ತಾಳಿಕೋಟೆ: ಸಿಸಿ ಕ್ಯಾಮರಾ ಅಳವಡಿಸಿಕೊಳ್ಳದಿರುವ ದೈನಂದಿನ ವ್ಯಾಪಾರ ವಹಿವಾಟು ಮಾಡುತ್ತಿರುವ ಅಂಗಡಿಗಳಿಗೆ ಭಾನುವಾರ ಸಿಪಿಐ ಮಹ್ಮದಪಶುಉದ್ದೀನ್ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ನೋಟಿಸ್ ನೀಡಿತು. ಅಂಗಡಿಗಳ ಸುರಕ್ಷತಾ ಅಧಿನಿಯಮದಡಿಯಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳಲು ಸೂಚಿಸಿದರೂ ಕೆಲವರು ಅಳವಡಿಕೆ ಮಾಡಿಲ್ಲ. ದ್ದಾಗಿದೆ ಇದ್ಯಾಗ್ಯೂ ಕೂಡಾ ಇನ್ನೂವರೆಗೂ ಅಂಗಡಿಗಳು ಒಳಗಡೆ ಮತ್ತು ಹೊರಗಡೆ ಅಳವಡಿಸಿಕೊಳ್ಳಬೇಕೆಂದು ಸೂಚನೆ ನೀಡಿದರು.ವಾಣಿಜ್ಯ ಸಂಕೀರ್ಣದ ಒಳಗೆ ಹಾಗೂ ಹೊರಗಡೆ ಸಂಪೂರ್ಣ ವ್ಯಾಪ್ತಿ ಒಳಪಡುವಂತೆ ಹಗಲು ಮತ್ತು ರಾತ್ರಿ ದೃಶ್ಯಾವಳಿಗಳು ನಿಚ್ಚಳವಾಗಿ ಸಂಗ್ರಹವಾಗುವಂತೆ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು. ಹಾಗೂ ಅದು ೩೦ ದಿನದ ದೃಶ್ಯಾವಳಿಗಳ ಸಂಗ್ರಹದ ಸಾಮರ್ಥ್ಯ ಹೊಂದಿರಬೇಕು. ತಮ್ಮ ಸಂಕೀರ್ಣದ ಸುರಕ್ಷತೆ ದೃಷ್ಠಿಯಿಂದ ಎಷ್ಟು ಜನ ಸೆಕ್ಯೂರಿಟಿ ಗಾರ್ಡ್‌ಗಳನ್ನು ಯಾವ ಏಜೆನ್ಸಿಯಿಂದ ನೇಮಕ ಮಾಡಿದೆ ಅನ್ನುವ ಬಗ್ಗೆ ಮಾಹಿತಿ ಪೊಲೀಸ್ ಠಾಣೆಗೆ ನೀಡಬೇಕು. ತಮ್ಮ ಕಟ್ಟಡ ಅಥವಾ ವಾಣಿಜ್ಯ ಸಂಕೀರ್ಣದ ನೀಲನಕ್ಷೆಯನ್ನು ಠಾಣೆಗೆ ಪೂರೈಸಬೇಕು. ಅದರಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ ಸ್ಥಳಗಳ ಮಾಹಿತಿ ಗುರುತಿಸಿ ಪೂರೈಸಬೇಕು ಸೇರಿದಂತೆ ವಿವಿದ ಸೂಚನೆಗಳನ್ನು ಅಂಗಡಿಕಾರರಿಗೆ ಪೊಲೀಸರು ನೀಡಿದ್ದಾರೆ.
----