- ಮಾಯಕೊಂಡದಿಂದ ದಾವಣಗೆರೆ ಹೌಸಿಂಗ್ ಫೈನಾನ್ಸ್‌ವರೆಗೆ ಬೈಕ್ ರ್ಯಾಲಿ- ಒನ್ ಟೈಮ್ ಸೆಟ್ಲ್‌ಮೆಂಟ್ ಅಂತಾ ಬಾಯಿ ತೆಗೆದ ಸಂಸ್ಥೆ ಸಿಬ್ಬಂದಿ ವಿರುದ್ಧ ಗರಂ
ಮನೆ ಕಟ್ಟಲು ಸಾಲ ನೀಡಿದ್ದ ಹೌಸಿಂಗ್ ಫೈನಾನ್ಸ್‌ನವರು ಸಾಲ ಮರುಪಾವತಿ ನೋಟೀಸ್ ಮನೆ ಗೋಡೆಗೆ ಅಂಟಿಸಿದ್ದನ್ನು ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ, ಜಿಲ್ಲಾ ಸಮಿತಿಯಿಂದ ತಾಲೂಕಿನ ಮಾಯಕೊಂಡ ಗ್ರಾಮದಿಂದ ದಾವಣಗೆರೆ ಜಿಲ್ಲಾ ಕೇಂದ್ರದವರೆಗೂ ಬೃಹತ್ ಬೈಕ್ ರ್ಯಾಲಿ ಮೂಲಕ ಪ್ರತಿಭಟಿಸಲಾಯಿತು.
ಮಾಕೊಂಡ ಗ್ರಾಮದ ರೈತ ಮಾಳಜ್ಜರ ಗುಡ್ಡಪ್ಪ ಸೇರಿದಂತೆ ಅನೇಕ ಗ್ರಾಮಗಳ ರೈತರ ಮನೆಗಳಿಗೆ ಹೌಸಿಂಗ್ ಫೈನಾನ್ಸ್‌ನವರು ಸಾಲ ಮರುಪಾವತಿ ನೋಟೀಸ್ ಅಂಟಿಸಿದ್ದಾರೆ. ಈ ಹಿನ್ನೆಲೆ ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಇತರರ ನೇತೃತ್ವದಲ್ಲಿ ಖಂಡನೆ ವ್ಯಕ್ತಪಡಿಸಿ, ಜಿಲ್ಲಾ ಕೇಂದ್ರದವರೆಗೂ ಬೈಕ್ ರ್ಯಾಲಿ ನಡೆಸಿ, ನಗರದ ಕುವೆಂಪು ರಸ್ತೆಯ ಹೋಂ ಫೈನಾನ್ಸ್ ಎದುರು ಧರಣಿ ನಡೆಸಲಾಯಿತು.ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿ, ಮಾಯಕೊಂಡದ ರೈತ ಮಾಳಜ್ಜರ ಗುಡ್ಡಪ್ಪ ಗೃಹಂ ಹೌಸಿಂಗ್ ಫೈನಾನ್ಸ್‌ನಲ್ಲಿ ಮನೆ ಕಟ್ಟಲು ₹18 ಲಕ್ಷ ಸಾಲ ಪಡೆದಿದ್ದರು. ಈಗಾಗಲೇ 9 ಲಕ್ಷ ಸಾಲ ಮರುಪಾವತಿಸಿದ್ದಾರೆ. ಆದರೆ, ಫೈನಾನ್ಸ್‌ನವರು ಮೊದಲು ಕಟ್ಟಿದ ಎಲ್ಲ ಸಾಲದ ಕಂತುಗಳನ್ನು ಬಡ್ಡಿಗೆ ಜಮಾ ಮಾಡಿ, ಇನ್ನೂ ₹18 ಲಕ್ಷ ಸಾಲ ಬಾಕಿ ಇದೆ ಎಂಬುದಾಗಿ ಮನೆ ಗೋಡೆಗೆ ನೋಟಿಸ್ ಅಂಟಿಸಿ, ಹರಾಜು ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2 ಕಂತು ಬಾಕಿ ಉಳಿಸಿಕೊಂಡರೆ ಆಸ್ತಿ ಹರಾಜಿಗೆ ಕಾನೂನಿನಲ್ಲಿ ಅವಕಾಶವೇ ಇಲ್ಲ. ಆದರೂ, ಹರಾಜು ಸಂಬಂಧ ನೋಟಿಸ್ ಅಂಟಿಸಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಹಾಗಾಗಿ, ಫೈನಾನ್ಸ್ ಸಿಬ್ಬಂದಿ ಹರಾಜು ಆದೇಶ ಪ್ರತಿ ತೋರಿಸಬೇಕು. ಸೆಟ್ಲ್‌ಮೆಂಟ್ ವಿಷಯ ನಂತರ. ಆದರೆ ಪ್ರಾಮಾಣಿಕವಾಗಿ ರೈತ ಗುಡ್ಡಪ್ಪ ಸಾಲ ತೀರಿಸುತ್ತಾರೆ. ಗೌರವಯುತವಾಗಿ ಸಾಲ ವಸೂಲಾತಿ ಮಾಡಿ. ಇದನ್ನು ಬಿಟ್ಟು, ಮನೆ ಬಾಗಿಲಿಗೆ ನೋಟಿಸ್ ಅಂಟಿಸಿ ಬಂದರೆ ಪ್ರಾಮಾಣಿಕ ರೈತನಿಗೆ ಅವಮಾನಿಸಿದಂತೆ ಎಂದು ತರಾಟೆಗೆ ತೆಗೆದುಕೊಂಡರು.
ಪ್ರತಿಭಟನಾನಿರತ ಮುಖಂಡರು, ರೈತರು ಪಟ್ಟು ಹಿಡಿದು ಕುಳಿತಿದ್ದರಿಂದ ಹೋರಾಟಕ್ಕೆ ಏನೂ ಮಾಡಬೇಕೆಂಬುದೇ ತೋಚದಂತಾಗ ಫೈನಾನ್ಸ್ ಸಿಬ್ಬಂದಿ ಒನ್ ಟೈಮ್ ಸೆಟಲ್ ಮೆಂಟ್ ಮಾಡಿಕೊಳ್ಳುವುದಾಗಿ ಹೇಳಿದರು. ರೈತ ಸಂಘ ಮಾತ್ರ ತನ್ನ ಪಟ್ಟುಸಡಿಸಲಿಲ್ಲ. ಅನಂತರ ತಾಲೂಕು ಕಚೇರಿಗೆ ತೆರಳಿ, ತಹಸೀಲ್ದಾರ್ ಅಶ್ವಥ್ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.
- - - (** ಒಂದು ಪೋಟೋ ಸುದ್ದಿಗೆ ಬಳಸಿ, ಇನ್ನೊಂದು 3ನೇ ಪುಟದ ಪ್ಯಾನೆಲ್ ಕ್ಯಾಪ್ಷನ್‌ಗೆ ಬಳಸಿ)-18ಕೆಡಿವಿಜಿ5.ಜೆಪಿಜಿ:
- - - -18ಕೆಡಿವಿಜಿ6:
- - - 18ಕೆಡಿವಿಜಿ7-ಮಾಯಕೊಂಡ ಗ್ರಾಮದ ರೈತ ಮನೆಯ ಕಂತು ಕಟ್ಟಿದ್ದರೂ ಬಾಕಿ ಹಣ ಕಟ್ಟದಿದ್ದರೆ ಮನೆ ಹರಾಜು ಮಾಡುವುದಾಗಿ ನೋಟಿಸ್ ಅಂಟಿಸಿರುವುದು.