ದೈವಜ್ಞ ದರ್ಶನ ಕಾರ್ಯಕ್ರಮ
ಸೋಮವಾರ ಪಟ್ಟಣದ ಎಪಿಎಂಸಿ ರೈತಭವನದಲ್ಲಿ ದೈವಜ್ಞ ಹಿತವರ್ಧಕ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ದೈವಜ್ಞ ದರ್ಶನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಾಲ್ಕು ದಶಕಗಳ ಹಿಂದೆ ದೈವಜ್ಞ ಸಮಾಜ ತೀರಾ ಹಿಂದುಳಿದಿತ್ತು. ಸಾಮಾಜಿಕ, ಶೈಕ್ಷಣಿಕವಾಗಿ ಬೆಳೆಯಬೇಕೆಂಬ ಸಂಕಲ್ಪ, ಶ್ರಮದಿಂದ ಈಗ ಉತ್ತಮ ಪ್ರಗತಿ ಕಂಡಿದೆ ಎಂದರು.ಪಾಶ್ಚಿಮಾತ್ಯ ಸಂಸ್ಕೃತಿಯ ಮೋಹದಲ್ಲಿ ನಮ್ಮತನ ಕಳೆದುಕೊಳ್ಳಬಾರದು. ಮಕ್ಕಳಿಗೆ ಸನಾತನ ಪರಂಪರೆಯ ಸಂಸ್ಕಾರ ನೀಡುವ ಹೊಣೆ ಪಾಲಕರದ್ದು ಎಂದ ಶ್ರೀಗಳು, ಯಲ್ಲಾಪುರದಲ್ಲಿ ಸಮಾಜಕ್ಕೆ ಸ್ವಂತ ಸ್ಥಳ, ಕಟ್ಟಡದ ಅಗತ್ಯವಿದೆ. ಸಮಾಜ ಬಾಂಧವರೆಲ್ಲರೂ ಸಂಘಟಿತರಾಗಿ ಶ್ರಮಿಸಿದರೆ ಅದು ಅಸಾಧ್ಯವೇನಲ್ಲ ಎಂದರು. ಕಿರಿಯ ಯತಿಗಳಾದ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಸನಾತನ ಧರ್ಮ ನಮ್ಮ ಬದುಕಿನಲ್ಲಿ ಹೇಗೆ ನಡೆಯಬೇಕು ಎಂಬ ಮಾರ್ಗದರ್ಶನ ಮಾಡುತ್ತದೆ. ವಿನಯದಿಂದ ಬಾಗಿ ಬದುಕುವವರು ಭಾಗ್ಯವಂತರಾಗುತ್ತಾರೆ, ಅಹಂಕಾರದಿಂದ ಬಾಳುವವನ ಬದುಕು ಹೀನಾಯವಾಗುತ್ತದೆ. ಸತ್ಯ, ಪ್ರೀತಿ, ವಿಧೇಯತೆಯಿಂದ ಧರ್ಮದ ಹಾದಿಯಲ್ಲಿ ಜೀವನ ನಡೆಸುವವರಿಗೆ ಪ್ರಪಂಚದಲ್ಲಿ ಗೌರವ ದೊರೆಯುತ್ತದೆ, ಅಂಥವರು ದೇವರಿಗೂ ಪ್ರಿಯರಾಗುತ್ತಾರೆ. ಅದೇ ಮಾರ್ಗದಲ್ಲಿ ಸಾಗಲು ಎಲ್ಲರೂ ಪ್ರಯತ್ನಿಸಬೇಕು ಎಂದರು. ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ರವಿ ಗಾಂವ್ಕರ ಮಾತನಾಡಿ, ಸಮಾಜದಲ್ಲಿ ಒಗ್ಗಟ್ಟು ಮೂಡಿಸುವ ನಿಟ್ಟಿನಲ್ಲಿ ಶ್ರೀಗಳ ಮಾರ್ಗದರ್ಶನದಲ್ಲಿ ದೈವಜ್ಞ ದರ್ಶನ ಕಾರ್ಯಕ್ರಮ ನಡೆಸಲಾಗುತ್ತಿದೆ. ಸಮಾಜ ಸ್ವಂತ ಜಾಗ ಹೊಂದಿ, ಉತ್ತಮ ಕಲ್ಯಾಣ ಮಂಟಪ ನಿರ್ಮಿಸುವ ಕುರಿತು ಪ್ರಯತ್ನ ನಡೆಸಲಾಗುತ್ತಿದೆ ಎಂದರು. ಯಲ್ಲಾಪುರ ದೈವಜ್ಞ ಹಿತವರ್ಧಕ ಸಂಘದ ಅಧ್ಯಕ್ಷ ಸುಬ್ರಾಯ ಶೇಟ್ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಮಾಜ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಉದಯ ರಾಯ್ಕರ್, ಜಿಲ್ಲಾ ದೈವಜ್ಞ ವಾಹಿನಿಯ ಗೌರವಾಧ್ಯಕ್ಷ ಸುಧಾಕರ ರಾಯ್ಕರ್, ಸಂಚಾಲಕ ಸುರೇಶ ರಾಯ್ಕರ್, ಶಿರಸಿಯ ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷ ಪ್ರಭಾಕರ ವೆರ್ಣೆಕರ್, ಅಂಕೋಲಾ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ರೇವಣಕರ್, ಶಿರಸಿಯ ದೈವಜ್ಞ ಮಹಿಳಾ ಮಂಡಳದ ಅಧ್ಯಕ್ಷೆ ಸವಿತಾ ಶೇಟ್, ಯಲ್ಲಾಪುರದ ಜ್ಞಾನೇಶ್ವರಿ ಮಹಿಳಾ ಮಂಡಳದ ಅಧ್ಯಕ್ಷೆ ಪೂಜಾ ಶೇಟ್, ಯಲ್ಲಾಪುರ ಸರಾಫ ಸಂಘದ ಅಧ್ಯಕ್ಷ ಸುರೇಶ ರೇವಣಕರ್, ಶಿರಸಿ ಸಂಘದ ಅಧ್ಯಕ್ಷ ವಿನಾಯಕ ಪಾವಸ್ಕರ್, ಸುವರ್ಣ ಕಲಾಕಾರ ವಿನಾಯಕ ರೇವಣಕರ್, ಪ್ರಮುಖರಾದ ವಸಂತ ಅಣ್ವೆಕರ್, ರಾಮಚಂದ್ರ ಶೇಟ್, ಅನಿಲ ಚೂಡಣಕರ್, ಸೀತಾರಾಮ ರೇವಣಕರ್ ಮತ್ತಿತರರಿದ್ದರು. ಜ್ಞಾನೇಶ್ವರಿ ಮಹಿಳಾ ಮಂಡಳದ ಸದಸ್ಯರು ಪ್ರಾರ್ಥಿಸಿದರು. ಎಂ.ಬಿ. ಶೇಟ್, ಮಂಜುನಾಥ ರಾಯ್ಕರ್ ನಿರ್ವಹಿಸಿದರು.ಸಂಘದ ವತಿಯಿಂದ ಯತಿದ್ವಯರ ಪಾದಪೂಜೆ ನೆರವೇರಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಉಭಯ ಶ್ರೀಗಳನ್ನು ಮಾಗೋಡ್ ಕ್ರಾಸ್‌ನಿಂದ ಯಲ್ಲಾಪುರದವರೆಗೆ ಬೈಕ್ ರ‍್ಯಾಲಿಯ ಮೂಲಕ ಸ್ವಾಗತಿಸಲಾಯಿತು. ಗಾಂಧಿ ಚೌಕದಿಂದ ಎಪಿಎಂಸಿ ರೈತಭವನದವರೆಗೆ ಭವ್ಯ ಮೆರವಣಿಗೆಯ ಮೂಲಕ ಶ್ರೀಗಳನ್ನು ಬರಮಾಡಿಕೊಳ್ಳಲಾಯಿತು. ಚಂಡೆವಾದನ, ಸಾಂಪ್ರದಾಯಿಕ ನೃತ್ಯಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.