೧೨೧ರ ಮತಗಟ್ಟೆಯಲ್ಲಿ ೭೯೨ ಮತದಾರರಿದ್ದು, ಅದರಲ್ಲಿ ೫೯೨ ಮತದಾರರು ಮತ ಚಲಾಯಿಸಿದರು. ಅದೇ ರೀತಿಯಲ್ಲಿ ವೆಂಕಟಗಿರಿ ಗ್ರಾಮದ ಮತಗಟ್ಟೆಯಲ್ಲಿ ೫೩೩ ಜನ ಮತದಾರರಿದ್ದು, ೪೨೬ ಜನ ಮಾತ್ರ ಮತದಾನ ಮಾಡಿದ್ದು, ಇನ್ನೂ ಮರಳಿ ಗ್ರಾಮದ ಮತಗಟ್ಟೆಯಲ್ಲಿ ೫೩೦ ಮತದಾರರಿದ್ದು, ೪೨೬ ಜನ ಮತದಾನ ಮಾಡಿದರು.