ಮತ ಹಾಕಲು ಈಶಾನ್ಯದ ಪದವೀಧರರು ಹರಸಾಹಸ ಮಾಡಲೇಬೇಕು

KannadaprabhaNewsNetwork | Updated : May 30 2024, 11:49 AM IST

ಸಾರಾಂಶ

ಈಶಾನ್ಯ ಪದವೀದರ ಮತಕ್ಷೇತ್ರದಿಂದ ಅಭ್ಯರ್ಥಿಯನ್ನ ಚುನಾಯಿಸಲು ಇದೇ ಜೂ.3ರಂದು ನಡೆಯಲಿರುವ ಮತದಾನದಲ್ಲಿ ಪದವೀಧರ ಮತದಾರರು ಮತ ಚಲಾವಣೆ ಮಾಡಲು ಬಾರಿ ಸಹಾಸ ಮಾಡುವ ಪ್ರಮೇಯ ಬಂದೊದಗಿದೆ.

ಶೇಷಮೂರ್ತಿ ಅವಧಾನಿ

 ಕಲಬುರಗಿ;  ಮೇಲ್ಮನೆಗೆ ಈಶಾನ್ಯ ಪದವೀದರ ಮತಕ್ಷೇತ್ರದಿಂದ ಅಭ್ಯರ್ಥಿಯನ್ನ ಚುನಾಯಿಸಲು ಇದೇ ಜೂ.3ರಂದು ನಡೆಯಲಿರುವ ಮತದಾನದಲ್ಲಿ ಪದವೀಧರ ಮತದಾರರು ಮತ ಚಲಾವಣೆ ಮಾಡಲು ಬಾರಿ ಸಹಾಸ ಮಾಡುವ ಪ್ರಮೇಯ ಬಂದೊದಗಿದೆ.

ಪದವಿಧದರ ಮತಕ್ಷೇತ್ರದ ಚುನಾವಣೆಗೆ ಬರೋಬ್ಬರಿ ನಾಲ್ಕು ದಿನ ಮಾತ್ರ ಬಾಕಿ ಇದೆ. ಚುನಾವಣೆ ಆಯೋಗವು ಪದವಿಧರ ಮತದಾರರಾಗಿ ಹೆಸರು ನೊಂದಾಯಿಸುವ ಸಮಯದಲ್ಲಿ ಅವರ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ ಎಲ್ಲವನ್ನು ಪಡೆದಿದೆ.

ಆದರೆ ಇಂದಿಗೂ ಮತದಾರರಿಗೆ ಅವರವರ ಮತಗಟ್ಟೆ ಸಂಖ್ಯೆ, ಕ್ರಮ ಸಂಖ್ಯೆ ಯಾವುದೂ ಗೊತ್ತಾಗಿಲ್ಲ, ಗೊತ್ತು ಮಾಡುವ ಸಂದೇಶಗಳು ಅವರಿಗೆ ಬಂದಿಲ್ಲ.

ಹಿಂದೆ ಹೆಸರು ನೋಂದಾವಣೆಯಾದ ತಕ್ಷಣ ಮೊಬೈಲ್ ಸಂದೇಶದಲ್ಲಿ ನೊಂದಾಯಿಸಲ್ಪಟ್ಟ ಮಾಹಿತಿ ನೀಡಿದ್ದಾರೆ‌, ಆದರೆ ಆಶ್ಚರ್ಯ ಎಂದರೆ ಇಂದಿನವರೆಗೆ ಈ ಕ್ಷಣದವರೆಗೆ ನೊಂದಾಯಿತ ಮತದಾರರಿಗೆ ಮಾಹಿತಿ ಪೊಸ್ಟ್ ಮೂಲಕ ಅಥವಾ ಅವರವರ ಮೊಬೈಲ್‌ಗೂ ರವಾನಿಸಿಲ್ಲ.

ಮತದಾರರು ಮತದಾನ ಮಾಡಬೇಕಾದ ಕೇಂದ್ರದ ಸಂಖ್ಯೆ, ಮತಗಟ್ಟೆ ಸಂಖ್ಯೆ ಕ್ರಮ ಸಂಖ್ಯೆ ಇತ್ಯಾದಿ ಮಾಹಿತಿ ಅರಿಯದೆ ಜೂ. 3 ರಂದು ಅದೆಲ್ಲೀಂತ ಹೋಗಿ ಮತ ಹಾಕೋದು ಎಂದು ಕೈಕಟ್ಟಿ ಕುಳಿತಿದ್ದಾರೆ.

ಮಾಹಿತಿ ತಿಳಿಸದಿದ್ದರೆ ಹೋಗಲಿ, ಇವೆಲ್ಲ ಮೇಲಿನ ಮಹತ್ವದ ಮಾಹಿತಿಗಳನ್ನು ಪಡೆವ ಲಿಂಕ್ ಕುರಿತು ಮೊಬೈಲ್‌ ಸಂದೇಶ, ಪ್ರಕಟಣೆ, ಜಾಹಿರಾತು ನೀಡಿಲ್ಲ. ಹಿಡಿಯಷ್ಟು ಜಾಗೃತ ಮತದಾರರು ತಾವಾಗಿ ತಮ್ಮ ವಿವರ ತಿಳಿದು ಕೊಂಡಿದ್ದಾರೆಯೇ ಹೊರತು ಉಳಿದವರು ಈ ವಿಚಾರದಲ್ಲಿ ಯಾವುದೇ ಮಾಹಿತಿ ಇರದೆ ಗೊಂದಲಕ್ಕೊಳಗಾಗಿದ್ದಾರೆ.

ಈಶಾನ್ಯ ಪದವೀದರ ಮತಕ್ಷೇತ್ರದಲ್ಲಿ ಮತದಾರರೆಂದು ನೋಂದಣಿ ಮಾಡಿಕೊಂಡಿರುವ ಹಿರಿಯರಾದ ಮಹಾದೇವಯ್ಯ ಕರದಳ್ಳಿ ಸೇರಿದಂತೆ ಅನೇಕರು ಕನ್ನಡಪ್ರಭ ಜೊತೆ ಮಾತನಡುತ್ತ ಇವೆಲ್ಲ ಅಪಸವ್ಯಗಳಿದ್ದರೆ ಮತದಾನ ಮಾಡಬೇಕೆಲ್ಲಿ? ಮತದಾನ ಪ್ರಮಾಣ ಹೆಚ್ಚಳ ಆಗೋದಾದರೂ ಹೇಗೆಂದು ಪ್ರಶ್ನಿಸಿದರು.

ಇವೆಲ್ಲದಕ್ಕೂ ಕಳಶವಿಟ್ಟಂತೆ ಮೇಲಾಗಿ ಮತದಾನ ಕೇಂದ್ರದ ಮತದಾರರ ಪಟ್ಟಿ ಗೊಂದಲಗಳ ಗೂಡಾಗಿದೆ. ಉದಾಹರಣೆಗೆ ಕಲಬುರಗಿ ನಗರದಲ್ಲಿರುವ ಜಯ ನಗರ ಮತದಾನ ಕೇಂದ್ರದ ಪಟ್ಟಿಯಲ್ಲಿ ಕಲಬುರ್ಗಿಯ ಸುಪರ್ ಮಾರ್ಕೆಟ, ಗಂಜ, ಇತ್ಯಾದಿ ಸೇರಿದಂತೆ ಹಲವು ಬಡಾವಣೆ ಮತದಾರರ ಹೆಸರು ಸೇರಿಸ ಲಾಗಿದೆ. ಮತದಾರರ ವಿಳಾಸ ತಪ್ಪಾಗಿ ಪ್ರಕಟಿಸಲಾಗಿದೆ!

ಈಶಾನ್ಯದ 7 ಜಿಲ್ಲೆಗಳ ವ್ಯಾಪ್ತಿಯಲ್ಲಿ ಎಲ್ಲ ಮತದಾನ ಕೇಂದ್ರಗಳ ಹಣೆ ಬರಹ ಹೀಗೆ ಆಗಿದೆ ಎಂಬುದು ತಾವು ಮಾಹಿತಿ ಕೋರಿದಾಗ ದೊರಕಿದ ಉತ್ತರವಾಗಿದೆ. ಅನೇಕರು ಈ ಬಗ್ಗೆ ಅಸಮಧಾನಿಯಾಗಿದ್ದಾರೆಂದು ಮಹಾೀದೇವಯ್ಯ ಹೇಳಿದ್ದಾರೆ.

ಇವೆಲ್ಲ ಕಾರಣಗಳಿಂದಾಗಿ ವಾಗಿದೆ. ಪರಿಣಾಮವಾಗಿ ಒಂದು ಮನೆಯ ಸದಸ್ಯರು ಎರಡು ಮತದಾನ ಕೇಂದ್ರ ದಲ್ಲಿ ಮತದಾನ ಮಾಡ ಬೇಕಾಗಿದೆ. ಮತದಾರನು ತನ್ನ ಹೆಸರು ಖಚಿತ ಪಡಿಸಿ ಕೊಳ್ಳಲು ಕಲಬುರ್ಗಿಯ 13 ಮತಕೇಂದ್ರ ಗಳಲ್ಲಿ ತನ್ನ ಹೆಸರು ಹುಡುಕ ಬೇಕಾದ ಅನಿವಾರ್ಯತೆ ಬಂದೊದಗಿದೆ‌!.

ಈ ರೀತಿ ತಪ್ಪು ವಿವರಗಳುಳ್ಳ ಮತದಾರ ಪಟ್ಟಿ ಸಿದ್ದಪಡಿಸಿದ ಅಧಿಕಾರಿಗಳ ವಿರುದ್ಧ ವಿಭಾಗಾಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕು. ವಾಸ್ತವಿಕ ಸತ್ಯ ಎಂದರೆ ಒಟ್ಟಿನಲ್ಲಿ ಮತದಾರರು ಮತ ಹಾಕಲು ಹರಸಾಹಸ ಮಾಡ ಬೇಕಾಗಿದೆ!

ಪ್ರಜಾಪ್ರಭುತ್ವದ ಬಗ್ಗೆ ಚುನಾವಣೆ ನಡೆಸುವವರೆ ಈ ರೀತಿ ನಿರ್ಲಕ್ಷ್ಯ ತೋರಿದರೆ ಹೇಗೆ?. ಆಡಳಿತ ಪಕ್ಷ , ವಿರೋಧ ಪಕ್ಷ ಎರಡೂ ಈ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದು ಪದವಿಧರ ಮತಕ್ಷೇತ್ರದ ಚುನಾವಣೆ ಮಹತ್ವದ್ದಲ್ಲ ಹೇಗೂ ಮತ ಚಲಾಯಿಸಿ ದವರಲ್ಲಿ ಬಹುಮತ ಪಡೆದು ಗೆಲ್ಲಬಹುದು ಎಂದು ಭಾವಿಸಿದಂತಿದೆ ಎಂದು ಮಹಾದೇವಯ್ಯ ಈಗಿನ ಗೊಂದಲಗಳಿಗೆ ಕೆಂಡಾಮಂಡಲರಾಗಿ ಹೇಳಿಕೆ ನೀಡಿದ್ದಾರೆ.

ಈ ಗೊಂದಲಗಳ ಬಗ್ಗೆ ಎಲ್ಲರೂ ಮೌನವಾಗಿದ್ದಾರೆ. ಚುನಾವಣೆ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಗಳು ಈ ಕುರಿತು ನಿಷ್ಕ್ರಿಯವಾಗಿ ಇರುವುದು ಇತ್ತ ಗಮನ ನೀಡದಿರುವುದು ಈ ಸಲದ ಚುನಾವಣೆ ವಿಶೇಷ. ಸಾರ್ವತ್ರಿಕ ಚುನಾವಣೆಗಳಲ್ಲಿ ಮಾಡುವಂತೆ ಕೇವಕ ಸಾರ್ವಜನಿಕ ಸಭೆ, ಸಂವಾದ ಏರ್ಪಡಿಸುವುದಕ್ಕೆ ಸೀಮಿತವಾಗಿದ್ದಾರೆ. ಅಷ್ಟೇ ಅಲ್ಲ ಪದವಿಧರ ಮತದಾರರು, ಎನ್‌ಜಿಓ ಸದಸ್ಯರು, ನೌಕರರ ಸಂಘಟನೆಗಳು ಸಹ ತಮ್ಮ ಮತದಾನದ ಹಕ್ಕು ಚಲಾಯಿಸಲು ಅಗತ್ಯ ಮಾಹಿತಿ ನೀಡುವ ಕುರಿತು ಹಕ್ಕೊತ್ತಾಯ ಮಾಡುತ್ತಿಲ್ಲ ‌ಎಂಬುದು ವಿಷಾದದ ಸಂಗತಿಯಾಗಿದೆ.

ಇಷ್ಟೆಲ್ಲ ದೋಷಗಳಿದ್ದರೂ ಯಾರಿಗಾಗಿ ಈ ಚುನಾವಣೆ: ಪಾರದರ್ಶಕತ್ವ ಕೊರತೆ ಕಾರಣ ಚುನಾವಣೆ ಪ್ರಕ್ರಿಯೆ ಸರಿಯಿಲ್ಲ. ಕರ್ನಾಟಕ ಸರ್ಕಾರ ಮತ್ತು ಚುನಾವಣಾ ಆಯೋಗ ನೊಂದಾಯಿತ ಮತದಾರರಿಗೆ ಅವರ ಮತದಾನ ಕೇಂದ್ರದ ಮಾಹಿತಿ, ಕ್ರಮ ಸಂಖ್ಯೆ ನೀಡಲು ಅಸಾಧ್ಯ, ಅಥವಾ ಅಸಮರ್ಥ ವಾಗಿ ಇದ್ದಲ್ಲಿ ಮತ ದಾರರಿಗೆ ಆ ಎಲ್ಲ ಮಾಹಿತಿ ಒದಗಿಸುವವರೆಗೆ ಮತದಾನ ದಿನಾಂಕ ಮೂಂದಡ ಬೇಕು ಎಂದು ಮಹಾದೇವಯ್ಯ ಕರದಳ್ಳಿ ಆಗ್ರಹಿಸಿದ್ದಾರೆ.

ಕರ್ನಾಟಕದ ಉಚ್ಚ ನ್ಯಾಯಾಲಯವು ಚುನಾವಣೆ ನಡೆಸುವಾಗಿನ ಈ ಲೋಪ ದೋಷ ಗಳನ್ನು ಸ್ವಯಂ ಪ್ರೇರಿತವಾಗಿ, ಗಂಭೀರವಾಗಿ ಪರಿಗಣಿಸಿ ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ನೋಂದಾಯಿತ ಮತ್ತು ಜಾಗೃತ ಮತದಾರರ ಪರವಾಗಿ ಈಶಾನ್ಯ ಪದವೀಧರ ಕ್ಷೇತ್ರದ ಜಾಗೃತ ಮತದಾರರಾಗಿರುವ ಮಹಾದೇವಯ್ಯ ಕರದಳ್ಳಿ ಒತ್ತಾಯಿಸಿದ್ದಾರೆ.

ಈಶಾನ್ಯ ಪದವೀಧರ ಚುನಾವಣೆಕಣದಲ್ಲಿ ಅಂತಿಮವಾಗಿ 1, 56, 623 ಮತದಾರರು ಮತದಾನಕ್ಕೆ ಅರ್ಹರಾಗಿದ್ದಾರೆ. 99,121 ಪುರುಷರು, 57,483 ಮಹಿಳೆಯರು, ಇತರೆ 19 ಸೇರಿ ಒಟ್ಟು 1,56,623 ಜನ ಮತದಾರರು ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ

ಮತದಾರರ ಪಟ್ಟಿಯನ್ನು https://www.rcgulbarga.gov.in ನಲ್ಲಿ ಪ್ರಕಟಿಸಿದ್ದು, ಮತದಾರರು ಇದನ್ನು ವೀಕ್ಷಿಸಬಹುದಾಗಿದೆ. ಈಶಾನ್ಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಭಾಗವಾಗಿ 01-11-2023 ಅರ್ಹತಾ ದಿನವನ್ನಾಗಿ ಅಂತಿಮ ಮತದಾರರರ ಪಟ್ಟಿಯನ್ನು ಕಳೆದ ಡಿಸೆಂಬರ್ 30 ರಂದು ಪ್ರಕಟಗೊಳಿಸಲಾಗಿತ್ತು. ಆಗ 95,184 ಪುರುಷರು, 54,980 ಮಹಿಳೆಯರು ಹಾಗೂ ಇತರೆ 20 ಸೇರಿ ಒಟ್ಟಾರೆ 1,50,184 ಜನ ಮತದಾರರಿದ್ದರು.

ತದನಂತರ ಪರಿಷ್ಕರಣೆ ಮತ್ತು ಇತ್ತೀಚೆಗೆ ಮೇ 6ರ ವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶ ನೀಡಿದ ಪರಿಣಾಮ ಪುರುಷ 3,937, ಮಹಿಳೆಯರು 2,503 ಸೇರ್ಪಡೆ ಹಾಗೂ ಇತರೆ-1 ಕಡಿತದೊಂದಿಗೆ ಅಂತಿಮವಾಗಿ ಒಟ್ಟು 6,439 ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಂಡಿದ್ದಾರೆ ಎಂದು ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ.

Share this article