ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಗುರುವಾರ ಸಮತಾ ಸೈನಿಕದಳದ ವತಿಯಿಂದ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಅಂದು ದೇಶದಾದ್ಯಂತ ಆಚರಣೆಯಲ್ಲಿದ್ದ ಅಮಾನುಷ, ಕಠೋರ ಅಸ್ಪೃಶ್ಯತೆ ವಿರುದ್ಧ ಬಂಡಾಯದ ಬಾವುಟ ಹಾರಿಸಿ ಶ್ರೇಣಿಕೃತ ಜಾತಿ ಪದ್ಧತಿಯ ನಿರ್ಮೂಲನೆಗಾಗಿ ಜಾಗೃತಿ ಮೂಡಿಸಿ, ಜನಾಂದೋಲನಕ್ಕೆ 33 ವರ್ಷದ ಯುವಕ ಡಾ.ಬಿ.ಆರ್. ಅಂಬೇಡ್ಕರ್ ಅವರು ಕರೆಕೊಟ್ಟ ಮಹಾಪರ್ವ ಕಾಲವದು.
ಅವರ ಮುಂದಾಳತ್ವದಲ್ಲಿ ಮಹಾಡ್‌ನ ಚೌದರ್ ಕೆರೆ ನೀರು ಮುಟ್ಟಿದ, ನಾಸಿಕ್‌ನ ಕಲಾರಾಂ ಮಂದಿರ ಪ್ರವೇಶ ಮಾಡಿದ ಹೋರಾಟಗಳು ''ಸ್ವಾಭಿಮಾನಿ ಚಳವಳಿ''ಗೆ ನಾಂದಿ ಹಾಡಿದ್ದು ಇದೇ ಕಾಲಘಟ್ಟದಲ್ಲಿ. ಆದ್ದರಿಂದಲೇ ದೇಶದ ಹೋರಾಟಗಳ ಚರಿತ್ರೆಯಲ್ಲಿ 1920ರ ದಶಕವನ್ನು ಪ್ರಪಥಮ ಬಾರಿಗೆ ದಲಿತ ಜನಾಂಗವು ದಂಗೆ ಎದ್ದ ದಶಕವೆಂದು ಕರೆಯಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಎಸ್.ಎಸ್.ಡಿಯ ಜಿ.ಈಶ್ವರಪ್ಪ, ಜಿ.ಅಶ್ವತ್ತಪ್ಪ, ಜಿ.ಎನ್.ವಿ.ಬಾಬಣ್ಣ, ಈಧರೆ ಪ್ರಕಾಶ್, ಮುನಿ ಆಂಜಿನಪ್ಪ ಮತ್ತಿತರರು ಇದ್ದರು.
ಸಿಕೆಬಿ-2 ಸುದ್ದಿಗೋಷ್ಠಿಯಲ್ಲಿ ಜಿ.ಸಿ. ವೆಂಕಟರಮಣಪ್ಪ ಮಾತನಾಡಿದರು