ಮಹಾರಾಣಿ ಮಹಿಳಾ ಕಾಲೇಜಿ ಎನ್ನೆಸ್ಸೆಸ್‌ ಶಿಬಿರದ ಸಮಾರೋಪ

KannadaprabhaNewsNetwork |  
Published : Feb 26, 2025, 01:01 AM IST
44 | Kannada Prabha

ಸಾರಾಂಶ

ಪ್ರತಿದಿನ ಸಂಜೆ ವೈವಿಧ್ಯಮಯ ಸಾಂಸ್ಕೃತಿ ಕಾರ್ಯಕ್ರಮಗಳನ್ನು ನೀಡುವ ಮೂಲಕ ಗ್ರಾಮೀಣಾಭಿವೃದ್ಧಿ ಸಾಧಿಸುವ ಆಶಯದೊಂದಿಗೆ ವಿಶೇಷ ಶಿಬಿರವು ಸಂಪನ್ನ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ತಾಲೂಕು ಹುಯಿಲಾಳು ಗ್ರಾಮದಲ್ಲಿ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ. ಶಿವಕುಮಾರ್, ಗ್ರಾಪಂ ಪಿಡಿಒ ಎಂ.ಡಿ. ಮಾಯಪ್ಪ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಚ್.ಎಂ. ಮಂಜುನಾಥ್, ಹುಯಿಲಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನಾಗಸಂದರ್, ಗ್ರಾಪಂ ಉಪಾಧ್ಯಕ್ಷ ಗೌರಮ್ಮ ಮಾಲೆಗೌಡ ಚಾಲನೆ ನೀಡಿದರು.

ಘಟಕವೊಂದರ ಶಿಬಿರಾಧಿಕಾರಿ ಆರ್. ಮಂಜುನಾಥ್ ಮಾತನಾಡಿದರು.

ಮೈಸೂರು ತಾಲೂಕಿನ ಇಲವಾಲ ಬಳಿ ಹುಯಿಲಾಳು ಗ್ರಾಮದಲ್ಲಿ ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ನಡೆದ ವಾರ್ಷಿಕ ವಿಶೇಷ ಶಿಬಿರದಲ್ಲಿ ಗ್ರಾಮಸ್ಥರ ಕಣ್ಣಿನ ಉಚಿತ ತಪಾಸಣಾ ಶಿಬಿರ ನಡೆಯುತ್ತಿರುವ ಆನ್ಲೈನ್ ಬೆಟ್ಟಿಂಗ್ ಮೋಸದ ವಿರುದ್ಧ ಜಾಗೃತಿ ಜಾಥಾ, ಮಹಿಳಾ ದೌರ್ಜನ್ಯ ತಡೆಗಟ್ಟಲು ಪೋಸ್ಟರ್ ಅಭಿಯಾನ ಮತ್ತು ಪ್ರತಿನಿತ್ಯ ವಿಶೇಷ ಪರಿಣಿತರ ಮೂಲಕ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಸ್ವಯಂ ಉದ್ಯೋಗ ಮಹಿಳಾ ಸಬಲೀಕರಣ ಸ್ತ್ರೀ ಆರೋಗ್ಯ ಗ್ರಾಮೀಣ ಅಭಿವೃದ್ಧಿ ಇವುಗಳ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಯಿತು.

ಜೊತೆಗೆ ಪ್ರತಿದಿನ ಸಂಜೆ ವೈವಿಧ್ಯಮಯ ಸಾಂಸ್ಕೃತಿ ಕಾರ್ಯಕ್ರಮಗಳನ್ನು ನೀಡುವ ಮೂಲಕ ಗ್ರಾಮೀಣಾಭಿವೃದ್ಧಿ ಸಾಧಿಸುವ ಆಶಯದೊಂದಿಗೆ ವಿಶೇಷ ಶಿಬಿರವು ಸಂಪನ್ನವಾಯಿತು.

ಘಟಕ ಎರಡರ ಶಿಬಿರಾಧಿಕಾರಿಯಾದ ಎನ್.ಡಿ. ಸೌಮ್ಯ ಗೌರವ ನುಡಿಗಳ ಮೂಲಕ ಗ್ರಾಮದ ಜನಪ್ರತಿನಿಧಿಗಳ, ಹಿರಿಯರ, ಗ್ರಾಮಸ್ಥರ ಸಹಕಾರವನ್ನು ನೆನಪಿಸುತ್ತಾ ಕೃತಜ್ಞತೆ ಸಲ್ಲಿಸಿದರು.

ಚನ್ನಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಾಕ ಪ್ರೊ. ಜಗದೀಶ್ ಶಿಬಿರ ಹಾಗೂ ಶಿಬಿರಾಧಿಕಾರಿಗಳನ್ನು ಕುರಿತು ಸಮಾರೋಪ ಭಾಷಣ ಮಾಡಿದರು.

ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನಳಿನಿ, ಎಂ.ಬಿ.ಎ. ವಿಭಾಗದ ಮುಖ್ಯಸ್ಥ ಎಚ್‌.ಬಿ. ರವಿಕುಮಾರ್, ಐಕ್ಯುಎಸಿ ಸಂಚಾಲಕರಾದ ಮುತ್ತುರಾಜ್, ಪ್ರಾಧ್ಯಾಪಕರಾದ ಡಾ. ನಟರಾಜ್, ಡಾ.ಎನ್. ನಾಗೇಂದ್ರ, ಅಧೀಕ್ಷಕ ಪ್ರಭು ಹಾಗೂ ಗ್ರಾಪಂ ಸದಸ್ಯರಾದ ಲಕ್ಷ್ಮೀಕುಮಾರ್, ಯಶೋಧ, ಶ್ರೀಧರ್ ಭೈರೇಗೌಡ, ಮಾಜಿ ಸದಸ್ಯರಾದ ರಾಮಸ್ವಾಮಿ, ಮಹಿಳಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಪಲ್ಲವಿ ಉಮೇಶ್, ಕಾರ್ಯದರ್ಶಿಯಾದ ಲಕ್ಷ್ಮಿ ಮಂಜುನಾಥ್, ಶಾಲೆಯ ಶಿಕ್ಷಕ ವೃಂದದವರು ಕಾಲೇಜಿನ ಬೋಧಕೇತರ ಸಿಬ್ಬಂದಿ ಇದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ