ಕನ್ನಡಪ್ರಭ ವಾರ್ತೆ ಮಡಿಕೇರಿ
ಇಂಗ್ಲಿಷ್‌ನಿಂದ ಕನ್ನಡಕ್ಕೆ, ಕನ್ನಡದಿಂದ ಇಂಗ್ಲೀಷ್‌ಗೆ ಭಾಷಾಂತರಿಸುವ ವೇಳೆ ನಡೆದಿರುವ ಹಲವು ಯಡವಟ್ಟುಗಳ ಸೂಚನಾ ಫಲಕ, ಹೆಸರು, ವಿಳಾಸಗಳು ನಗೆಪಾಟಲಿಗೀಡಾಗಿದೆ. ಈ ಪೈಕಿ ಕೊಡಗಿನಲ್ಲಿ ಅಳವಡಿಸಿದ್ದ ರಸ್ತೆ ಸೂಚನಾ ಫಲಕ ಭಾರಿ ವೈರಲ್ ಆಗಿತ್ತು. ಮಡಿಕೇರಿ - ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರ ಸಂಪಾಜೆ ಬಳಿ ಈ ಸೂಚನಾ ಫಲಕ ಅಳವಡಿಸಲಾಗಿತ್ತು.
ಸೂಚನಾ ಫಲಕದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಫೋಟೋ ಭಾರಿ ವೈರಲ್ ಆಗಿತ್ತು. ಹಲವರು ಈ ಫೋಟೋಗೆ ಕಮೆಂಟ್ ಮಾಡಿದ್ದರು. ಇದಕ್ಕಿಂತ ಗೂಗಲ್ ಅನುವಾದ ಮಾಡಬಹುದಿತ್ತು ಎಂದು ಸೂಚಿಸಿದ್ದರು. ಈ ರೀತಿ ಭಾಷಾಂತರ ಮಾಡಿ ಆಭಾಸ ಮಾಡಿ ನಗೆಪಾಟಲೀಗಾಡುವುದಕ್ಕಿಂತ ಕನ್ನಡದಲ್ಲೇ ಬರೆದರೆ ಸಾಕು ಎಂದು ಹಲವರು ಸಲಹೆ ನೀಡಿದ್ದರು.ಈ ಫೋಟೋ ಭಾರಿ ವೈರಲ್ ಆಗುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಬಳಿಕ ಈ ಬೋರ್ಡ್ ಬದಲಾಯಿಸಿದ್ದಾರೆ. ಇದೀಗ ಸ್ಪೀಡ್ ಥ್ರಿಲ್ಸ್ ಬಟ್ ಕಿಲ್ಸ್ ಎಂದು ಬರೆದಿರುವ ಬೋರ್ಡ್ ಹಾಕಲಾಗಿದೆ. ಅಧಿಕಾರಿಗಳ ಯಡವಟ್ಟಿನಿಂದ ಜಿಲ್ಲೆಯ ಜನ ತೀವ್ರ ಮುಜುಗರ ಅನುಭವಿಸುವಂತಾಗಿತ್ತು. ಕೊನೆಗೂ ಎಚ್ಚೆತ್ತ ಇಲಾಖೆ ಸರಿಪಡಿಸಿದೆ.