ಎನ್‌ಎಸ್‌ಎಸ್‌ನಿಂದ ಗಾಂಧೀಜಿಯವರ ಕನಸು ಸಾಕಾರ-ಡಾ. ಸುರೇಶ

KannadaprabhaNewsNetwork |  
Published : Sep 27, 2025, 12:02 AM IST
ಹಾವೇರಿ ನಗರದ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಪೌರ ಪ್ರಣಾಮ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಸಾಮಾಜಿಕ ವ್ಯವಸ್ಥೆಯಲ್ಲಿ ಮಹಾತ್ಮಾ ಗಾಂಧೀಜಿಯವರು ಕಂಡ ಕನಸ್ಸನ್ನು ಸಾಕಾರಗೊಳಿಸುವಲ್ಲಿ ಎನ್.ಎಸ್.ಎಸ್. ಘಟಕಗಳು ನಿರಂತರ ಪರಿಶ್ರಮವಹಿಸಿ ಸೇವಾ ಕಾರ್ಯ ಮಾಡುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ ಹೇಳಿದರು.

ಹಾವೇರಿ: ಸಾಮಾಜಿಕ ವ್ಯವಸ್ಥೆಯಲ್ಲಿ ಮಹಾತ್ಮಾ ಗಾಂಧೀಜಿಯವರು ಕಂಡ ಕನಸ್ಸನ್ನು ಸಾಕಾರಗೊಳಿಸುವಲ್ಲಿ ಎನ್.ಎಸ್.ಎಸ್. ಘಟಕಗಳು ನಿರಂತರ ಪರಿಶ್ರಮವಹಿಸಿ ಸೇವಾ ಕಾರ್ಯ ಮಾಡುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ ಹೇಳಿದರು. ನಗರದ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್. ಹಾಗೂ ಐಕ್ಯುಎಸಿ ಜಂಟಿಯಾಗಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆಯ ನಿಮಿತ್ತ ಜರುಗಿದ ಪೌರ ಪ್ರಣಾಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸ್ವರಾಜ್ಯ ಸಂಗ್ರಾಮದಲ್ಲಿ ಗಾಂಧೀಜಿಯವರು ಗ್ರಾಮ ಭಾರತವನ್ನು ಕಟ್ಟುವಲ್ಲಿ ಬಹಳ ಮುತುವರ್ಜಿ ವಹಿಸಿದ್ದರು. ಹಳ್ಳಿಗಳು ದೇಶವನ್ನು ಕಟ್ಟಿಬೆಳೆಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವಂತಾಗಲಿ ಎಂಬುದು ಅವರ ಆಶಯವಾಗಿತ್ತು. ಆ ದೆಸೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ನಾಡಿನಾದ್ಯಂತ ಜನೋಪಯೋಗಿ ಸೇವಾ ಕಾರ್ಯ ಮಾಡುತ್ತ ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಹಾವೇರಿ ನಗರ ಪ್ರದೇಶವನ್ನು ಶುಚಿಯಾಗಿಡುವಲ್ಲಿ ನಿತ್ಯ ಶ್ರಮಿಸುವ ಪೌರಕಾರ್ಮಿಕರನ್ನು ಗುರುತಿಸಿ, ಗೌರವಿಸುತ್ತಿರುವುದು ಜಿ.ಎಚ್. ಕಾಲೇಜಿನ ಸಾಮಾಜಿಕ ಕಳಕಳಿಯನ್ನು ತೋರುತ್ತದೆ. ಪ್ರತಿ ವರ್ಷವೂ ಹೊಸತನದ ಕಾರ್ಯಕ್ರಮಗಳನ್ನು ಆಯೋಜಿಸಿ ಮಾದರಿಯಾಗಿರುವುದು ಸಂತೋಷದ ವಿಷಯವಾಗಿದೆ ಎಂದರು. ಕುಲಸಚಿವ ಡಾ. ಎಸ್.ಟಿ. ಬಾಗಲಕೋಟಿ ಮಾತನಾಡಿ, ಉತ್ತಮ ಪರಿಸರ ನಿರ್ಮಾಣ ಕಾರ್ಯದಲ್ಲಿ ಪೌರಕಾರ್ಮಿಕರ ಪಾತ್ರ ಹಿರಿದಾದುದು. ನಿರಂತರ ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಗೌರವ ನೀಡಿರುವುದು ಆದರ್ಶನೀಯವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಂ.ಸಿ. ಕೊಳ್ಳಿ ಮಾತನಾಡಿದರು. ಇದೇ ಸಂದರ್ಭದಲ್ಲಿ ನಗರಸಭೆಯ ಸುಮಾರು 134 ಪೌರ ಕಾರ್ಮಿಕರಿಗೆ ಸನ್ಮಾನಿಸಲಾಯಿತು ಮತ್ತು ಸಹಕಾರ ನೀಡಿದ ಮಹನೀಯರಿಗೆ ಗೌರವಿಸಲಾಯಿತು.

ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಹಾವಿವಿ ಸಿಂಡಿಕೇಟ್ ಸದಸ್ಯ ಡಾ. ರಮೇಶ ತೆವರಿ, ಎನ್.ಎಸ್.ಎಸ್ ಸಂಯೋಜನಾಧಿಕಾರಿ ಡಾ. ಸಿ.ಎಸ್. ಕುಮ್ಮೂರ, ಕಾಲೇಜು ಸ್ಥಾನಿಕ ಮಂಡಳಿ ಕಾಯಾಧ್ಯಕ್ಷ ಡಾ. ಎಸ್.ಎಲ್. ಬಾಲೇಹೊಸೂರ, ಸದಸ್ಯರಾದ ಸಿ.ಬಿ. ಹಿರೇಮಠ, ಜೆ.ಎಸ್. ಅರಣಿ, ನಗರಸಭೆ ಪೌರನೌಕರರ ಸಂಘದ ಅಧ್ಯಕ್ಷ ಚಂದ್ರಪ್ಪ ಬಿದರಿ, ಹೊರಗುತ್ತಿಗೆ ಪೌರನೌಕರರ ಸಂಘದ ಅಧ್ಯಕ್ಷ ರಾಜು ಮಾಳಗಿ, ಸಂಚಾಲಕ ರಾಜಪ್ಪ ಹೊಸಮನಿ, ಐಕ್ಯುಎಸಿ ಸಂಯೋಜಕಿ ಪ್ರೊ. ರೂಪಾ ಕೋರೆ ಇದ್ದರು. ಪದವಿ ಪ್ರಾಚಾರ್ಯ ಪ್ರೊ. ಎಂ.ಎಂ. ಹೊಳ್ಳಿಯವರ ಸ್ವಾಗತಿಸಿದರು. ಎನ್.ಎಸ್.ಎಸ್. ಯೋಜನಾಧಿಕಾರಿ ಡಾ. ಶಮಂತಕುಮಾರ್ ಕೆ.ಎಸ್. ಪ್ರಾಸ್ತಾವಿಕ ಮಾತನಾಡಿದರು. ಮಣಿಕಂಠ ಗೋಧಮನಿ ಮತ್ತು ವಿದ್ಯಾ ಪಾಟೀಲ ನಿರೂಪಿಸಿದರು. ಎನ್.ಎಸ್.ಎಸ್. ಯೋಜನಾಧಿಕಾರಿ ಡಾ. ಶಿವಾನಂದ ಪಾಯಮಲ್ಲೆ ವಂದಿಸಿದರು.

PREV

Recommended Stories

ಹತ್ತು ವರ್ಷವಾದ್ರೂ ನೇಕಾರರ ಮನೆಗಳಿಗಿಲ್ಲ ಮುಕ್ತಿ
ಭೀಮಾನದಿ ನೀರಿನ ಹರಿವು ಮತ್ತೆ ಏರಿಕೆ