ಕನ್ನಡಪ್ರಭ ವಾರ್ತೆ ವಿಜಯಪುರ
ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಎನ್‌ಎಸ್‌ಎಸ್ ಪ್ರಮುಖ ಸಾಧನವಾಗಿದೆ. ಈ ಮೂಲಕ ವಿದ್ಯಾರ್ಥಿಗಳು ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿವು ಪಡೆಯುವುದು ಮಹತ್ವದ್ದಾಗಿದೆ ಎಂದು ಸಿಕ್ಯಾಬ್ ಮಹಿಳಾ ಪಿಯು ಕಾಲೇಜಿನ ಪ್ರಾಂಶುಪಾಲೆ ಡಾ.ಸುಜಾತಾ ಕಟ್ಟಿಮನಿ ಹೇಳಿದರು.ಸಿಕ್ಯಾಬ್ ಎ.ಆರ್.ಎಸ್.ಇನಾಮದಾರ ಮಹಿಳಾ ಪದವಿ ಕಾಲೇಜು ಮತ್ತು ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ನಗರದ ಕಸ್ತೂರಿ ಕಾಲೋನಿಯಲ್ಲಿ ಆಯೋಜಿಸಲಾದ ಎನ್‌ಎಸ್‌ಎಸ್ ವಿಶೇಷ ಶಿಬಿರದ ಅತಿಥಿಯಾಗಿ ಮಾತನಾಡಿದರು. ಶಿಬಿರವು ವಿದ್ಯಾರ್ಥಿಗಳ ಮನಸ್ಸನ್ನು ವಿಕಸನಗೊಳಿಸುತ್ತದೆ ಮತ್ತು ಸಾಮಾಜಿಕ ಸೇವೆಗಳ ಬಗ್ಗೆ ಅರಿವು ಮೂಡಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಬಳಸಿಕೊಳ್ಳಲು ಒಂದು ವೇದಿಕೆಯಾಗಿದೆ ಎಂದರು.ಪದವಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಕೆ.ಯಡಹಳ್ಳಿ ಮಾತನಾಡಿ, ನಾವು ಪರಸ್ಪರ ಸಾಮಾಜಿಕ ಜವಾಬ್ದಾರಿಗಳನ್ನು ಕಲಿಯಬೇಕು. ಉತ್ತಮ ನಡವಳಿಕೆ ರೂಪಿಸಿಕೊಳ್ಳಬೇಕು. ಭಾರತಕ್ಕಾಗಿ ಯುವಕರು ಎಂಬ ಧ್ಯೇಯವಾಕ್ಯವನ್ನು ಗಮನದಲ್ಲಿಟ್ಟುಕೊಂಡು ಯುವಕರು ಕೆಲಸ ಮಾಡಬೇಕು ಎಂದು ಹೇಳಿದರು.
ಈ ಪ್ರದೇಶದಲ್ಲಿ ಶಿಕ್ಷಣ ಪ್ರಮಾಣ ಕಡಿಮೆಯಾಗಿದ್ದು, ನಾವು ಅದರ ಕುರಿತು ಶ್ರಮಿಸಬೇಕು ಮತ್ತು ಉತ್ತಮ ನಾಗರಿಕರೆಂದು ಸಾಬೀತುಪಡಿಸಬೇಕು. ಈ ಏಳು ದಿನಗಳ ವಿಶೇಷ ಶಿಬಿರದ ಸಂಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಲು ಹಾಜರಾಗಬೇಕೆಂದು ಹೇಳಿದರು.ಅತಿಥಿಗಳಾದ ಮೌಲಾಸಾಹಿಬ್ ಗಲಗಲಿ, ಅಖ್ತರಹುಸೇನ್ ಮುಜಾವರ, ಎನ್ಎಸ್ಎಸ್ ಅಧಿಕಾರಿಗಳಾದ ಡಾ.ಮುಷ್ತಾಕಅಹ್ಮದ್ ಇನಾಮದಾರ, ಡಾ. ಮುಹಮ್ಮದ್ ಸಮಿಯುದ್ದೀನ್, ಉಪ ಪ್ರಾಂಶುಪಾಲ ಡಾ.ಹಾಜರಾ ಪರ್ವೀನ್, ಪ್ರಾಧ್ಯಾಪಕರಾದ ಮಹಮ್ಮದ್ ಹಸನ್ ಬಾಗಲಕೋಟ, ಡಾ.ಎಸ್.ಎಚ್.ಕಾಖಂಡಕಿ, ಡಾ.ಎಲ್.ಐ.ನದಾಫ್, ಅಂಬ್ರೀನ್ ಮುಲ್ಲಾ, ಮೀರಾ ಕಾಳೆ, ಸೋಮು ಅಂಕಲಗಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸವಿತಾ, ನಿವೇದಿತಾ, ವಿಜಯಲಕ್ಷ್ಮಿ, ರುಕ್ಸಾನಾ, ಅಸ್ಮಾ ನಾಗರದಿನ್ನಿ ಎನ್‌ಎಸ್‌ಎಸ್ ಗೀತೆಯನ್ನು ಪ್ರಸ್ತುತ್ತಪಡಿಸಿದರು. ಪ್ರೊ.ವಿದ್ಯಾ ಬೆಣ್ಣೂರ ಸ್ವಾಗತಿಸಿದರು. ನಾಜಿಯಾ, ಸುಜೇನ್, ಅಪ್ಶಾ ನಿರೂಪಿಸಿದರು.