ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಮುತ್ಕೂರು ಗ್ರಾಮದಲ್ಲಿ ಜ್ಞಾನಧಾರಾ ಟ್ರಸ್ಟ್ ಹಾಗೂ ಭೂಮಿ ಫೌಂಡೇಶನ್ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜ್ಞಾನಧಾರಾ ಟ್ರಸ್ಟ್ ಅಧ್ಯಕ್ಷ ರಾಧಕೃಷ್ಣ ಮಾತನಾಡಿ, ಪ್ರತಿವರ್ಷ ನಮ್ಮ ಪರಿಸರ ಉಳಿವಿಗಾಗಿ ಲಕ್ಷ ವೃಕ್ಷ ನೆಡುವ ಕಾರ್ಯದ ಜೊತೆ ಭಗವದ್ಗೀತೆಯ ಸಾರವನ್ನು ಎಲ್ಲರಿಗೂ ತಲುಪಿಸುವುದೇ ನಮ್ಮ ಉದ್ದೇಶವಾಗಿದೆ ಎಂದರು.
ಜ್ಞಾನಧಾರಾ ಟ್ರಸ್ಟ್ ನ ಕಾರ್ಯದರ್ಶಿ ಮಹೇಶ್ ಕುಮಾರ್ ಮಾತನಾಡಿ ಕಳೆದ ವರ್ಷ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಅರಣ್ಯ ವಾಸಿಗಳಿಗೆ ಭಗವದ್ಗೀತಾ ಪುಸ್ತಕ ವಿತರಣೆ ಮಾಡುವ ಮೂಲಕ ಆ ಭಾಗದಲ್ಲಿ ಒಂದು ಲಕ್ಷ ಗಿಡಗಳನ್ನು ನೆಡುವ ಕಾರ್ಯ ಮಾಡಲಾಗಿತ್ತು, ಈ ವರ್ಷ ಸ್ವಲ್ಪ ತಡವಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಲಕ್ಷ ವೃಕ್ಷ ನೆಡುವ ಅಭಿಯಾನ ಶುರು ಮಾಡಲಾಗುವುದು ಎಂದರು.ಗೀತಾ ವೈಭವ ಟ್ರಸ್ಟ್ ಕಾರ್ಯದರ್ಶಿ ಶುಷ್ಮಶ್ರೀ, ಎಂ ಆರ್ ವೆಂಕಟೇಶ್, ಆರ್ ರವೀಂದ್ರ, ಎಂ ಡಿ ದೇವೇಗೌಡ, ಪ್ರತಾಪ್, ಜೈ ಕಿಶನ್, ನಾರಾಯಣಸ್ವಾಮಿ, ಪಿ ರಘುಶಂಕರ್, ಶ್ರೀನಾಥ್, ರವೀಂದ್ರ, ಮಹೇಶ್ ಕುಮಾರ್, ರಾಮಚಂದ್ರಪ್ಪ, ವೆಂಕಟೇಶ್ ಪಿ ಹಾಗೂ ವೆಂಕಟಸ್ವಾಮಿ ಹಾಜರಿದ್ದರು. 2 ಹೊಸಕೋಟೆ ಅನುಗೊಂಡನಹಳ್ಳಿ ಹೋಬಳಿಯ ಮುತ್ಕೂರು ಗ್ರಾಮದಲ್ಲಿ ಜ್ಞಾನಧಾರಾ ಟ್ರಸ್ಟ್ ಹಾಗೂ ಭೂಮಿ ಫೌಂಡೇಶನ್ ಕಚೇರಿ ಉದ್ಘಾಟನೆ ನೆರವೇರಿಸಲಾಯಿತು.