ಬರಪೀಡಿತ ಪಟ್ಟಿಯಲ್ಲಿ ಜಿಲ್ಲೆಯ ಒಂದೂ ತಾಲೂಕು ಸೇರಿಲ್ಲ!

KannadaprabhaNewsNetwork |  
Published : Aug 28, 2026, 03:30 AM IST
ಫೋಟೋ- ಗೊಬ್ಬೂರ ಟ್ಯಾಂಕ್‌ಮಳೆ ಇಲ್ಲದೆ ಸಂಪೂರ್ಣ ಬರಿದಾಗಿರುವ ಗೊಬ್ಬೂರ ಕರೆಯ ನೋಟ. ಜಿಲ್ಲೆಯ 170 ಕೆರೆಗಳಲ್ಲಿ 150 ಕೆರೆಗಳು ಸಂಪೂರ್ಣ ಬತ್ತಿ ಹೋಗಿವೆ. | Kannada Prabha

ಸಾರಾಂಶ

Not a single taluk in the district is included in the drought-affected list!

-ರೈತ ಸಮೂಹಕ್ಕೆ ಆಘಾತ । ತೀವ್ರ ಮಳೆ ಕೊರತೆ ಎದುರಿಸಿದರೂ ಕಲಬುರಗಿ ಜಿಲ್ಲೆಯ ಯಾವ ತಾಲೂಕುಗಳ ಹೆಸರು ಮೊದಲ ಪಟ್ಟಿಯಲ್ಲಿಲ್ಲ ಏಕೆ?

--ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ರಾಜ್ಯದಲ್ಲಿ ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ, ಸರ್ಕಾರ ಮೊದಲ ಹಂತದಲ್ಲಿ ಬರ ಪೀಡಿತ ಎಂದು ಅಧಿಕೃತವಾಗಿ ಘೋಷಿಸಿರುವ 101 ತಾಲೂಕು ಪಟ್ಟಿಯಲ್ಲಿ ಕಲಬುರಗಿ ಜಿಲ್ಲೆಯ ಒಂದೂ ತಾಲೂಕು ಸ್ಥಾನ ಪಡೆಯದೆ ಇರೋದು ರೈತ ಸಮೂಹಕ್ಕೆ ಆಘಾತ ಉಂಟು ಮಾಡಿದೆ.

ಜಿಲ್ಲಾದ್ಯಂತ ಕಳೆದ 1 ತಿಂಗಳಿಂದ ರಣ ಬಿಸಿಲು ತನ್ನ ಪ್ರತಾಪ ತೋರಿಸುತ್ತಿದೆ, ನೀರಿನ ಬವಣೆ ಕಾಡಲಾರಂಭಿಸಿದರೂ ಆ. 12 ರಂದು ಪ್ರಟಗೊಂಡಿರುವ ಬರ ಪೀಡಿತ ತಾಲೂಕುಗಳ ಮೊದಲ ಪಟ್ಟಿಯಲ್ಲಿ ಜಿಲ್ಲೆಯ ಒಂದೂ ತಾಲೂಕು ಕಾಣದಿರೋದು ರೈತರಲ್ಲಿ ಆತಂಕ ಹುಟ್ಟು ಹಾಕಿದೆ. ಅಧಿಕೃತವಾಗಿ ಬರ ಪೀಡಿತ ತಾಲೂಕು ಎಂದು ಘೋಷಣೆಯಾಗದೆ ಇದ್ದಲ್ಲಿ ತಮಗೆ ಯಾವುದೇ ಸವಲತ್ತು ದೊರಕೋದು ಅಷ್ಟಕ್ಕಷ್ಟೆ ಎಂದು ಮಳೆಯ ಕೊರತೆಯಿಂದ ಬಸವಳಿದಿರುವ ರೈತರು ಕಂಗಾಲಾಗಿದ್ದಾರೆ.

ತಾಲೂಕುಗಳ ಹೆಸರೇ ಇಲ್ಲ: ಕಲಬುರಗಿ ಜಿಲ್ಲೆಯ ಆಳಂದ, ಅಫಜಲ್ಪುರ, ಚಿಂಚೋಳಿ, ಚಿತ್ತಾಪೂರ, ಸೇಡಂ, ಕಾಳಗಿ, ಶಹಾಬಾದ್‌, ಕಮಲಾಪೂರ, ಕಲಬುರಗಿ, ಜೇವರ್ಗಿ ಸೇರಿದಂತೆ ಯಾವ ತಾಲೂಕೂ ಬರ ಪೀಡಿತವೆಂದು ಸರ್ಕಾರ ಘೋಷಿಸಿದ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಈ ಬೆಳ‍ವಣಿಗೆ ರೈತರ ಪಾಲಿಗೆ ಆಘಾತ ನೀಡಿದೆ.

ಭಾರತ ಸರ್ಕಾರದ ಬರಗಾಲ ಘೋಷಣೆ ನಿಯಮ- 2020 ಅನುಸಾರ ಈ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಮಾನದಂಡಗಳಡಿ ತಾಲೂಕು ಒಳಗೊಳ್ಳದೆ ಇರಲು ಸಾಧ್ಯವೆ? ಮಳೆಯೇ ಇಲ್ಲದ ಈ ಜಿಲ್ಲೆಯಲ್ಲಿ ಬರಗಾಲ ಮೊದಲು ಘೋಷಣೆಯಾಗಬೇಕಿತ್ತು. ಅದು ಬಿಟ್ಟು ಈ ರೀತಿ ಬೇಕಾಬಿಟ್ಟಿತನ ತೋರಿದರೆ ಹೇಗೆಂದು ರೈತರು ಕಂಗಾಲಾಗಿದ್ದಾರೆ.

ಭಾರತ ಸರ್ಕಾರಾದ ಡ್ರಾಟ್‌ ಮ್ಯಾನುವಲ್‌ ಪ್ರಕಾರ ಮಳೆ ದಿನಗಳು ಒಣ ಹವೆ ಸಂಗತಿಗಳನ್ನೇ ಮಾನದಂಡವಾಗಿಟ್ಟುಕೊಂಡು ಬರಗಾಲ ನಿರ್ಧರಿಸಲಾಗುತ್ತದೆ. ಮಳೆ ದಿನ, ಒಣಹವೆ ಕಲಬುರಗಿಯ ಎಲ್ಲಾ ತಾಲೂಕುಗಳನ್ನು ಕಾಡುತ್ತಿದ್ದರೂ ಅದ್ಯಾಕೆ ಮೊದಲ ಪಟ್ಟಿಯಲ್ಲಿ ಜಿಲ್ಲೆಗಳು ಕೈಬಿಟ್ಟು ಹೋದವು ಎಂಬುದಕ್ಕೆ ರಾಜ್ಯ ಸರ್ಕಾರವೇ ಉತ್ತರಿಸಬೇಕಷ್ಟೆ.

ಕಲುರಗಿಯಲ್ಲಿ ಕಳೆದ 3 ತಿಂಗಳಲ್ಲಿ ಮಳೆಯೇ ಬಂದಿಲ್ಲ. ಕೆಲವು ತಾಲೂಕುಗಳಲ್ಲಂತೂ ನಾಲ್ಕಾರು ದಿನ ಬಿಟ್ರೆ ಮಳೆ ಕಂಡಿಲ್ಲ. ರೈತರು ಮುಂಗಾರು ಬಿತ್ತಿ ಹರಗಿ ಹಿಂಗಾರು ಬಿತ್ತಿದ್ದಾರೆ. ಈಗ ತೊಗರಿ ಸಹ ಹರಗಿ ಮತ್ತೊಂದು ಬೆಳೆ ಬಿತ್ತೋಣವೆ? ಮಳೆ ಬರುವುದೆ? ಎಂದು ಕಾಯುತ್ತಿದ್ದಾರೆ. ಈ ರೀತಿಯಲ್ಲಿ ಭೀಕರ ಬರಗಾಲದಲ್ಲಿ ರೈತರು ಸಿಲುಕಿ ಒದ್ದಾಡುತ್ತಿರೋವಾಗ ಡ್ರಾಟ್‌ ಮ್ಯಾನುವಲ್‌, ಅಲ್ಲಿನ ಮಾನದಂಡಗಳು ಯಾವ ಸೀಮೆಯ ಲೆಕ್ಕ? ಎಂಬ ಪ್ರಶ್ನೆ ರೈತರು ಕೇಳುತ್ತಿದ್ದಾರೆ......ಬಾಕ್ಸ್‌......

ಬರ ಪರಿಸ್ಥಿತಿ, ಮೊದಲ ಹಂತದಲ್ಲಿ 101 ತಾಲೂಕು ಬರಪೀಡಿತ

- ಮೊದಲ ಪಟ್ಟಿಯಲ್ಲಿ ಕಲಬುರಗಿಯ ಒಂದೂ ತಾಲೂಕು ಇಲ್ಲ

- ಬರಗಾಲದ ಮೊದಲ ಪಟ್ಟಿಯಲ್ಲಿ ಯಾಕಿಲ್ಲ ನಮ್ಮ ತಾಲೂಕುಗಳು?

- ಅಂತರ್ಜಲ ಮಟ್ಟದಲ್ಲಿ ಕುಸಿತ ಕಂಡರೂ ಕೇಳೋರಿಲ್ಲ ಗೋಳು

- ಮೊದಲ ಹಂತದಲ್ಲಿ 89 ತಾಲೂಕು ತೀವ್ರ ಬರಪೀಡಿತ

- 12 ತಾಲೂಕು ಸಾಧಾರಣ ಬರಪೀಡಿತ, 101 ತಾಲೂಕು ಪಟ್ಟಿ

------------

........ಬಾಕ್ಸ್‌.....

- ರಾಯಚೂರಿನ 7 ತಾಲೂಕುಗಳಲ್ಲಿ 5 ಬರ ಪೀಡಿತ, ಮಸ್ಕಿ ಭೀಕರ ಬರ ಪೀಡಿತ

- ಬೀದರ್‌ನ 8 ತಾಲೂಕುಗಳಲ್ಲಿ 4 ಬರ ಪೀಡಿತ

- ವಿಜಯ ನಗರ ಜಿಲ್ಲೆಯ 6 ತಾಲೂಕುಗಳಲ್ಲಿ 4 ಬರ ಪೀಡಿತ

- ಕೊಪ್ಪಳದ 7 ತಾಲೂಕುಗಳಲ್ಲಿ 3 ಬರ ಪೀಡಿತ, ಗಂಗಾವತಿ ಭೀಕರ ಬರ ಪೀಡಿತ

- ಯಾದಗಿರಿ 6 ತಾಲೂಕುಗಳಲ್ಲಿ ಶಹಾಪೂರ ಬರ ಪೀಡಿತ

- ಬಳ್ಳಾರಿಯ 5 ತಾಲೂಕುಗಳಲ್ಲಿ 4 ಬರ ಪೀಡಿತ

-ರಾಜ್ಯದ 190 ತಾಲೂಕು ಪೈಕಿ 13 ತಾಲೂಕುಲ್ಲಿ ಭೀಕರ ಮಳೆ ಕೊರತೆ ದಾಖಲಿಸಿ

101 ತಾಲೂಕುಗಳ ಪಟ್ಟಿ ಬಿಡುಗಡೆ.

ಫೋಟೋ- ಗೊಬ್ಬೂರ ಟ್ಯಾಂಕ್‌

ಮಳೆ ಇಲ್ಲದೆ ಸಂಪೂರ್ಣ ಬರಿದಾಗಿರುವ ಗೊಬ್ಬೂರ ಕರೆ. ಜಿಲ್ಲೆಯ 170 ಕೆರೆಗಳಲ್ಲಿ 150 ಕೆರೆಗಳು ಸಂಪೂರ್ಣ ಬತ್ತಿ ಹೋಗಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಂಧಿ ಮಾರ್ಗ ಬಿಟ್ಟು, ಭಗತ್ ಮಾದರಿ ಹೋರಾಟದ ಎಚ್ಚರಿಕೆ
ಭದ್ರಾ ಮೇಲ್ದಂಡೆ ನೀರು ಆದೇಶ ಹಿಂಪಡೆಗೆ ತಾಕೀತು