ಪ್ರಸ್ತುತ ವ್ಯವಹಾರ ಬಹುತೇಕ ಡಿಜಿಟಲ್‌

KannadaprabhaNewsNetwork |  
Published : Jul 10, 2025, 12:49 AM IST
ಡಿಜಿಟಲೀಕರಣದಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿ: ಗುಡದಿನ್ನಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜಾಗತೀಕರಣದ ಪ್ರಸ್ತುತ ಸಂದರ್ಭದಲ್ಲಿ ವ್ಯವಹಾರಗಳು ಬಹುತೇಕ ಡಿಜಿಟಲೀಕರಣಗೊಂಡಿವೆ. ಹೀಗಾಗಿ ಡಿಜಿಟಲೀಕರಣದಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭಾರಿ ಬದಲಾವಣೆಯಾಗಿದೆ. ತಾಂತ್ರೀಕರಣದ ಬದಲಾವಣೆಗೆ ತಕ್ಕಂತೆ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಡಿಜಿಟಲೀಕರಣಕ್ಕೆ ಒಗ್ಗಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಾಗತೀಕರಣದ ಪ್ರಸ್ತುತ ಸಂದರ್ಭದಲ್ಲಿ ವ್ಯವಹಾರಗಳು ಬಹುತೇಕ ಡಿಜಿಟಲೀಕರಣಗೊಂಡಿವೆ. ಹೀಗಾಗಿ ಡಿಜಿಟಲೀಕರಣದಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭಾರಿ ಬದಲಾವಣೆಯಾಗಿದೆ. ತಾಂತ್ರೀಕರಣದ ಬದಲಾವಣೆಗೆ ತಕ್ಕಂತೆ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಡಿಜಿಟಲೀಕರಣಕ್ಕೆ ಒಗ್ಗಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ ಹೇಳಿದರು.

ನಬಾರ್ಡ್‌ ಹಾಗೂ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಹಯೋಗದಲ್ಲಿ ವಿಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪ್ಯಾಕ್ಸುಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಹಾಗೂ ಬ್ಯಾಂಕ್‌ ಗ್ರಾಹಕರಿಗೆ ಎಂ-ಪಾಸ್ ಮಶಿನ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಧುನಿಕತೆಗೆ ತಕ್ಕಂತೆ ಬದಲಾವಣೆಗೆ ಹೊಂದಿಕೊಳ್ಳುವುದು ಅನಿವಾರ್ಯ ಎಂದರು.

ವಿಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎ.ಢವಳಗಿ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಡಿಜಿಟಿಲೀಕರಣದಲ್ಲಿ ನಗದು ರಹಿತ ವ್ಯವಹಾರದ ವ್ಯವಸ್ಥೆಯಲ್ಲಿ ಡಿಸಿಸಿ ಬ್ಯಾಂಕ್‌ ಇತರೆ ವಾಣಿಜ್ಯ ಬ್ಯಾಂಕ್‌ಗಳಿಗಿಂತ ಮುಂಚೂಣಿಯಲ್ಲಿದೆ. ಗ್ರಾಹಕರು ನಗದು ರಹಿತ ವ್ಯವಹಾರ ಮಾಡಿ, ಇದರ ಸದುಪಯೋಗ ಪಡೆಯಬೇಕು ಎಂದು ಕರೆ ನೀಡಿದರು.

ಹಂಸದ್ವನಿ ಜನಜಾಗೃತಿ ಗಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಕಲಾ ತಂಡದವರು ವಿಡಿಸಿಸಿ ಬ್ಯಾಂಕ್ ಹಾಗೂ ಸರ್ಕಾರದ ವಿವಿಧ ಯೋಜನೆಗಳು ಮತ್ತು ವಿವಿಧ ಸೇವೆಗಳು, ವಿವಿಧ ವಿಮೆ ಸೌಲಭ್ಯಗಳು ಹಾಗೂ ಡಿಜಿಟಲಿಕರಣದ ಕುರಿತಂತೆ ಕಿರು ನಾಟಕ ಪ್ರದರ್ಶಿಸಿದರು.

ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ಸತೀಶ ಪಾಟೀಲ ಸ್ವಾಗತಿಸಿದರು. ಎಮ್.ಜಿ.ಬಿರಾದಾರ ವಂದಿಸಿದರು. ಬ್ಯಾಂಕ್‌ ಉಪ ಪ್ರಧಾನ ವ್ಯವಸ್ಥಾಪಕ ಎಸ್.ಬಿ.ಪಾಟೀಲ, ಪಿ.ವೈ.ಡೆಂಗಿ, ಜೆ.ಬಿ.ಪಾಟೀಲ, ಆರ್.ಎಮ್.ಪಾಟೀಲ ಸೇರಿದಂತೆ ಜಿಲ್ಲೆಯ ಪ್ಯಾಕ್ಸುಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

----

ಕೋಟ್‌

ಎಂಪಿಒಎಸ್ ಮಶಿನ್ ಬಳಕೆ ಕುರಿತು ಬ್ಯಾಕಿಂಗ್ ಕ್ಷೇತ್ರದಲ್ಲಿರುವವರು ಅಗತ್ಯ ಜ್ಞಾನ ಹೊಂದಿರಬೇಕಿದೆ. ನಗದು ರಹಿತ ವ್ಯವಹಾರ, ಹಣ ವರ್ಗಾವಣೆ ಮತ್ತು ಮೊಬೈಲ್ ಆ್ಯಪ್‌ಗಳ ಬಳಕೆ ಕುರಿತು ಅರಿವು ಹೊಂದಿರುವುದು ಅಗತ್ಯವಾಗಿದೆ ಎಂದು ಹೇಳಿದರು.ರೈತ ಜನರು ಬೀಜ, ಗೊಬ್ಬರ, ಕೀಟನಾಶಕ ಸೇರಿದಂತೆ ಕೃಷಿ ಹಾಗೂ ದೈನಂದಿನ ವ್ಯವಹಾರ, ವಸ್ತುಗಳನ್ನು ಖರೀದಿಸಲು ಅಂಗಡಿಗಳಲ್ಲಿನ ಎಂ-ಪಾಸ್ ಮಶಿನ್ ಉಪಯೋಗಿಸುವುದು ಸಾಮಾನ್ಯ. ಈಗಾಗಲೇ ನಬಾರ್ಡ್‌ ಸಹಾಯಧನದಲ್ಲಿ ಬ್ಯಾಂಕ್‌ ಮತ್ತು ಪ್ಯಾಕ್ಸುಗಳಿಗೆ ಮೈಕ್ರೋ ಎಟಿಎಮ್ ಒದಗಿಸಲಾಗಿದ್ದು, ಗ್ರಾಹಕರು ಸದುಪಯೋಗ ಪಡೆದುಕೊಳ್ಳಬೇಕು.

ವಿಕಾಸ ರಾಠೋಡ, ನಬಾರ್ಡ್‌ ಡಿಡಿಎಂ

PREV

Recommended Stories

ಜಿಬಿಎ, 5 ಪಾಲಿಕೆಗೆ ಅಧಿಕಾರಿಗಳ ಹುದ್ದೆ ಮರು ವಿನ್ಯಾಸ
ಸಮಾಜದ ಒಳಿತಿಗೆ ಒಟ್ಟಾಗಿ ಹೆಜ್ಜೆಯಿಡಿ : ಎಚ್‌.ಡಿ.ದೇವೇಗೌಡ