ನರೇಗಾ ದಿವಸ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಪಂ ಸಿಇಒಕನ್ನಡಪ್ರಭ ವಾರ್ತೆ ಕೊಪ್ಪಳ
ತಾಲೂಕಿನ ಇರಕಲ್ಲಗಡಾ ಗ್ರಾಮ ಪಂಚಾಯಿತಿಯಿಂದ ಯಲಮಗೇರಾ ಗ್ರಾಮದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಆಯೋಜಿಸಿದ್ದ ನರೇಗಾ ದಿವಸ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನರೇಗಾ ಯೋಜನೆಯಡಿ ಸಾಮುದಾಯಿಕ ಕಾಮಗಾರಿ ಮಾತ್ರವಲ್ಲದೇ ವೈಯಕ್ತಿಕ ಕಾಮಗಾರಿಗಳನ್ನು ಮಾಡಿಕೊಳ್ಳಲು ಅವಕಾಶವಿರುತ್ತದೆ. ದನದ ಶೆಡ್, ಕುರಿ ಶೆಡ್, ಕೋಳಿ ಶೆಡ್, ಹಂದಿ ಶೆಡ್, ತೋಟಗಾರಿಕೆ ಬೆಳೆ, ರೇಷ್ಮೆ ಬೆಳೆ ಕಾಮಗಾರಿ ಅನುಷ್ಠಾನ ಮಾಡಿಕೊಂಡು ಆರ್ಥಿಕ ಸಬಲರಾಗಬಹುದು. ಒಂದು ಆರ್ಥಿಕ ವರ್ಷದಲ್ಲಿ ಒಂದು ಕುಟುಂಬಕ್ಕೆ 100 ದಿನಗಳ ಕೆಲಸವನ್ನು ನೀಡಲಾಗುತ್ತದೆ. ನರೇಗಾ ಯೋಜನೆ ಜಾರಿಯಾಗಿ ಫೆ. 2ಕ್ಕೆ 19 ವರ್ಷಗಳು ಗತಿಸಿದ್ದು ಯೋಜನೆಯಿಂದ ಬಡಕುಟುಂಬಗಳು ಸಾಕಷ್ಟು ಪ್ರಯೋಜನೆ ಪಡೆದಿವೆ. ಇದರಿಂದ ಗ್ರಾಮೀಣ ಭಾಗದಲ್ಲಿ ಬಡತನ ನಿವಾರಣೆಯತ್ತ ಹೆಜ್ಜೆ ಇಟ್ಟಿದೆ.ಕೂಲಿಕಾರರಾದ ಪತಿ ನಿಂಗಪ್ಪ ಮತ್ತು ಪತ್ನಿ ನಿಂಗಮ್ಮ ಕಾಮನೂರು ನರೇಗಾದಡಿ ಬಹಳಷ್ಟು ವರ್ಷದಿಂದ ಕೂಲಿ ಕೆಲಸ ಮಾಡುತ್ತಾ ಬಂದಿದ್ದು, ಇಂತವರಿಗೆ ಯೋಜನೆ ಬಹಳಷ್ಟು ಅನುಕೂಲವಾಗಿದೆ. ಇಂತವರಿಗೆ ವಸತಿ ಯೋಜನೆಯಡಿ ಆಯ್ಕೆ ಮಾಡಲು ಆದ್ಯತೆ ನೀಡಲಾಗುತ್ತಿದೆ ಎಂದರು.
ತಾಪಂ ಇಒ ದುಂಡಪ್ಪ ತುರಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಮ ಪಂಚಾಯಿತಿಯಿಂದ ಆಯೋಜಿಸಿದ 5 ಕೆಜಿ ಕೇಕ್ ಕೂಲಿಕಾರರಿಂದ ಕತ್ತರಿಸಿದ ಮೇಲೆ ಹಿರಿಯ ನಾಗರಿಕ ನಿಂಗಪ್ಪ ಕಾಮನೂರು ಇವರಿಗೆ ಸ್ವತಃ ಸಿಇಒ ಕೇಕ್ ತಿನಿಸಿದ್ದರಿಂದ ಕೂಲಿಕಾರರರು ಖುಷಿಪಟ್ಟರು.
ಕಾರ್ಯಕ್ರಮದ ವೇದಿಕೆಯಲ್ಲಿ ಕೂಲಿಕಾರ ಮಹಿಳೆ ಹಾಗೂಲಿಂಗತ್ವ ಅಲ್ಪಸಂಖ್ಯಾತರೊಂದಿಗೆ ಸಾಮಾನ್ಯರಂತೆ ಜಿಪಂ ಸಿಇಒ ವೇದಿಕೆ ಹಂಚಿಕೊಂಡಡರು. ಇದು ಎಲ್ಲರ ಗಮನ ಸೆಳೆಯಿತು.
ಇರಕಲ್ಲಗಡಾ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಕೂಲಿಕಾರರಿಗೆ ಬಿಪಿ, ಶುಗರ್ ಪರೀಕ್ಷಿಸಲಾಯಿತು. ಸಣ್ಣ ಪುಟ್ಟ ಕಾಯಿಲೆಗಳಾದ ಜ್ವರ, ನೆಗಡಿ, ಕೆಮ್ಮು ಇತ್ಯಾದಿಗಳಿಗೆ ಇದೇ ಸಂದರ್ಭ ಮಾತ್ರೆ ವಿತರಿಸಲಾಯಿತು.
100 ದಿನಗಳ ಕೂಲಿ ಕೆಲಸ ನಿರ್ವಹಿಸಿದ 9 ಕುಟುಂಬಗಳಿಗೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಶಾಲು, ಹೂವಿನಹಾರ ಹಾಕುವುದರ ಮೂಲಕ ಕಾಯಕ ಸಮ್ಮಾನ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.