ಕಾಮಗಾರಿಗಳ ಅನುಷ್ಟಾನಕ್ಕೆ ನರೇಗಾ ಸಹಕಾರಿ

KannadaprabhaNewsNetwork |  
Published : Nov 16, 2025, 02:45 AM IST
ಪೋಟೊ15ಕೆಎಸಟಿ1: ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಪಂ ವ್ಯಾಪ್ತಿಯ ಕೆ ಬೋದುರ ಗ್ರಾಮದಲ್ಲಿ ನಡೆದ ನರೇಗಾ ಯೋಜನೆಯ ವಾರ್ಡಸಭೆ ಹಾಗೂ 2026-27ನೇ ಸಾಲಿನ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಕಾರ್ಮಿಕ ಆಯ-ವ್ಯಯ ತಯಾರಿಕೆಯ ಸಭೆಯಲ್ಲಿ ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ ಮಾತನಾಡಿದರು. | Kannada Prabha

ಸಾರಾಂಶ

ನರೇಗಾ ಯೋಜನೆಯಲ್ಲಿ ಗ್ರಾಪಂ ಮೂಲಕ ಕೃಷಿ ಅರಣ್ಯ ಮತ್ತು ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಕಾಮಗಾರಿ ಕೈಗೊಳ್ಳಬಹುದಾಗಿದ್ದು

ಕುಷ್ಟಗಿ: ನರೇಗಾ ಯೋಜನೆಯಲ್ಲಿ ಗ್ರಾಪಂ ಮೂಲಕ ಕೃಷಿ ಅರಣ್ಯ ಮತ್ತು ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಕಾಮಗಾರಿ ಕೈಗೊಳ್ಳಬಹುದಾಗಿದ್ದು, ರೈತರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ತಾಪಂ ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ ಹೇಳಿದರು.

ತಾಲೂಕಿನ ಬಿಜಕಲ್ ಗ್ರಾಪಂನ ಕೆ.ಬೋದುರು ಗ್ರಾಮದ ಆಂಜನೇಯ ದೇವಸ್ಥಾನ ಆವರಣದಲ್ಲಿ ಜರುಗಿದ ನರೇಗಾ ಯೋಜನೆಯ ವಾರ್ಡ್‌ ಸಭೆ ಹಾಗೂ 2026-27ನೇ ಸಾಲಿನ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕಾರ್ಮಿಕ ಆಯ-ವ್ಯಯ ತಯಾರಿಕೆಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತರು ಅವಶ್ಯವಿರುವ ವೈಯಕ್ತಿಕ ಕಾಮಗಾರಿ ಅನುಷ್ಠಾನ ಮಾಡಬಹುದು ಕೂಲಿ ಮತ್ತು ಸಾಮಗ್ರಿ ಹಣದಿಂದ ಅನುಕೂಲವಾಗುತ್ತದೆ ಎಂದರು.

ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಮಳಿಮಠ ಅವರು 2026-27ನೇ ಸಾಲಿನ ಕಾರ್ಮಿಕ ಆಯ-ವ್ಯಯದ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ರೈತರಿಂದ, ಕೂಲಿಕಾರರಿಂದ ಕಾಮಗಾರಿ ಬೇಡಿಕೆ ನಮೂನೆ ಸ್ವೀಕರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಸಂಗಪ್ಪ ತೆಗ್ಗಿನಮನಿ, ಐಇಸಿ ಸಂಯೋಜಕ ಚಂದ್ರಶೇಖರ ಜಿ, ತಾಂತ್ರಿಕ ಸಂಯೋಜಕ ಬಸವರಾಜ ಕೆ, ಗ್ರಾಪಂ ಸದಸ್ಯ ಶರಣೆಗೌಡ ಮಾಲಿಪಾಟೀಲ್, ಆನಂದಪ್ಪ ಕತ್ತಿ, ಗ್ರಾಪಂ ಸಿಬ್ಬಂದಿ ನಿಲಕಂಠಪ್ಪ, ಹನುಮಂತಪ್ಪ, ದುರುಗೇಶ, ಸ್ವಾತಿ, ನೀರುಪಾದಿ ಹಾಗೂ ಕಾಯಕ ಬಂಧುಗಳು, ಮಹಿಳೆಯರು, ಗ್ರಾಮಸ್ಥರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರಣಿ ಸ್ಥಳಕ್ಕೆ ಎಡಿಸಿ ಭೇಟಿ: ಪಟ್ಟು ಬಿಡದ ರೈತರು
ಸಂಕ್ರಮಣದ ಸಂಭ್ರಮದ ತೆಪ್ಪೋತ್ಸವ