ಕನ್ನಡಪ್ರಭ ವಾರ್ತೆ ಬೆಂಗಳೂರು
ವಿಧಾನಸೌಧದಲ್ಲಿ ನಡೆದ ನಂದಿನಿ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಡಾ। ಶಿವಸ್ವಾಮಿ, ಶಾಸಕರಾದ ನಂಜೇಗೌಡ, ಅಶೋಕ್ ಕುಮಾರ್ ರೈ ಇದ್ದರು.
ಎನ್-ಪ್ರೊಮಿಲ್ಕ್, ಪನೀರ್(ಮೀಡಿಯಂ ಫ್ಯಾಟ್), ಗುಡ್‌ಲೈಫ್ ಶುದ್ಧ ತುಪ್ಪ (ಹೈ ಅರೋಮಾ), ನಂದಿನಿ ಶುದ್ಧ ತುಪ್ಪ (ಕ್ಯೂಆರ್ ಕೋಡ್‌ನೊಂದಿಗೆ), ಪ್ರೊಬಯೋಟಿಕ್ ಮೊಸರು, ಪ್ರೊಬಯೋಟಿಕ್ ಮಾವಿನ ಲಸ್ಸಿ, ಪ್ರೊಬಯೋಟಿಕ್ ಸ್ಟ್ರಾಬೆರಿ ಲಸ್ಸಿ, ಡೇರಿ ವೈಟ್ನರ್, ನಂದಿನಿ ಹಸುವಿನ ಹಾಲು (₹10), ನಂದಿನಿ ಮೊಸರು (₹10) ಹೊಸದಾಗಿ ಬಿಡುಗಡೆಯಾಗಿರುವ ನಂದಿನಿ ಉತ್ಪನ್ನಗಳಾಗಿವೆ.ಎನ್-ಪ್ರೋಮಿಲ್ಕ್:
ಇದು ಸಾಮಾನ್ಯ ಟೋನ್ಡ್ ಹಾಲಿಗಿಂತ ಶೇ.18ರಷ್ಟು ಹೆಚ್ಚಿನ ಪ್ರಮಾಣದ ಪ್ರೊಟೀನ್ ಹೊಂದಿದೆ. ಪ್ರಸ್ತುತ ಅರ್ಧ ಲೀಟರ್ ಪೊಟ್ಟಣದಲ್ಲಿ ₹27ಕ್ಕೆ ಮಾರುಕಟ್ಟೆಗೆ ಬರಲಿದೆ.ಪನೀರ್ (ಮೀಡಿಯಂ ಫ್ಯಾಟ್):
ಸಾಮಾನ್ಯ ಪನೀರ್‌ಗಿಂತ ಕಡಿಮೆ ಜಿಡ್ಡಿನಾಂಶ ಮತ್ತು 50 ಗ್ರಾಂ. ಪ್ರೊಟೀನ್ ಹೊಂದಿದೆ. 200 ಗ್ರಾಂ. ಪೊಟ್ಟಣದಲ್ಲಿ 90 ರು.ನಂತೆ ನಿಗದಿಪಡಿಸಲಾಗಿದ್ದು, 5 ರು.ಆರಂಭಿಕ ರಿಯಾಯಿತಿಯೂ ಇರಲಿದೆ.ಗುಡ್‌ಲೈಫ್ ಶುದ್ಧ ತುಪ್ಪ (ಹೈ ಅರೋಮಾ-ಕ್ಯೂಆರ್ ಕೋಡ್‌ನೊಂದಿಗೆ): ಪ್ರಸ್ತುತ ಅರ್ಧ ಲೀಟರ್ ಮತ್ತು 1 ಲೀಟರ್ ಪೊಟ್ಟಣದಲ್ಲಿ ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ. 500 ಮಿ.ಲೀ. ತುಪ್ಪ ₹380 ಮತ್ತು 1 ಲೀಟರ್ ₹760 ನಂತೆ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.
ನಂದಿನಿ ಶುದ್ಧ ತುಪ್ಪ:200 ಮಿ.ಲೀ. (₹165), 500 ಮಿ.ಲೀ. (₹360) ಮತ್ತು 1 ಲೀಟರ್ ಜಾರ್‌ಗಳಲ್ಲಿ (₹760) ಬಿಡುಗಡೆಗೊಳಿಸಲಾಗಿದೆ. ಈ ಹೊಸ ಉತ್ಪನ್ನದ ಪ್ಯಾಕ್ ಮೇಲೆಯೂ ಕ್ಯೂ ಆರ್ ಕೋಡ್ ಇದ್ದು, ಮಾಹಿತಿ ಪಡೆಯಬಹುದು.
ಪ್ರೊಬಯೋಟಿಕ್ ಮೊಸರು: ಇದು ಜೀವಂತ ಲಾಭದಾಯಕ ಬ್ಯಾಕ್ಟೀರಿಯಾಗಳಿಂದ ತಯಾರಿಸಲ್ಪಟ್ಟಿದೆ. ಇದು 200 ಗ್ರಾಂ. ಪ್ಯಾಕ್‌ನಲ್ಲಿ ಲಭ್ಯವಿದ್ದು, ₹35 ನಿಗದಿಪಡಿಸಲಾಗಿದೆ. ಶೇ.5 ರಿಯಾಯಿತಿಯೂ ಇರಲಿದೆ.ಪ್ರೊಬಯೋಟಿಕ್ ಮಾವಿನ ಲಸ್ಸಿ ಮತ್ತು ಪ್ರೊಬಯೋಟಿಕ್ ಸ್ಟ್ರಾಬೆರಿ ಲಸ್ಸಿ: 160 ಮಿ.ಲೀ. ಪೊಟ್ಟಣದಲ್ಲಿ ₹15ಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಡೇರಿ ವೈಟ್ನರ್: ಇದು ಸಕ್ಕರೆ ಸೇರಿಸಿದ ಹಾಲಿನ ಪುಡಿಯಾಗಿದೆ. ದೀರ್ಘಾವಧಿ ಹೊಂದಿದ್ದು ಸಂಗ್ರಹಿಸಲು ಮತ್ತು ಸಾಗಿಸಲು ಸುಲಭವಾಗಿದೆ. 14 ಗ್ರಾಂ- ₹5, 28 ಗ್ರಾಂ- ₹10, 200 ಗ್ರಾಂ- ₹90, 500 ಗ್ರಾಂ- ₹180, 1 ಕೇಜಿಗೆ ₹355 ಮತ್ತು 10 ಕೇಜಿಗೆ ₹3400ಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.ನಂದಿನಿ ಹಸುವಿನ ಹಾಲು ಎಲ್ಲ, ವರ್ಗದ ಗ್ರಾಹಕರಿಗೆ ಲಭ್ಯವಾಗುವಂತೆ 160 ಮಿ.ಲೀ. ಪೊಟ್ಟಣದಲ್ಲಿ ₹10ಕ್ಕೆ ಸಿಗಲಿದೆ. ನಂದಿನಿ ಮೊಸರು ಕೂಡ 140 ಗ್ರಾಂ ಪೊಟ್ಟಣದಲ್ಲಿ ₹10ಕ್ಕೆ ಲಭ್ಯವಿದೆ.