ಮಾತನಾಡುವವರೆಲ್ಲ ಕೆಲಸ ಮಾಡಲ್ಲ: ಸಚಿವ ಸಿಆರ್‌ಎಸ್

KannadaprabhaNewsNetwork |  
Published : Nov 19, 2026, 01:45 AM IST
18ಕೆಎಂಎನ್ ಡಿ13 | Kannada Prabha

ಸಾರಾಂಶ

ಮಾತನಾಡುವವರೆಲ್ಲ ಕೆಲಸ ಮಾಡುವುದಕ್ಕೆ ಆಗಲ್ಲ. ಅಳಿಸಂದ್ರ ಗ್ರಾಮದ ಅಭಿವೃದ್ಧಿಗೆ ನಾನು ಬಹಳಷ್ಟು ಕೆಲಸ ಮಾಡಿದ್ದೇನೆ. ಕೆಲಸ ಮಾಡಿರುವವರನ್ನು ನೆನಪಿಸಿಕೊಳ್ಳಬೇಕು. ಗ್ರಾಮಕ್ಕೆ ಬಂದು ಮಾತನಾಡುವವರು ಏನೂ ಮಾಡಿಲ್ಲ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮಾತನಾಡುವವರೆಲ್ಲ ಕೆಲಸ ಮಾಡಲ್ಲ, ನಾನು ಮಾಡಿರುವ ಅಭಿವೃದ್ಧಿ ಕೆಲಸಗಳೆ ಜನರ ಬಾಯಲ್ಲಿ ಮಾತನಾಡುತ್ತಿವೆಯೇ ವಿನಹಃ ನಾನೇ ಹೇಳಿಕೊಳ್ಳುವ ಅಗತ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ತಾಲೂಕಿನ ಅಳೀಸಂದ್ರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಕೋಡಿಮಾರಮ್ಮ ದೇವಾಲಯದ ಲೋಕಾರ್ಪಣೆ ವೇಳೆ ಮಾತನಾಡಿದ ಅವರು, ಗ್ರಾಮದ ಜನರು ರಾಜಕೀಯ ಹಾಗೂ ಶೈಕ್ಷಣಿಕವಾಗಿ ಮುಂದುವರೆದಿದ್ದಾರೆ ಎಂದರು.

ಜನಕ್ಕೆ ನಿರಂತರವಾಗಿ ಒಳ್ಳೆಯದಾದರೆ ಸುಮ್ಮನಿರಲ್ಲ ಎಂದು ಪ್ರಕೃತಿ ಹಾಗೂ ದೇವರು ಆಗಿದ್ದಾಂಗೆ ಕಷ್ಟ-ಸುಖಗಳೆರಡನ್ನು ನೀಡುತ್ತವೆ. ಅದರಂತೆ ಈಗ ನಮಗೆ ಬರಗಾಲ ಎದುರಾಗಿದೆ. ಎಲ್ಲವೂ ಒಳ್ಳೆಯದೆ ಆಗುತ್ತಿದ್ದರೆ ಜನರನ್ನು ಹಿಡಿದು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ದೇವರು ಎಂಬುದು ನಮ್ಮ ನಂಬಿಕೆ ಮತ್ತು ಭಕ್ತಿಯ ಮೇಲಿದೆಯೇ ಹೊರತು ಬೇರೆ ಯಾವುದರಲ್ಲೂ ಇರುವುದಿಲ್ಲ ಎಂದರು.

ಮಾತನಾಡುವವರೆಲ್ಲ ಕೆಲಸ ಮಾಡುವುದಕ್ಕೆ ಆಗಲ್ಲ. ಅಳಿಸಂದ್ರ ಗ್ರಾಮದ ಅಭಿವೃದ್ಧಿಗೆ ನಾನು ಬಹಳಷ್ಟು ಕೆಲಸ ಮಾಡಿದ್ದೇನೆ. ಕೆಲಸ ಮಾಡಿರುವವರನ್ನು ನೆನಪಿಸಿಕೊಳ್ಳಬೇಕು. ಗ್ರಾಮಕ್ಕೆ ಬಂದು ಮಾತನಾಡುವವರು ಏನೂ ಮಾಡಿಲ್ಲ ಎಂದು ತಿರುಗೇಟು ನೀಡಿದರು.

ರಾಜ್ಯ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಮನೆಗೂ ಅನುಕೂಲ ಮಾಡಿಕೊಡಲಾಗುತ್ತಿದೆ. ಇದನ್ನು ಬೇರೆಯವರು ನಾವು ಕೊಟ್ಟಿದ್ದೊ ಎಂದು ಹೇಳಲು ಸಾಧ್ಯವಿಲ್ಲ. ಮುಂದೆ ನಾವು ಅವರಿಗಿಂತ ಹೆಚ್ಚು ಕೊಡುತ್ತೇವೆ ಎಂದು ಈಗ ಬೇರೆಯವರು ಹೇಳಿಕೊಳ್ಳಬಹುದು. ಆದರೆ, ನಾವು ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ. ತಾಲೂಕು ಹಾಗೂ ಜಿಲ್ಲೆಯ ಅಭಿವೃದ್ದಿಗೆ ನಿಮ್ಮೆಲ್ಲರ ಸಹಕಾರ ಇರಲಿ ಎಂದರು.

ಇದೇ ವೇಳೆ ಗ್ರಾಮದಲ್ಲಿ ಅಳವಡಿಸಲಾದ ಹೈಮಾಸ್ಟ್ ಬೀದಿ ದೀಪಕ್ಕೆ ಸಚಿವರು ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ: ಕಿಶೋರ ಯಕ್ಷಗಾನ ಸಂಭ್ರಮಕ್ಕೆ ಚಾಲನೆ
ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಿ