ನರೇಗಾ ಯೋಜನೆ ಕೂಲಿಕಾರರಿಗೆ ವರದಾನ

KannadaprabhaNewsNetwork |  
Published : Nov 16, 2025, 02:45 AM IST
ಪೋಟೊ11.11: ಕೊಪ್ಪಳ ತಾಲೂಕಿನ ಓಜನಹಳ್ಳಿ ಗ್ರಾಮ ಪಂಚಾಯತಿಯ ಚಿಲವಾಡಗಿ ಗ್ರಾಮದಲ್ಲಿ 2026-27ನೇ ಸಾಲಿನ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಕಾರ್ಮೀಕ ಆಯ-ವ್ಯಯ ತಯಾರಿಕೆ ಕುರಿತು ನರೇಗಾ ಯೋಜನೆಯ ವಾರ್ಡ ಸಭೆ ನಡೆಯಿತು. | Kannada Prabha

ಸಾರಾಂಶ

ರೈತರು‌ ವೈಯಕ್ತಿಕ ಕಾಮಗಾರಿ ಅನುಷ್ಠಾನಿಸಿರಿ. ಕೂಲಿ-ಸಾಮಗ್ರಿ ಹಣದಿಂದ ಅನುಕೂಲ

ಕೊಪ್ಪಳ: ಮಹಾತ್ಮಗಾಂಧಿ ನರೇಗಾ ಯೋಜನೆಯು ಗ್ರಾಮೀಣ ಭಾಗದ ರೈತರ, ಕೂಲಿಕಾರರಿಗೆ ವರದಾನವಾಗಿದೆ ಎಂದು ಜಿಪಂ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ ಹೇಳಿದರು.

ತಾಲೂಕಿನ ಓಜನಹಳ್ಳಿ ಗ್ರಾಪಂನ ಚಿಲವಾಡಗಿ ಗ್ರಾಮದಲ್ಲಿ ಜರುಗಿದ 2026-27ನೇ ಸಾಲಿನ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕಾರ್ಮಿಕ ಆಯ-ವ್ಯಯ ತಯಾರಿಕೆ ಕುರಿತು ನರೇಗಾ ಯೋಜನೆಯ ವಾರ್ಡ್‌ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಗ್ರಾಪಂ ಹಾಗೂ ಅನುಷ್ಠಾನ ಇಲಾಖೆಗಳಾದ ತೋಟಗಾರಿಕೆ, ಕೃಷಿ, ಅರಣ್ಯ,ರೇಷ್ಮೆ ಇಲಾಖೆಗಳಿಂದ ನರೇಗಾದಡಿ ಕಾಮಗಾರಿ ಅನುಷ್ಠಾನಿಸಲು ಅವಕಾಶ ಇರುತ್ತದೆ.ರೈತರು‌ ವೈಯಕ್ತಿಕ ಕಾಮಗಾರಿ ಅನುಷ್ಠಾನಿಸಿರಿ. ಕೂಲಿ-ಸಾಮಗ್ರಿ ಹಣದಿಂದ ಅನುಕೂಲವಾಗುತ್ತದೆಂದರು.

ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ, ವಾರ್ಡ್‌ ಸಭೆಗಳ ಮೂಲಕ ಗ್ರಾಪಂ ಕಾಮಗಾರಿ ಬೇಡಿಕೆ ಪಡೆಯಲು ವಾರ್ಡ್‌ ಸಭೆ ಜರುಗಿಸಲಾಗುತ್ತಿದ್ದು, ಕೂಲಿಕಾರರ, ರೈತರ ಬೇಡಿಕೆ ಸಲ್ಲಿಸಲು ಇದೊಂದು ಸದಾವಕಾಶ ಇರುವದರಿಂದ ಯಾವ ಕಾಮಗಾರಿ ಅವಶ್ಯಕತೆ ಇದೆ ಎಂಬುದನ್ನು ಮನದಟ್ಟು ಮಾಡಿಕೊಂಡು ಕಾಮಗಾರಿ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು ಎಂದರು.

ವೈಯಕ್ತಿಕ ಕಾಮಗಾರಿ ಜಾನುವಾರು ಶೆಡ್‌, ಮೆಕೆಶೆಡ್‌, ಕೃಷಿಹೊಂಡ, ಬದು ನಿರ್ಮಾಣ, ಕೊಳಿ ಶೆಡ್‌ ಇತ್ಯಾದಿ ಮಾಡಿಕೊಳ್ಳಲು ಅವಕಾಶ ಇರುವದನ್ನು ಬಳಕೆ ಮಾಡಿಕೊಳ್ಳಲು ಹಾಜರಿದ್ದ ರೈತರಿಗೆ, ಸಂಜಿವಿನಿ ಯೋಜನೆಯ ಮಹಿಳೆಯರಿಗೆ ತಿಳಿಸಿದರು.

ರೈತರಿಂದ, ಕೂಲಿಕಾರರಿಂದ ಕಾಮಗಾರಿ ಬೇಡಿಕೆಯ ನಮೂನೆ ಸ್ವೀಕರಿಸಲಾಯಿತು. ಗ್ರಾಪಂ ಅಧ್ಯಕ್ಷ ಉಡಚಪ್ಪಭೋವಿ, ಕಾರ್ಯದರ್ಶಿ ಆದಯ್ಯ, ಸದಸ್ಯರಾದ ಸಿದ್ದಪ ಹೊಸಗೇರಿ, ಚಿದಾನಂದಪ್ಪ ಪೂಜಾರ, ನಬೀಸಾಬ ಹಂಚಿನಾಳ, ಮುಕ್ಕಣ್ಣ ಹರಿಜನ ಗ್ರಾಮ ಕಾಯಕ ಮಿತ್ರ ಮೆಹಬೂಬಿ ದೊಡ್ಡಮನಿ, ಗ್ರಾಮಸ್ಥರು, ಮಹಿಳೆಯರು, ಗ್ರಾಪಂ ಸಿಬ್ಬಂದಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ