ಯಲಬುರ್ಗಾ: ಜವಾಬ್ದಾರಿ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ಯಾವಾಗಲೂ ಜನಪರ ಕೆಲಸ ಮಾಡಬೇಕು. ಜನರ ಪ್ರೀತಿ ಗೌರವದ ಮುಂದೆ ಯಾವುದೂ ಇಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ರಾಜಕೀಯ ಅನುಭವ ಇಲ್ಲದವರನ್ನು, ಸುಳ್ಳು ಭಾಷಣ ಮಾಡುವವರನ್ನು ಜನರು ಚುನಾವಣೆಯಲ್ಲಿ ಆರಿಸಿ ತರುತ್ತಾರೆ. ರಾಜಕಾರಣಿಗಳು ಅಭಿವೃದ್ಧಿ ಕೆಲಸ ಮಾಡಬೇಕು. ಇಲ್ಲವಾದರೆ ಆ ಸ್ಥಾನಕ್ಕೆ ಬರಬಾರದು ಎಂದರು.
ಪ್ರತಿ ಪಕ್ಷದವರು ರಾಜ್ಯ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆ ಟೀಕಿಸಿದರು. ಶಕ್ತಿ ಯೋಜನೆಯಡಿ ಕೋಟಿಗಟ್ಟಲೆ ಜನರು ಸಾರಿಗೆ ಬಸ್‌ನಲ್ಲಿ ಪ್ರಯಾಣಿಸಿದ್ದು ವಿಶ್ವದಾಖಲೆ ಬರೆದಿದೆ. ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ದೂರದೃಷ್ಟಿ ಯೋಜನೆ ರೂಪಿಸಬೇಕಿದೆ. ಮುಂದಿನ ಸಲ ಕ್ಷೇತ್ರದ ೧೦ ಸಾವಿರ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗುವುದು. ಬಂಜಾರ ಸಮಾಜದ ಮಕ್ಕಳಿಗೆ ಪ್ರತ್ಯೇಕವಾಗಿ ವಸತಿ ಶಾಲೆ ಸ್ಥಾಪಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಲಾಗಿದೆ. ಈಸಲ ಮಂಡನೆಯಾಗಲಿರುವ ಬಜೆಟ್ ₹೪ ಲಕ್ಷ ೩೬ ಸಾವಿರ ಕೋಟಿ ಗಾತ್ರದ್ದಾಗಲಿದೆ. ಇನ್ನಷ್ಟು ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ. ಇಷ್ಟು ಅನುದಾನವನ್ನು ಬೇರೆ ಯಾವ ರಾಜ್ಯ ಸರ್ಕಾರಗಳು ಕೊಡುವುದಿಲ್ಲ. ನೀರಾವರಿ ಬಗ್ಗೆ ಭಾಷಣ ಮಾಡುವವರು ಮೊದಲು ತಮ್ಮ ಊರಿಗೆ ಮಾಡಿಕೊಳ್ಳಲಿ. ನೀರಾವರಿ
ಶಿಕ್ಷಣ, ಆರೋಗ್ಯ, ಅನ್ನಭಾಗ್ಯ ಸೇರಿದಂತೆ ಅನೇಕ ಜನಪರ ಕೆಲಸ ಮಾಡುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವೈಶಾಲ್ಯವಾಗಿದೆ.
ಇದೆ ವೇಳೆ ಬಂಡಿ, ಕಡಬಲಕಟ್ಟಿ, ಜೂಲಕಟ್ಟಿ, ಬಳೂಟಗಿ ತಾಂಡಾ, ಬಸಾಪುರ, ದಮ್ಮೂರು, ಮಾರನಾಳ, ಹಗೇದಾಳ, ಬಳೂಟಗಿ, ಬೂನಕೊಪ್ಪ, ತುಮ್ಮರಗುದ್ದಿ ಗ್ರಾಮದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಪಿಆರ್‌ಇಡಿ ಎಇಇ ರಾಜಶೇಖರ ಮಳಿಮಠ ಮಾತನಾಡಿದರು.
ವೀರನಗೌಡ ಪಾಟೀಲ್, ಶೇಖರಗೌಡ ಉಳ್ಳಾಗಡ್ಡಿ, ರಾಮಣ್ಣ ಸಾಲಭಾವಿ, ಡಾ. ಶಿವನಗೌಡ ದಾನರಡ್ಡಿ, ಆನಂದ ಉಳ್ಳಾಗಡ್ಡಿ, ಎಂ.ಎಫ್. ನದಾಫ್, ಸಂಗಣ್ಣ ತೆಂಗಿನಕಾಯಿ, ಶರಣಪ್ಪ ಗಾಂಜಿ, ರೇವಣಪ್ಪ ಹಿರೇಕುರುಬರ, ಸುಧೀರ ಕೊರ್ಲಹಳ್ಳಿ, ಎಂ.ಎಫ್. ನದಾಫ್, ಶರಣಗೌಡ ಬಸಾಪುರ, ನಿಂಗಪ್ಪ ಕಮತರ, ಪುನೀತ ಕೊಪ್ಪಳ,