ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ತಾಲೂಕು ಪುಟ್ಟೇಗೌಡನಹುಂಡಿಯಲ್ಲಿ ಶುಕ್ರವಾರ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಎಸ್ಎಸ್ಎಸ್ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು, ಜಾತಿ, ಮತ, ಭ್ರಷ್ಟಾಚಾರ ಹೆಚ್ಚಾಗಿ ಪರಿಸ್ಥಿತಿ ಹದಗೆಟ್ಟಿದೆ. ಸೇವಾ ಮನೋಭಾವ ಇಲ್ಲದ ವ್ಯಕ್ತಿಯನ್ನು ಅನಾಗರಿಕ, ಸಮಾಜಕ್ಕೆ ಕಂಟಕಪ್ರಾಯ ಎಂದು ಪರಿಗಣಿಸಬೇಕು ಎಂದರು.
ಬುದ್ಧ, ಬಸವ, ಕನಕದಾಸ, ಗಾಂಧಿ, ಅಂಬೇಡ್ಕರ್ ಮೊದಲಾದ ಮಹನೀಯರ ತತ್ವಾದರ್ಶಗಳನ್ನು ಪಾಲಿಸದಿದ್ದಲ್ಲಿ ದೇಶದ ಅಭಿವೃದ್ಧಿ ಸಾಧ್ಯವಾಗದು ಎಂದು ಅವರು ಅಭಿಪ್ರಾಯಪಟ್ಟರು.ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಶಾರದಾ ಮಾತನಾಡಿ, ವಿದ್ಯೆ ವಿನಯವನ್ನು, ಬುದ್ಧಿ ಸಂಸ್ಕಾರವನ್ನು ಕಲಿಸಬೇಕು ಎಂದರು.
ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಚ್.ಎಂ. ಮಹದೇವಪ್ರಸಾದ್ ಮಾತನಾಡಿ, ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ, ಸಹಬಾಳ್ವೆಯನ್ನು ಎನ್ಎಸ್ಎಸ್ ಕಲಿಸುತ್ತದೆ. ಹೆಣ್ಣು ಮಕ್ಕಳು ಕೀಳರಿಮೆ ಬಿಡಬೇಕು ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಶಿಬಿರಕ್ಕೆ ಚಾಲನೆ ನೀಡಿದರು. ಗ್ರಾಪಂ ಮಾಜಿ ಸದಸ್ಯ ಮಂಜು ಪ್ರಕಾಶ್ ಮಾತನಾಡಿದರು.
ಕಾಲೇಜಿನ ಉಪ ಪ್ರಾಂಶುಪಾಲ ಡಾ.ಜಿ. ಪ್ರಸಾದಮೂರ್ತಿ ಸ್ವಾಗತಿಸಿದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ತ್ರಿವೇಣಿ ವಂದಿಸಿದರು.. ಮತ್ತೊರ್ವ ಕಾರ್ಯಕ್ರಮಾಧಿಕಾರಿ ಎಚ್.ಬಿ. ಬಸಪ್ಪ ಇದ್ದರು. ಶಿಬಿರಾರ್ಥಿ ಐಶ್ವರ್ಯ ನಿರೂಪಿಸಿದರು. ಶಿಬಿರಾರ್ಥಿಗಳು ಎನ್ಎಸ್ಎಸ್ ಗೀತೆ ಹಾಡಿದರು