ಈಗ ಬಿಜೆಪಿಯವರೂ ಬಂದು ಗ್ಯಾರಂಟಿಯ ಮಾಹಿತಿ ಪಡೆಯುತ್ತಿದ್ದಾರೆ: ಎಚ್.ಎಂ.ರೇವಣ್ಣ

KannadaprabhaNewsNetwork |  
Published : Feb 19, 2025, 12:48 AM IST
ರೇವಣ್ಣ | Kannada Prabha

ಸಾರಾಂಶ

ಹರ್ಕಲ್ ಸೀರೆ ಮುರ್ಕಲ್ ಸೈಕಲ್ ಬಿಜೆಪಿಯ ಸಾಧನೆ. ಬಿಜೆಪಿಯಿಂದ ಒಂದಾದರೂ ಜನಪರ ಕಾರ್ಯಕ್ರಮ ಇದೆಯಾ? ಬಿಜೆಪಿಯವರು ಒಂದು ರುಪಾಯಿ ಕಾರ್ಯಕ್ರಮಕ್ಕೆ ನೂರು ರುಪಾಯಿ ಪ್ರಚಾರ ಪಡೆದುಕೊಳ್ಳುತ್ತಾರೆ. ಆದರೆ ನಾವು ನೂರು ರುಪಾಯಿ ಖರ್ಚು ಮಾಡಿದ್ರು ಒಂದು ರೂಪಾಯಿಯ ಪ್ರಚಾರವನ್ನೂ ಪಡೆಯುವುದಿಲ್ಲ ಎಂದು ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಉಡುಪಿರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ಲೇವಡಿ ಮಾಡುತ್ತಿದ್ದ ಬಿಜೆಪಿಯ ಆಡಳಿತವಿರುವ ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಈಗ ಗ್ಯಾರೆಂಟಿಗಳನ್ನು ಘೋಷಿಸಲಾಗಿದೆ. ಅದಕ್ಕಾಗಿ ಆ ರಾಜ್ಯದ ಬಿಜೆಪಿ ಶಾಸಕರು ನಮ್ಮಲ್ಲಿ ಬಂದು ಅದರ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದು ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಹೇಳಿದರು.

ಉಡುಪಿ ಜಿ.ಪಂ. ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪಂಚ ಗ್ಯಾರೆಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಹೇಳಿದರು.ಕೇಂದ್ರದಲ್ಲಿ ಬೇಕಾದಷ್ಟೂ ಅಕ್ಕಿ ದಾಸ್ತಾನು ಇದ್ದರೂ, ನಮ್ಮ ರಾಜ್ಯ ಸರ್ಕಾರಕ್ಕೆ ಹೆಸರು ಬರುತ್ತದೆ ಎಂದು ಅಕ್ಕಿ ನೀಡುತ್ತಿಲ್ಲ. ಆದರೂ ರಾಜ್ಯ ಸರ್ಕಾರ 5 ಕೆ.ಜಿ. ಅಕ್ಕಿ ಹಾಗೂ 5 ಕೆ.ಜಿ. ಅಕ್ಕಿಗೆ ದುಡ್ಡು ಬಡವರ ಖಾತೆಗೆ ಜಮಾ ಮಾಡುತ್ತಿದೆ. ಅಂದು ಕೇಳಿದಾಗ ಅಕ್ಕಿ ಕೊಟ್ಟಿಲ್ಲ. ಈ ಬಗ್ಗೆ ರಾಜ್ಯದ ಒಬ್ಬ ಬಿಜೆಪಿ ಎಂಪಿ, ಒಬ್ಬ ಕೇಂದ್ರ ಸಚಿವನೂ ಮಾತನಾಡಿಲ್ಲ, ಆದರೂ ನಾವು ನುಡಿದಂತೆ ನಡೆದು ಐದು ಭಾಗ್ಯಗಳನ್ನು ಕೊಟ್ಟಿದ್ದೇವೆ ಎಂದರು.ಹರ್ಕಲ್ ಸೀರೆ ಮುರ್ಕಲ್ ಸೈಕಲ್ ಬಿಜೆಪಿಯ ಸಾಧನೆ. ಬಿಜೆಪಿಯಿಂದ ಒಂದಾದರೂ ಜನಪರ ಕಾರ್ಯಕ್ರಮ ಇದೆಯಾ? ಬಿಜೆಪಿಯವರು ಒಂದು ರುಪಾಯಿ ಕಾರ್ಯಕ್ರಮಕ್ಕೆ ನೂರು ರುಪಾಯಿ ಪ್ರಚಾರ ಪಡೆದುಕೊಳ್ಳುತ್ತಾರೆ. ಆದರೆ ನಾವು ನೂರು ರುಪಾಯಿ ಖರ್ಚು ಮಾಡಿದ್ರು ಒಂದು ರೂಪಾಯಿಯ ಪ್ರಚಾರವನ್ನೂ ಪಡೆಯುವುದಿಲ್ಲ ಎಂದವರು ಹೇಳಿದರು.ಸಿದ್ರಾಮಯ್ಯ ಮುಂದುವರಿತಾರೆ:

ರಾಜ್ಯ ಸರ್ಕಾರದೊಳಗೆ ಭಿನ್ನಮತದ ಬಗ್ಗೆ ಪ್ರತಿಕ್ರಿಯಿಸಿದ ರೇವಣ್ಣ, ನಾನು ರಾಜಕಾರಣಿ ಇರಬಹುದು, ಆದರೆ ಈಗ ನಾನು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ. ಆದ್ದರಿಂದ ನಾನು ರಾಜಕೀಯದ ವಿಚಾರ ಮಾತನಾಡುವುದಿಲ್ಲ. ರಾಜಕೀಯ ವಿಚಾರಗಳನ್ನು ನಮ್ಮ ಪಕ್ಷದ ಹಿರಿಯರು ನೋಡಿಕೊಳ್ಳುತ್ತಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾರೆ, ಆದ್ದರಿಂದ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ, ಅವರೆ ಮುಂದುವರಿಯುತ್ತಾರೆ ಎಂದರು.

PREV

Recommended Stories

ಸ್ವಾತಂತ್ರ್ಯಕ್ಕಾಗಿ 6.72 ಲಕ್ಷ ಜನ ಮರಣ
ಸಿಡಿದೆದ್ದ ಧರ್ಮಸ್ಥಳ ಭಕ್ತ ಅಭಿಮಾನಿಗಳು