ಕನ್ನಡಪ್ರಭ ವಾರ್ತೆ ವಿಜಯಪುರ:
ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ಬಡವರಿಗೆ ಒಂದೇ ಒಂದು ರೂಪಾಯಿ ಕೂಡ ಬಂದಿಲ್ಲ. ವಿಧವಾವೇತನ, ಅಂಗವಿಕಲರ ಮಾಶಾಸನ ಸೇರಿದಂತೆ ಎಂಟು ಕಾರ್ಯಕ್ರಮಗಳನ್ನು ನಾವು ಕೊಟ್ಟಿದ್ದೇವೆ. ಯೋಜನೆಗಳೆಲ್ಲ ತಮ್ಮದು ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ ಎಂದು ಕಾರ್ಮಿಕ ಸಚಿವ ಸಂತೊಷ ಲಾಡ ಕೇಂದ್ರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಅಧಿಕಾರದ ಅವಧಿಯಲ್ಲಿ ಬಡವರಿಗೆ ಸಹಾಯವಾಗಿಲ್ಲ, ಬದಲಾಗಿ ಹಲವು ಕಂಪನಿಗಳು ಕೋಟಿ ಕೋಟಿ ಲಾಭ ಮಾಡಿಕೊಂಡಿವೆ ಎಂದರು. ಉದಾಹರಣೆಗೆ ಫಸಲಬೀಮಾ ಯೋಜನೆಯಲ್ಲಿ ಇನ್ಸುರೆನ್ಸ್ ಕಂಪನಿಗಳು ಸಾವಿರಾರು ಕೋಟಿ ಲಾಭ ಮಾಡಿಕೊಂಡಿವೆ, ಆದರೆ ವಿಮೆ ಕಟ್ಟಿದ ರೈತರಿಗೆ ಇದರಿಂದ ಅನುಕೂಲ ಆಗಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಬಿಎಸ್‌ಎನ್‌ಎಲ್ ಹಾಗೂ ರೇಲ್ವೆಸ್ ಅನ್ನು ಪ್ರೈವೇಟಿಜೇಷನ್ ಮಾಡಲಾಗಿದೆ. ಸುಮಾರು 20 ಸೆಂಟ್ರಲ್ ಕಂಪನಿಗಳನ್ನು ಮುಚ್ಚಿಸಿರೋದು ಇವರ ಸಾಧನೆ. ಹಿಂದೆ ಡಾಲರ್ ಬೆಲೆ 59 ಇದ್ದಿದ್ದು, ಈಗ 86ಕ್ಕೆ ಬಂದಿದೆ, ಬಂಗಾರದ ಬೆಲೆ 27ಸಾವಿರದಿಂದ ಈಗ 75ಸಾವಿರಕ್ಕೆ ಬಂದಿದೆ, ಜಿಡಿಪಿ, ಜಿಎಸ್‌ಟಿ, ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು, ಅವರ ಹೇಳಿಕೊಳ್ಳುವ ಸಾಧನೆಗಳ ಬಗ್ಗೆ ಬಿಜೆಪಿ ಜೊತೆ ಡಿಬೇಟ್ ಮಾಡಬೇಕು. ಇದರ ಬಗ್ಗೆ ಚರ್ಚೆ ಮಾಡಬೇಕು, ಯಾಕೆ ಮಾಡಲ್ಲ ಎಂದು ಪ್ರಶ್ನಿಸಿದರು.
ಮೋದಿ ಅವರನ್ನು ವಿಶ್ವ ಗುರು ಅಂತಾರೆ, ಹಾಗಾದ್ರೆ ಜೆಡಿಎಸ್ ಜೊತೆ ಏಕೆ ಮೈತ್ರಿ ಮಾಡಿಕೊಂಡರು, ಯಾಕೆ ಜನಾರ್ಧನ ರೆಡ್ಡಿಯನ್ನು ಸೇರಿಸಿಕೊಂಡರು?. ಅಭಿವೃದ್ಧಿಯನ್ನೇ ಮಾಡದ ಅವರಿಗೆ ಸೋಲುವ ಭೀತಿ ಇದೆ, ಅದಕ್ಕೆ ಈ ರೀತಿ ಮಾಡುತ್ತಿದ್ದಾರೆ. ಮೋದಿ ಅವರು ವಿಶ್ವಗುರುವಾಗಿದ್ದರೆ ಪ್ರಚಾರ ಏಕೆ ಮಾಡಬೇಕಿತ್ತು ಎಂದರು.ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಯತ್ನಾಳ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಯತ್ನಾಳ್ ಸಾಹೇಬರು ಯುನಿವರ್ಸಲ್ ಗುರು ಇದ್ದ ಹಾಗೆ. ಅವರು ಹಾರಿಕೆ ಉತ್ತರ ಕೊಟ್ಟು ಹೋಗುತ್ತಾರೆ. ಸ್ವಾಮೀಜಿ ಪೇಮೆಂಟ್ ಪಡೆದಿದಾರೋ ಇಲ್ಲವೋ ನನಗೆ ಹೇಗೆ ಗೊತ್ತು? ಹಾಗೇನಾದರೂ ಇದ್ದರೇ ಯತ್ನಾಳ ಅವರೇ ಹೇಳಬೇಕು. ಯಾವ ನೋಟು ಕೊಟ್ಟಿದ್ದಾರೆ, ಎಷ್ಟು ಕೊಟ್ಟಿದ್ದಾರೆ ಎಂಬುದನ್ನು ಅವರನ್ನೇ ಕೇಳಬೇಕು. ಯತ್ನಾಳ್ ಅವರ ಐನ್‌ಸ್ಟಿನ್ ಥೀಯರಿ ನಮಗೆ ಗೊತ್ತಾಗಲ್ಲ, ಅವರನ್ನೆ ಕೇಳಿ ಎಂದು ಯತ್ನಾಳ ಕುರಿತು ವ್ಯಂಗ್ಯವಾಡಿದರು.ಧಾರವಾಡದಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಗೊತ್ತಿಲ್ಲ. ಎರಡೂ ಕಡೆ ಟಫ್ ಫೈಟ್ ಇದೆ. ಅನಾಲೈಸಿಸ್ ಬಳಿಕವೇಲೆಲ್ಲ ಗೊತ್ತಾಗಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಕಾಂತಾ ನಾಯಕ, ಹಮೀದ ಮುಶ್ರಿಫ್ ಉಪಸ್ಥಿತರಿದ್ದರು.ಬಾಕ್ಸ್
ವಿಜಯೇಂದ್ರ ಹೇಳಿಕೆಗೆ ಸಚಿವ ಲಾಡ ಗರಂನೇಹಾ ಹಾಗೂ ಆರೋಪಿ ಫೋಟೊ ಬಿಡುಗಡೆ ಹಿಂದೆ ಕಾಂಗ್ರೆಸ್ ಕೈವಾಡ ಇದೆಯೆಂದು ವಿಜಯೇಂದ್ರ ಹೇಳಿಕೆಗೆ ಗರಂ ಆದ ಸಂತೋಷ ಲಾಡ್, ವಿಜಯೇಂದ್ರ ಚುನಾವಣೆ ಬಂದಿದೆ ಎಂದು ಏನೇನೋ ಹೇಳಬೇಡಿ. ಅದರಿಂದ ಕಾಂಗ್ರೆಸ್‌ಗೆ ಏನು ಲಾಭವಿದೆ. ಯಾವುದೇ ಒಂದು ಸರ್ಕಾರ ಫೋಟೋ ಬಿಡುಗಡೆ ಮಾಡುತ್ತೇನ್ರಿ ಎಂದು ಹರಿಹಾಯ್ದರು.
ಹುಬ್ಬಳಿಯ ನೇಹಾ ಹತ್ಯೆ ಪ್ರಕರಣದಲ್ಲಿ ಆರೋಪಿಯ ಅರೆಸ್ಟ್ ಆಗಿದೆ, ಆತನನ್ನು ಜೈಲಿಗೆ ಕಳಿಸಿದಾರೆ. ರಾಜಕೀಯ ಲಾಭಕ್ಕಾಗಿ ಸುಮ್ಮಸುಮ್ಮನೇ ಬಿಜೆಪಿಯವರು ಅಲ್ಲಿಗೆ ಹೋಗಿ ಅಲಿಗೇಷನ್ ಮಾಡುತ್ತಾರೆ. ಇದೇ ರೀತಿ ಮಂಗಳೂರಲ್ಲಿಯೂ ಆಗಿದೆ, ಅಲ್ಲಿಗೆ ಯಾಕೆ ಹೋಗಲ್ಲ. ನಾನು ಹಿಂದೂ -ಮುಸ್ಲಿಂ ಎಂದು ನೋಡಲ್ಲ ಕೊಲೆ ಕೊಲೆಯೇ, ಅನ್ಯಾಯ ಅನ್ಯಾಯವೇ, ಎಲ್ಲ ಘಟನೆಗಳನ್ನು ಸಮನಾಗಿ ನೋಡುತ್ತೇನೆ. ಆರೋಪಿಗೆ ಏನು ಶಿಕ್ಷೆ ಆಗಬೇಕೋ ಅದು ಅವನಿಗೆ ಆಗಿಯೇ ಆಗುತ್ತದೆ. ಎನ್‌ಕೌಂಟರ್ ಮಾಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಎನಕೌಂಟರ್ ಮಾಡಬೇಕು ಎಂಬ ಕಾನೂನು ಮಾಡಿ, ಆವಾಗ ಎನ್‌ಕೌಂಟರ್ ಮಾಡಬಹುದು. ಅದನ್ನು ಬಿಟ್ಟು ಬಿಜೆಪಿಯವರು ಇದರಲ್ಲಿ ರಾಜಕೀಯ ಮಾಡುತ್ತಿದ್ದು, ಮುಸ್ಲಿಂ ಯುವಕ ಕೊಲೆ ಮಾಡಿದಾನೆ ಎಂದು ಅಲ್ಲಿಗೆ ಹೋಗುತ್ತಿದ್ದಾರೆ. ಅದೇ ಬೇರೆ ಹಿಂದುವಿನಿಂದ ಹಿಂದುವಿನ ಕೊಲೆ ಆದವರ ಮನೆಗೆ ಯಾಕೆ ಹೋಗಲ್ಲ ಎಂದು ಪ್ರಶ್ನಿಸಿದ್ದಾರೆ.ಕೋಟ್ನೇಹಾ ಮನೆಗೆ ಬಂದು ಯತ್ನಾಳ ಮಾತನಾಡಿದ್ದಾರೆ. ಅವರು ಮೊದಲು ಗುಜರಾತ್‌ಗೆ ಹೋಗಲಿ, ಅಲ್ಲಿ ದಿನಕ್ಕೆ 6 ರೇಪ್‌ಗಳಾಗುತ್ತಿವೆ ಎಂಬ ವರದಿ ಇದೆ. 2022 ಸಾಲಿನ ಎನ್‌ಸಿಆರ್‌ಬಿ ರಿಪೋರ್ಟ್ ಪ್ರಕಾರ ದೇಶದಲ್ಲಿ 13.30 ಲಕ್ಷ ಮಹಿಳೆಯರು ಕಾಣೆಯಾಗಿದ್ದಾರೆ, ಅವುಗಳ ಬಗ್ಗೆ ಯತ್ನಾಳ ಮಾತಾಡ್ತಾರಾ?. ಮೋದಿ ಅವರು ತಮ್ಮ ಫೋಟೊ ಪ್ರಚಾರಕ್ಕಾಗಿ ಸರ್ಕಾರದ ಆರೂವರೆ ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಪ್ರತಿ ರಾಜ್ಯ ಚುನಾವಣೆಗೆ 30ರಿಂದ 40ಬಾರಿ ಬರುತ್ತಾರೆ. ರಾಹುಲ ಗಾಂಧಿ ಅವರ ಇಮೇಜ್ ಡ್ಯಾಮೇಜ್ ಮಾಡಲು 20 ಸಾವಿರ ಜನ ಕೆಲಸ ಮಾಡುತ್ತಿದ್ದಾರೆ.
ಸಂತೋಷ ಲಾಡ್, ಕಾರ್ಮಿಕ ಸಚಿವ.