ಸಮಾಜ ಸೇವೆ ಗುಣ ಎಲ್ಲರಲ್ಲೂ ಇರುವುದಿಲ್ಲ- ಡಾ. ಶರೀಫ ಮಾಕಪ್ಪನವರ

KannadaprabhaNewsNetwork |  
Published : Jun 21, 2026, 02:30 AM IST
ಪೊಟೋ ಪೈಲ್ ನೇಮ್ ೨೦ಎಸ್‌ಜಿವಿ೨ ತಾಲೂಕಿನ ಹುಲಗೂರ ಗ್ರಾಮದಲ್ಲಿ ತಾಲೂಕಾ ಚಲವಾದಿ ಮಹಾಸಭಾ ಖಜಾಂಚಿ ಹುಲಗೂರ್ ಗ್ರಾಮದ ಯುವ ಮುಖಂಡರು ಆದ ಹನಮಂತಪ್ಪ(ದೇವು) ಕಾಳಿ ಅವರ ವತಿಯಿಂದ ಖಾದರಲಿಂಗ ಪ್ರೌಢ ಶಾಲೆ ಹಾಗೂ ಉರ್ದು ಪ್ರಾಥಮಿಕ ಶಾಲೆಗಳಿಗಳ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಲೇಖನ ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಡಾ. ಶರೀಫ ಮಾಕಪ್ಪನವರ  ಮಾತನಾಡುತ್ತಿರುವದು,೨೦ಎಸ್‌ಜಿವಿ೨-೧ ತಾಲೂಕಿನ ಹುಲಗೂರ ಗ್ರಾಮದಲ್ಲಿ ತಾಲೂಕಾ ಚಲವಾದಿ ಮಹಾಸಭಾ ಖಜಾಂಚಿ ಹುಲಗೂರ್ ಗ್ರಾಮದ ಯುವ ಮುಖಂಡರು ಆದ ಹನಮಂತಪ್ಪ(ದೇವು) ಕಾಳಿ ಅವರ ವತಿಯಿಂದ ಖಾದರಲಿಂಗ ಪ್ರೌಢ ಶಾಲೆ ಹಾಗೂ ಉರ್ದು ಪ್ರಾಥಮಿಕ ಶಾಲೆಗಳಿಗಳ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಲೇಖನ ಸಾಮಗ್ರಿ ವಿತರಣಾ ಕಾರ್ಯಕ್ರಮ | Kannada Prabha

ಸಾರಾಂಶ

ಸಮಾಜ ಸೇವೆ ಮಾಡಬೇಕು ಎನ್ನುವ ಮನಸ್ಸು ಕೆಲವೇ ಕೆಲವು ಜನರಲ್ಲಿ ಇರುತ್ತದೆ. ಅದು ಎಲ್ಲರಿಗೂ ಬರುವುದಿಲ್ಲ ಎಂದು ಡಾ. ಶರೀಫ ಮಾಕಪ್ಪನವರ ಹೇಳಿದರು.

ಶಿಗ್ಗಾಂವಿ: ಸಮಾಜ ಸೇವೆ ಮಾಡಬೇಕು ಎನ್ನುವ ಮನಸ್ಸು ಕೆಲವೇ ಕೆಲವು ಜನರಲ್ಲಿ ಇರುತ್ತದೆ. ಅದು ಎಲ್ಲರಿಗೂ ಬರುವುದಿಲ್ಲ ಎಂದು ಡಾ. ಶರೀಫ ಮಾಕಪ್ಪನವರ ಹೇಳಿದರು.

ತಾಲೂಕಿನ ಹುಲಗೂರ ಗ್ರಾಮದಲ್ಲಿ ತಾಲೂಕು ಚಲವಾದಿ ಮಹಾಸಭಾ ಖಜಾಂಚಿ ಹನಮಂತಪ್ಪ(ದೇವು) ಕಾಳಿ ಅವರ ವತಿಯಿಂದ ಖಾದರಲಿಂಗ ಪ್ರೌಢಶಾಲೆ ಹಾಗೂ ಉರ್ದು ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಲೇಖನ ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬಾಲ್ಯದ ದಿನಗಳಲ್ಲಿ ವಿದ್ಯಾಭ್ಯಾಸ ಮಾಡಲು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿ ಕಷ್ಟ ಪಟ್ಟು ಸಾಧನೆ ಮಾಡಿದರು. ಈ ದೇಶಕ್ಕೆ ಸಂವಿಧಾನ ರಚನೆ ಮಾಡಿದರು. ಅವರ ಸಾಧನೆಯ ಹಾದಿ ಮತ್ತು ಆದರ್ಶ ಗುಣಗಳನ್ನು ಇಂದಿನ ಮಕ್ಕಳು ಹಾಗೂ ಯುವಕರು ಅಳವಡಿಸಿಕೊಳ್ಳಬೇಕು ಎಂದರು.

ಇಂದು ಸಮಾಜದಲ್ಲಿ ಬಡವರು, ನಿರ್ಗತಿಕರು ಸಾಕಷ್ಟು ಸಮಸ್ಯೆಗಳಿಂದ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಸಮಸ್ಯೆ ಅನುಭವಿಸುತ್ತಿದ್ದಾರೆ ಹಾಗಾಗಿ ಇಂತಹ ಮಕ್ಕಳಿಗೆ ಬಡವರಿಗೆ ಅನುಕೂಲ ಆಗಬೇಕೆಂಬ ಉದ್ದೇಶದಿಂದ ಹನಮಂತಪ್ಪ ಕಾಳೆ ಅವರು ಪ್ರತಿ ವರ್ಷ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಪ್ರತಿ ವರ್ಷ ಹುಲಗೂರ್ ಗ್ರಾಮದ ಎಲ್ಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ಲೇಖನ ಸಾಮಗ್ರಿಗಳನ್ನು ನೀಡುತ್ತಾ ಬಂದಿದ್ದಾರೆ. ಇಂದು ಶಾಲೆಗಳು ಪುನರಾರಂಭವಾಗಿದ್ದರಿಂದ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ನು ವಿತರಣೆ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳು ಎಂದರು.

ಚಲವಾದಿ ಮಹಾಸಭಾ ತಾಲೂಕು ಅಧ್ಯಕ್ಷರಾದ ಪ್ರಮೋದ್ ಚಲವಾದಿ ಮಾತನಾಡಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಅವಕಾಶ ನೀಡಿದ್ದಾರೆ. ಅವರು ಇಂಥಹ ಅವಕಾಶ ನೀಡದೆ ಹೋಗಿದ್ದಾರೆ ನಾವು ಇಂದು ಇಲ್ಲಿ ಸ್ವತಂತ್ರವಾಗಿ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ, ಅಂತಹ ಪುಣ್ಯಾತ್ಮನ ಕೆಲಸವನ್ನು ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಣೆ ಮಾಡುವುದರ ಮೂಲಕ ಹನಮಂತಪ್ಪ ಕಾಳೆ ಅವರು ಮಹನೀಯರನ್ನು ನೆನೆಯುವ ಕೆಲಸ ಮಾಡುತ್ತಿರುವದು ಶ್ಲಾಘನೀಯ ಎಂದರು.

ಶಾಲೆಯ ನಿರ್ದೇಶಕರಾದ ಚಂದ್ರು ಆಚೆಬಣ್ಣದ ಹಾಗೂ ಮುಖ್ಯೋಪಾಧ್ಯಾಯ ವಿ.ಬಿ. ಕುರುಬರ ಸೇರಿದಂತೆ ಹಲವರು ಮಾತನಾಡಿದರು.

ಈ ಸಂದರ್ಭದಲ್ಲಿ ಹುಲಗೂರಿನ ಮುಖಂಡರಾದ ಗೊಯ್ಯಪ್ಪ ಚಲವಾದಿ, ಪ್ರೀತಮ್ ಅರಳಿಕಟ್ಟಿ, ಶ್ರೀಕಾಂತ್ ಹೊನ್ನಳ್ಳಿ, ಲಿಂಗರಾಜ್ ಬೋರಣ್ಣವರ, ಲಕ್ಷ್ಮಣ ಬಾಲಪ್ಪನವರ, ಗಿರೀಶ ಮರಿಯಮ್ಮನವರ, ಕರೆಪ್ಪ ಬಾಲಪ್ಪನವರ, ಹಾಗೂ ಶಾಲೆಯ ಶಿಕ್ಷಕರು ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಪಯೋಗ ಮಾಡದೆ ಪಾಳಬಿದ್ದ ಶೌಚಾಲಯಗಳು
ಭಟ್ಕಳ ಜಲದುರಂತದ ಸಂತ್ರಸ್ತ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ