ಕಾಮಗಾರಿ ಪೂರ್ಣಗೊಳಿಸಲು ಸೂಚನೆ

KannadaprabhaNewsNetwork | Published : Aug 31, 2024 1:41 AM

ಸಾರಾಂಶ

ಕೋಲಾರ ಜಿಲ್ಲೆಯ ೧೫೦೦ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಕಂದಾಯ ದಾಖಲೆಗಳನ್ನು ಇಂಡೀಕರಿಸಲಾಗಿದೆ. ಆ ವಿವರಗಳನ್ನು ಜಿಲ್ಲಾಡಳಿತದ ವೆಬ್‌ಸೈಟ್‌ನಲ್ಲಿ ಸಹ ಹಾಕಲಾಗಿದೆ. ಇನ್ನೂ ಉಳಿದ ಶಾಲೆಗಳಿಗೆ ನಿವೇಶನ ತಕರಾರುಗಳನ್ನು ಸರಿಪಡಿಸಿ ಶೀಘ್ರವೇ ಇ-ಖಾತೆ ಮಾಡಿಕೊಡಲಾಗುವುದು

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲಾಧಿಕಾರಿ ಅಕ್ರಂಪಾಷ ವಿವಿಧ ಇಲಾಖೆಗಳ ವಿಳಂಬಿತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಲೋಕೋಪಯೋಗಿ ಇಲಾಖೆ, ನಿರ್ಮಿತಿ ಕೇಂದ್ರ, ಕ್ರೆಡೆಲ್ ಹಾಗೂ ಇನ್ನಿತರೆ ನಿರ್ಮಾಣ ಸಂಸ್ಥೆಗಳು ಕೈಗೊಂಡಿರುವ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು.ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾಗುತ್ತಿರುವ ಶಾಲೆಗಳ ವಿವರ, ಸಮಾಜ ಕಲ್ಯಾಣ ಇಲಾಖೆ ಕಾಮಗಾರಿಗಳು, ಮಹಿಳಾ ಕಾಲೇಜಿನ ಕಾಮಗಾರಿ, ಪದವಿಪೂರ್ವ ಕಾಲೇಜು ಆವರಣದ ಕಾಮಗಾರಿಗಳು ಹಾಗೂ ಅಂಗನವಾಡಿ ಕಾಮಗಾರಿಗಳು ಮುಂತಾದ ಬಾಕಿ ಇರುವ ಮತ್ತು ಪ್ರಗತಿಯಲ್ಲಿರುವ ಕಾಮಗಾರಿಗಳ ವಿವರಗಳನ್ನು ಪರಿಶೀಲಿಸಿ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದರು. ಶಾಲೆಗಳ ದಾಖಲೆ ಇಂಡೀಕರಣ

ಜಿಲ್ಲೆಯ ೧೫೦೦ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಕಂದಾಯ ದಾಖಲೆಗಳನ್ನು ಇಂಡೀಕರಿಸಲಾಗಿದೆ. ಆ ವಿವರಗಳನ್ನು ಜಿಲ್ಲಾಡಳಿತದ ವೆಬ್‌ಸೈಟ್‌ನಲ್ಲಿ ಸಹ ಹಾಕಲಾಗಿದೆ. ಇನ್ನೂ ಉಳಿದ ಶಾಲೆಗಳಿಗೆ ನಿವೇಶನ ತಕರಾರುಗಳನ್ನು ಸರಿಪಡಿಸಿ ಶೀಘ್ರವೇ ಇ-ಖಾತೆ ಮಾಡಿಕೊಡಲಾಗುವುದು. ಜಿಲ್ಲೆಯ ೨೮ ಸರ್ಕಾರಿ ವಿದ್ಯಾರ್ಥಿ ನಿಲಯಗಳ ಕಂದಾಯ ದಾಖಲೆಗಳನ್ನು ಇಂದೀಕರಿಸಲು ದಾಖಲೆಗಳನ್ನು ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯಾವುದೇ ನಿವೇಶನಗಳ ತಕರಾರು ಇರುವುದಿಲ್ಲ ಅಂಗನವಾಡಿ ಕಟ್ಟಡಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ತಾಕಿತು ಮಾಡಿದರು. ಮುಂದಿನ ಕೆಡಿಪಿ ಸಭೆ ಒಳಗಾಗಿ ಬಾಕಿ ಇರುವ ಹಾಗೂ ಕೈಗೆ ಎತ್ತಿಕೊಂಡಿರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ ಅನುದಾನ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು. ಸ್ಥಗಿತ ಕಾಮಗಾರಿಗಳ ವಿವರ ನೀಡಿ

ತಕರಾರು ಇರುವ ಕಾಮಗಾರಿಗಳನ್ನು ಕೋರ್ಟ್ ಅಲ್ಲದೆ ಇತರೆ ಕಾರಣಗಳಿಂದ ಸ್ಥಗಿತಗೊಂಡಿರುವ ಕಾಮಗಾರಿಗಳ ವಿವರಗಳನ್ನು ಶೀಘ್ರವಾಗಿ ಸಲ್ಲಿಸುವಂತೆ ಸೂಚಿಸಿದರು.ಸಭೆಯಲ್ಲಿ ಎಡಿಸಿ ಮಂಗಳ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ರಾಮಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್, ಡಿಡಿಪಿಐ ಕೃ?ಮೂರ್ತಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ನಿರ್ದೇಶಕ ಮುರಳಿ, ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕರು ವಿಜಯಲಕ್ಷ್ಮಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ ಇದ್ದರು.

Share this article