ಆಹಾರ ತಯಾರಕರು ವಹಿವಾಟು ವಿವರ ಸಲ್ಲಿಸಲು ಸೂಚನೆ

KannadaprabhaNewsNetwork |  
Published : May 14, 2024, 01:08 AM IST
ಆಹಾರ | Kannada Prabha

ಸಾರಾಂಶ

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿಯಲ್ಲಿ ಜಿಲ್ಲೆಯಾದ್ಯಂತ ಆಹಾರ ಪರವಾನಗಿ ಪಡೆದಿರುವ ತಯಾರಕರು ವಹಿವಾಟಿನ ವಿವರವನ್ನು ಕಾಲಮಿತಿಯೊಳಗೆ ಸಲ್ಲಿಸಬೇಕು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಆಹಾರ ಪರವಾನಗಿ (ಎಫ್‌ಎಸ್‌ಎಸ್‌ಎಐ ಲೈಸನ್ಸ್) ಪಡೆದಿರುವ ತಯಾರಕರು/ ರೀ-ಪ್ಯಾಕರ್/ ರೀ-ಲೇಬರ್ ಪ್ರತಿ ವರ್ಷ ವಾರ್ಷಿಕ ವಹಿವಾಟಿನ ವಿವರವನ್ನು ಆಯಾಯ ಆರ್ಥಿಕ ವರ್ಷದ ಮೇ-31 ರ ಕಾಲಮಿತಿಯೊಳಗೆ https:\foscos.fssai.gov.in ವೆಬ್‌ಸೈಟ್‌ನಲ್ಲಿ ತಪ್ಪದೇ ಸಲ್ಲಿಸಬೇಕು. ತಪ್ಪಿದ್ದಲ್ಲಿ ವಾರ್ಷಿಕವಾಗಿ ಕಾಯ್ದೆಯಡಿ ನಿಗದಿಯಾಗುವ ದಂಡವನ್ನು ಕಡ್ಡಾಯವಾಗಿ ಪಾವತಿಸಿದ ನಂತರವೇ ಪರವಾನಗಿ ನವೀಕರಿಸಲು ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತ ಅಧಿಕಾರಿ ಡಾ.ಇ.ಅನಿಲ್ ಧಾವನ್ ಅವರು ತಿಳಿಸಿದ್ದಾರೆ.

ತಯಾರಕರು/ರೀ-ಪ್ಯಾಕರ್/ರೀ-ಲೇಬಲ್‌ದಾರರು ತಮ್ಮ ಆಹಾರ ಪದಾರ್ಥಗಳ ವಿಶ್ಲೇಷಣಾ ವರದಿಯನ್ನು ಪ್ರತಿ 06 ತಿಂಗಳಿಗೊಮ್ಮ ಎನ್‌ಎಬಿಎಲ್ ಅಕ್ರಿಡಿಯೇಟೆಡ್/ಎಫ್‌ಎಸ್‌ಎಸ್‌ಎಐ ನೋಂದಾಯಿತ ಪ್ರಯೋಗಾಲಯದಲ್ಲಿ ವಿಶ್ಲೇಷಿಸಿ ವರದಿಯನ್ನು ಅಧಿಕೃತ ಅಂತರ್ಜಾಲ ತಾಣದಲ್ಲಿ ತಮ್ಮ ತಮ್ಮ ಲಾಗಿನ್‌ನಲ್ಲಿ ನಮೂದಿಸುವುದು ಕಡ್ಡಾಯವಾಗಿದೆ.

ಈ ರೀತಿಯಲ್ಲಿ ವಾರ್ಷಿಕ ವಹಿವಾಟಿನ ವಿವರವನ್ನು ಹಾಗೂ ಪ್ರಯೋಗಾಲಯದ ವಿಶ್ಲೇಷಣಾ ವರದಿಯನ್ನು ಸಲ್ಲಿಸಲು ವಿಫಲವಾದಲ್ಲಿ ಮುಂದಿನ ಆಗುಹೋಗುಗಳಿಗೆ ಸಂಬಂಧಿಸಿದ ತಯಾರಕರು/ರೀ-ಪ್ಯಾಕರ್/ರೀ-ಲೇಬಲ್ (Manufacturer/ Re-packer/ Re- labeller)ಹಾರ ಉದ್ಧಿಮೆದಾರರು ಜವಾಬ್ದಾರರಾಗುತ್ತಾರೆ. ಆಹಾರ ನೋಂದಣಿ/ ಪರವಾನಗಿ ಪಡೆಯದೇ ವ್ಯಾಪಾರ ವಹಿವಾಟು ನಡೆಸುವವರು ತಕ್ಷಣದಲ್ಲೇ ಇಲಾಖೆಯಿಂದ ಆಹಾರ ನೋಂದಣಿ/ ಪರವಾನಗಿಯನ್ನು ಪಡೆದುಕೊಳ್ಳುವುದು, ತಪ್ಪಿದಲ್ಲಿ ಕಾಯ್ದೆಯಡಿ ನೋಟೀಸ್ ಮತ್ತು ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ಅವಶ್ಯವಾದಲ್ಲಿ ಅಂಕಿತಾಧಿಕಾರಿಗಳ ಕಚೇರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, ಜಿಲ್ಲಾ ಸರ್ವೇಕ್ಷಣಾ ಘಟಕದ ಆವರಣ, ಓಂಕಾರೇಶ್ವರ ದೇವಸ್ಥಾನದ ರಸ್ತೆ, ಟೋಲ್‌ಗೇಟ್ ಹತ್ತಿರ, ಮಡಿಕೇರಿ, ಕೊಡಗು ಜಿಲ್ಲೆ ಇಲ್ಲಿಗೆ ಭೇಟಿ ನೀಡಿ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...