ಮೂಡುಬಿದಿರೆ: ಇಲ್ಲಿನ ಮೂಡುಬಿದಿರೆ ಕೋ-ಆಪರೇಟಿವ್ ಸರ್ವೀಸ್ ಸೊಸೈಟಿ ಲಿಮಿಟೆಡ್ ವತಿಯಿಂದ ನವೆಂಬರ್ 14 ರಿಂದ20 ರವರೆಗೆ `ಸಹಕಾರ ಸಪ್ತಾಹ ಸಂಭ್ರಮ'''''''' ಹಮ್ಮಿಕೊಳ್ಳಲಾಗಿದ್ದು, ಸೊಸೈಟಿಯ ಕಲ್ಪವೃಕ್ಷ ಸಭಾಭವನದಲ್ಲಿ `ಸಪ್ತ ಸಂಧ್ಯಾ - ಸಹಕಾರಿ ಚಿಂತನ ಸರಣಿ ಮತ್ತು ಸಾಂಸ್ಕೃತಿಕ ವೈಭವ'''''''' ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಹೇಳಿದರು.
ಸಪ್ತಾಹದ ಪ್ರತಿದಿನ ಸಂಜೆ 6 ಗಂಟೆಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ, ಆ ಬಳಿಕ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ನ.15ರಂದು ಸಹಕಾರ-ಪರಿಸರ, ಕೃಷಿ, ಪಶುಸಂಗೋಪನೆ ಉಪನ್ಯಾಸ ಹಾಗೂ ಗ್ರಾಮೀಣ ಅಭಿವೃದ್ಧಿ ದಿನಾಚರಣೆ, ನ 16ರಂದು ಸಮಗ್ರ ಸಾಧಕ ಪ್ರಶಸ್ತಿ'''''''' ಪ್ರದಾನ ನಡೆಯಲಿದೆ. ನ.17ರಂದು ಸಹಕಾರ ಮತ್ತು ಮಾನವೀಯ ಮೌಲ್ಯಗಳು ವಿಚಾರದ ಕುರಿತು ಉಪನ್ಯಾಸ, ನ.18ರಂದು ಸಹಕಾರ-ಉಚಿತ ಕಾನೂನು ಸೇವೆ ಉಪನ್ಯಾಸ, ನ.19ರಂದು ಸಹಕಾರ ಮತ್ತು ರಾಷ್ಟ್ರೀಯ ಚಿಂತನೆ ಹಾಗೂ ನ.20ರಂದು ಸಹಕಾರ-ಯುವಜನ ಸೇವೆ ಕುರಿತು ಉಪನ್ಯಾಸ ನಡೆಯಲಿದೆ. ನ16ರಂದು ಬೆಳಗ್ಗೆ 10ಗಂಟೆಯಿಂದ ಉಚಿತ ವೈದ್ಯಕೀಯ ತಪಾಸಣೆ ನಡೆಯಲಿದೆ ಎಂದರು.ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ. ಮಾತನಾಡಿ, ಸಪ್ತಾಹದ ಪ್ರತಿದಿನ ವಿವಿಧ ಕ್ಷೇತ್ರಗಳ ಸಾಧಕರು, ಸಂಘ ಸಂಸ್ಥೆಗಳನ್ನು ಗೌರವಿಸಲಾಗುವುದು. ಈ ಬಾರಿ ಸಹಕಾರ ಸಪ್ತಾಹದಲ್ಲಿ 30 ಕ್ಕೂ ಅಧಿಕ ಮಂದಿ ಸಾಧಕರು ಹಾಗೂ ಸಂಘ ಸಂಸ್ಥೆಗಳನ್ನು ಗೌರವಿಸಲಾಗುವುದು. ವಿಶೇಷವಾಗಿ ಮೂಡುಬಿದಿರೆಯ ಹುಲಿವೇಷ ತಂಡಗಳಿಗೆ ಗೌರವ, ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ದೇಣಿಗೆ , ನಿವೃತ್ತರಾಗಲಿರುವ ಸಿಇಒ ಕೆ.ರಘುವೀರ್ ಕಾಮತ್ ಹಾಗೂ ಸಿಬ್ಬಂದಿ ಶೇಖರ್ ಅವರನ್ನು ಸನ್ಮಾನಿಸಲಾಗುವುದು ಎಂದರು.