ಗ್ಯಾರಂಟಿ ಉಳ್ಳವರಿಗಲ್ಲ, ಹಸಿದವರಿಗೆ: ಶಾಸಕ ಎಚ್‌.ಡಿ.ತಮ್ಮಯ್ಯ

KannadaprabhaNewsNetwork |  
Published : Mar 02, 2026, 01:15 AM IST
ಸಸಸ | Kannada Prabha

ಸಾರಾಂಶ

ಚಿಕ್ಕಮಗಳೂರುರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಉಳ್ಳವರಿಗೆ, ಶ್ರೀಮಂತರಿಗಲ್ಲ, ಬಡವರಿಗೆ, ಹಸಿದವರಿಗಾಗಿ ಜಾರಿಗೊಳಿಸಲಾಗಿದೆ ಎಂದು ಶಾಸಕ ಎಚ್‌.ಡಿ.ತಮ್ಮಯ್ಯ ಹೇಳಿದರು.

ಬೆಳವಾಡಿಯಲ್ಲಿ 35 ಲಕ್ಷ ವೆಚ್ಚದ ಗ್ರಾಪಂ ನೂತನ ಕಟ್ಟಡ ನಿರ್ಮಾಣಕ್ಕೆ ಭಾನುವಾರ ಶಂಕುಸ್ಥಾಪನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಉಳ್ಳವರಿಗೆ, ಶ್ರೀಮಂತರಿಗಲ್ಲ, ಬಡವರಿಗೆ, ಹಸಿದವರಿಗಾಗಿ ಜಾರಿಗೊಳಿಸಲಾಗಿದೆ ಎಂದು ಶಾಸಕ ಎಚ್‌.ಡಿ.ತಮ್ಮಯ್ಯ ಹೇಳಿದರು.

ತಾಲೂಕಿನ ಬೆಳವಾಡಿಯಲ್ಲಿ 35 ಲಕ್ಷ ವೆಚ್ಚದ ಗ್ರಾಪಂ ನೂತನ ಕಟ್ಟಡ ನಿರ್ಮಾಣಕ್ಕೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ ಕಾಂಗ್ರೆಸ್‌ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದು ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪಂಚ ಗ್ಯಾರಂಟಿಗಳು ಯಾರಿಗೆ ಬೇಕು? ಅಭಿವೃದ್ಧಿ ಮಾಡಿ ಎಂದು ಪ್ರತಿ ಪಕ್ಷದವರು ಬೇರೆಯವರ ಮೂಲಕ ಪೋಸ್ಟ್ ಹಾಕಿಸುತ್ತಿದ್ದಾರೆ ಎಂದು ಆರೋಪಿಸಿದರು.

ಹೊಟ್ಟೆ ತುಂಬಿದವರು ಗ್ಯಾರಂಟಿ ಸೌಲಭ್ಯ ಬೇಡ ಎನ್ನಬಹುದು. ಗ್ಯಾರಂಟಿಗಳು ಉಳ್ಳವರು, ಶ್ರೀಮಂತರಿಗಲ್ಲ. ಯಾರೂ ಹಸಿವಿನಿಂದ ಇರುತ್ತಾರೋ ಅವರಿಗಾಗಿ ಗ್ಯಾರಂಟಿ ಯೋಜನೆಗಳನ್ನು ಸಿಎಂ ಸಿದ್ದರಾಮಯ್ಯ ಜಾರಿಗೊಳಿಸಿದ್ದಾರೆ ಎಂದರು.

ಗೃಹಲಕ್ಷ್ಮಿ ಯೋಜನೆ ಮೂಲಕ ಮಹಿಳೆಯರಿಗೆ ಹಣ ನೀಡಲಾಗುತ್ತಿದೆ. ಶಕ್ತಿ ಯೋಜನೆಯಲ್ಲಿ ದೇವಾಲಯಗಳಿಗೆ ಭೇಟಿ ಮಾಡಿದ್ದಾರೆ. ಓದಿದ ಯುವಜನರಿಗೆ ಯುವನಿಧಿ ನೀಡಿದ್ದಾರೆ, ಇಷ್ಟೆಲ್ಲ ಮಾಡಿಯೂ ನಮ್ಮಲ್ಲಿ ಅಭಿವೃದ್ಧಿಗೂ ಹಣವಿದೆ. ಈ ಭಾಗದಲ್ಲಿ ಅನೇಕ ದೇವಾಲಯ, ರಸ್ತೆ ಅಭಿವೃದ್ಧಿಗೆ ಅನುದಾನ ನೀಡಿರುವುದು ಇದಕ್ಕೆ ಸ್ಪಷ್ಟ ನಿದರ್ಶನ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಗ್ರಾಪಂನಿಂದ ಹಿಡಿದು ಲೋಕ ಸಭೆ ವರೆಗೂ ಎಲ್ಲ ಚುನಾಯಿತ ಪ್ರತಿನಿಗಳಿಗೆ ಅವರದ್ದೇ ಆದ ಹಲವು ಜವಾಬ್ದಾರಿ ಮತ್ತು ಸೇವೆ ಮಾಡುವ ಅವಕಾಶ ಕಲ್ಪಿಸ ಲಾಗಿದೆ. ಆದರೆ, ನೇರವಾಗಿ ಜನರ ಕೈಗೆ ಸಿಕ್ಕಿ ಅವರ ಸಮಸ್ಯೆ ಬಗೆಹರಿಸುವ ಅವಕಾಶ ಇರುವುದ್ದು ಗ್ರಾಪಂ ಮತ್ತಿತರೆ ಸ್ಥಳೀಯ ಸಂಸ್ಥೆಗಳ ಪ್ರತಿನಿಗಳಿಗೆ ಮಾತ್ರ ಎಂದರು.

ದೊರಕಿರುವ ಈ ಅವಕಾಶ ಸ್ಥಳೀಯ ಸಂಸ್ಥೆಗಳ ಪ್ರತಿನಿಗಳು ಸರಿಯಾಗಿ ಸದ್ಬಳಕೆ ಮಾಡಿ ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಸಮಸ್ಯೆ ಹೇಳಿಕೊಂಡು ಬಂದ ಜನರಿಗೆ ಸಹಕರಿಸಬೇಕು ಎಂದು ಹೇಳಿದರು. ಕುಡಿಯುವ ನೀರು, ಸ್ವಚ್ಧತೆ ಮತ್ತು ಬೀದಿ ದೀಪ ಇಷ್ಟು ಸಮಸ್ಯೆಗಳನ್ನು ಗ್ರಾ.ಪಂ.ನಲ್ಲಿ ಬಗೆಹರಿಸಿದಲ್ಲಿ ಅರ್ಧ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಎಂದು ಹೇಳಿದರು.

ಈ ವೇಳೆ ಕೆಪೆಕ್‌ ಅಧ್ಯಕ್ಷ ಬಿ.ಎಚ್.ಹರೀಶ್, ಗ್ಯಾರಂಟಿ ಪ್ರಾಕಾರದ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ರಾಜ್ಯ ಪರಿಸರ ಮಾಲಿನ್ಯ ಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್, ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಡಾ.ವಿನಾಯಕ್‌ ಸಿಂದಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿರಾಜ್‌ ಉನ್ನೀಸ ಉಪಾಧ್ಯಕ್ಷೆ ಭಾಗ್ಯ, ಸದಸ್ಯರಾದ ಕಲ್ಪನಾ, ಕಾವೇರಮ್ಮ, ಪ್ರದೀಪ, ದನು ಕುಮಾರ್, ಗೌರಮ್ಮ, ಚಂದ್ರಮ್ಮ, ಜಯಲಕ್ಷ್ಮಿ, ರೇಣುಕಾ, ನಾಗರಾಜ್, ರಂಗಸ್ವಾಮಿ, ಪರಮೇಶ್ವರಪ್ಪ, ಪಿಡಿಒ ಸಿ.ಎಸ್. ವಿಶ್ವನಾಥಯ್ಯ, ಮುಖಂಡರಾದ ವೆಂಕಟೇಶ್ ನಾಯ್ಡು, ಬೆಳವಾಡಿ ಅಮಿರ್, ಆನಂದ್, ಮೂರ್ತಿಯಪ್ಪ, ಧರ್ಮೇಂದ್ರ, ಪರಮೇಶ್ವರಪ್ಪ ಉಪಸ್ಥಿರಿದ್ದರು.ಫೋಟೋ

ಚಿಕ್ಕಮಗಳೂರು ತಾಲೂಕಿನ ಬೆಳವಾಡಿಯಲ್ಲಿ ₹35 ಲಕ್ಷ ವೆಚ್ಚದ ಗ್ರಾಪಂ ನೂತನ ಕಟ್ಟಡ ನಿರ್ಮಾಣಕ್ಕೆ ಭಾನುವಾರ ಶಾಸಕ ಎಚ್‌.ಡಿ.ತಮ್ಮಯ್ಯ ಶಂಕುಸ್ಥಾಪನೆ ನೆರವೇರಿಸಿದರು. ಕೆಪೆಕ್‌ ಅಧ್ಯಕ್ಷ ಬಿ.ಎಚ್.ಹರೀಶ್, ಡಾ.ವಿನಾಯಕ್‌ ಸಿಂದಿಗೆರೆ , ಎಂ.ಸಿ. ಶಿವಾನಂದಸ್ವಾಮಿ, ಎ.ಎನ್.ಮಹೇಶ್, ಗ್ರಾಪಂ ಅಧ್ಯಕ್ಷೆ ಸಿರಾಜ್‌ ಉನ್ನೀಸ, ಉಪಾಧ್ಯಕ್ಷೆ ಭಾಗ್ಯ ಮೊದಲಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾದಕ ವ್ಯಸನದ ವಿರುದ್ದ ಜಾಗೃತ ರನ್
ನಾಡು ನುಡಿ ಬಗ್ಗೆ ಗಮನಾರ್ಹ ಸಾಧನೆ: ರವಿ ದಳವಾಯಿ