ಧಾರವಾಡ:
ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ 56,432 ಹುದ್ದೆ ಭರ್ತಿ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು. ನಂತರವೂ ವಿವಿಧ ಇಲಾಖೆಗಳ ಸಚಿವರು ಅತೀ ಶೀಘ್ರದಲ್ಲಿ ನೇಮಕಾತಿ ಮಾಡುತ್ತೇವೆ ಎಂದು ದಿನಕ್ಕೊಂದು ಹೇಳಿಕೆ ನೀಡುತ್ತಿರುವುದು ಭ್ರಮನಿರಸನ ಉಂಟು ಮಾಡಿದೆ. ಈ ಘೋಷಣೆ ಮಾಡಿ ಐದು ತಿಂಗಳಾದರೂ ಅಧಿಸೂಚನೆ ಹೊರಡಿಸಿಲ್ಲ. ಇದರಿಂದ ಆಕಾಂಕ್ಷಿಗಳ ವಯೋಮಿತಿ ಮೀರುತ್ತಿದ್ದು, ಸರ್ಕಾರದ ನೀಡಿರುವ 5 ವರ್ಷದ ವಯೋಮಿತಿ ಸಡಿಲಿಕೆ ಪ್ರಯೋಜನಕ್ಕೆ ಬರುವುದಿಲ್ಲ. ಹೀಗಾಗಿ ಉದ್ಯೋಗಾಕಾಂಕ್ಷಿಗಳು ಸರ್ಕಾರದ ಘೋಷಣೆ ನಂಬಲಾಗದೆ ವಿಶ್ವಾಸ ಕಳೆದುಕೊಂಡು ಮತ್ತೆ ಹೋರಾಡಲು ಬೀದಿಗಿಳಿದಿದ್ದಾರೆ. ಈ ಮಧ್ಯೆ ಕೆಪಿಎಸ್‌ಸಿ ನಡೆಸಿದ ಕೆಎಎಸ್ ಪರೀಕ್ಷೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಬಗ್ಗೆಯೂ ವರದಿ ಬಂದಿದ್ದು ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಆಗ್ರಹಿಸಲಾಯಿತು.
ಹೋರಾಟ ಸಮಿತಿಯ ರಾಜ್ಯ ಸಹ ಸಂಚಾಲಕರಾದ ಭವಾನಿ ಶಂಕರ್ ಗೌಡ, ಜಿಲ್ಲಾ ಸಂಚಾಲಕ ವೀರೇಶ್ ನರೇಗಲ್, ಹನುಮಗೌಡ ದಾಸಿಗೌಡರ್, ಅಮೃತ್ ಜಿ ಕೊಂಡಿಕೊಪ್ಪ, ಯಲ್ಲಪ್ಪ ದೊರೆ, ಹನುಮಂತ ಇದ್ದರು.