ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಬಾಗೇಪಲ್ಲಿ ಪುರಸಭೆ ಕಾರ್ಯಾಲಯ ವ್ಯಪ್ತಿಯ ಬಾಕಿ ಉಳಿದಿರುವ ಇ ಮತ್ತು ಬಿ ಖಾತಾ ಅರ್ಜಿಗಳನ್ನು ಇನ್ನು 2 ತಿಂಗಳಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಪಿ.ಎನ್. ರವೀಂದ್ರ ಸೂಚಿಸಿದರು.ಬಾಗೇಪಲ್ಲಿ ಪುರಸಭೆ ಕಾರ್ಯಾಲಯಕ್ಕೆ ಅನಿರೀಕ್ಷಿತ ಬೇಟಿ ನೀಡಿ ಪರಿಶೀಲಿಸಿದ ಅವರು, ಬಿ ಮತ್ತು ಇ ಖಾತಾ ಕಡತ ಸೇರಿದಂತೆ ಕಾರ್ಯಾಲಯದ ಕಾರ್ಯವೈಖರಿ ಬಗ್ಗೆ ಪರಿಶೀಲನೆ ನಡೆಸಿದರು.
ಅನ್‍ಲೈನ್ ಮೂಲಕವೇ ಖಾತೆಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇ ಮತ್ತು ಬಿ ಖಾತಾ ಅದೋಲನದಲ್ಲಿ 4675 ಬಿ ಖಾತಾ ಅರ್ಜಿಗಳನ್ನು ಸ್ವೀಕರಿಸಿದ್ದು ಈಗಾಗಲೇ ಸುಮಾರು 3390 ಖಾತಾಗಳನ್ನು ಮಾಡಲಾಗಿದೆ. ಉಳಿದ 1284 ಬಾಕಿ ಉಳಿದಿವೆ. ಅನ್‍ಲೈನ್ ಮೂಲಕವೇ ಖಾತಾಗಳನ್ನು ಮಾಡಬೇಕು ಎಂದು ಹೇಳಿದರು.
ಸಾರ್ವಜನಿಕ ಸೌಚಾಲಯಗಳ ನಿರ್ವಾಹಣೆ ಸರಿಯಾಗಿಲ್ಲ, ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಾಲಯಗಳನ್ನು ತಕ್ಷಣ ನಿರ್ಮಿಸಿ ನಿರ್ವಹಿಸುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ತ್ಯಾಜ್ಯ ನೀರು ಸಂಸ್ಕರಣೆ
₹3.5 ಕೋಟಿ ರು.ಗಳ ವೆಚ್ಚದಲ್ಲಿ ತ್ಯಾಜ್ಯ ನೀರು ಸಂಗ್ರಹಣೆ ಮಾಡಿ ಶುದ್ದೀಕರಿಸುವ ಘಟಕಕ್ಕೆ ಜಾಗವನ್ನು ಈಗಾಗಲೇ ಗುರ್ತಿಸಲಾಗಿದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಕ್ರಮವಹಿಸುವುದಾಗಿ ತಿಳಿಸಿದರು. ಪುರಸಭೆ ಕಾರ್ಯಾ¯ಯದಲ್ಲಿನ ಸಿಬ್ಬಂದಿಗಳು ವಿವಿಧ ಕಡಿತಗಳು ಅನಗತ್ಯವಾಗಿ ತಮ್ಮ ಟೇಬಲ್‍ಗಳ ಮೇಲೆ ಇಟ್ಟಿಕೊಂಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು ತಕ್ಷಣ ಈ ಕಡತಗಳನ್ನು ವಿಲೇವರಿ ಮಾಡುವಂತೆ ಸೂಚಿಸಿದರಲ್ಲದೆ ಕಚೇರಿ ಸೇರಿದಂತೆ ಕಚೇರಿಯ ಸುತ್ತಮುತ್ತಲಲ್ಲಿ ಸ್ವಚ್ಛತೆ ಕಾಪಾಡುವ ಕೆಲಸ ಆಗಬೇಕೆಂದರು.ಇಲ್ಲಿನ ಕಚೇರಿಯಲ್ಲಿ ಬಹುತೇಕ ಹುದ್ದೆಗಳು ಖಾಲಿ ಇವೆ ಇದರಿಂದ ಕಸ ವಿಲೇವೆರಿ ಸೇರಿದಂತೆ ವಿವಿಧ ಕೆಲಸಗಳು ತ್ವರಿತವಾಗಿ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದೆ. ಇರುವ ಸಿಬ್ಬಂದಿಯಿಂದಲ್ಲೇ ಸಾಧ್ಯವಾದಷ್ಟು ಕೆಲಸಗಳನ್ನು ಮಾಡಿಕೊಳ್ಳಬೇಕಾಗಿದೆ ಎಂದರು.
ಇಲ್ಲಿಗೆ ಬರಲು ಯಾರೂ ಒಪ್ಪುತ್ತಿಲ್ಲಇಲ್ಲಿನ ಪುರಸಭೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಇಲ್ಲಿಗೆ ಬೇರೆ ಕಡೆಯಿಂದ ಇಚ್ಚೆಪಟ್ಟು ಬರಬೇಕು ಆದರೆ ಕಾರಣಾಂತರಗಳಿಂದ ಇಲ್ಲಿಗೆ ಯಾರು ಬರುತ್ತಿಲ್ಲ ಇಲ್ಲಿನ ಕಚೇರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿಮಾಡುವ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ಬಿಇಒ ವೆಂಕಟೇಶಪ್ಪ ಮತ್ತಿತರರು ಇದ್ದರು.