ಎನ್‌ಎಸ್‌ಯುಐ ನಡಿಗೆ ಕ್ಯಾಂಪಸ್ ಕಡೆಗೆ ಕಾರ್ಯಕ್ರಮ: ಕೀರ್ತಿ ಗಣೇಶ್

KannadaprabhaNewsNetwork |  
Published : Oct 20, 2024, 02:01 AM IST
ಎನ್‌ಎಸ್‌ಯುಐ ನಡಿಗೆ ಕ್ಯಾಂಪಸ್ ಕಡೆಗೆ ಕಾರ್ಯಕ್ರಮ | Kannada Prabha

ಸಾರಾಂಶ

ರಾಜ್ಯಾದ್ಯಂತ ಪ್ರವಾಸ ಕೈಗೊಂಡು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಸರ್ಕಾರದ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನ ಮಾಡಲಾಗುವುದು ಎಂದು ಎನ್‌ಎಸ್‌ಯುಎ ರಾಜ್ಯಾಧ್ಯಕ್ಷ ಹಾಗೂ ಡಿ.ದೇವರಾಜು ಅರಸ್ ನಿಗಮದ ಅಧ್ಯಕ್ಷ ಕೀರ್ತಿ ಗಣೇಶ್ ಹೇಳಿದರು. ಚಾಮರಾಜನಗರದಲ್ಲಿ ವಿದ್ಯಾರ್ಥಿಗಳಿಂದ ಸಮಸ್ಯೆ ಆಲಿಸಿ ಮಾತನಾಡಿದರು.

ಕಾಲೇಜು, ಹಾಸ್ಟೆಲ್‌ಗಳಿಗೆ ಭೇಟಿ । ಬೈಕ್ ರ್‍ಯಾಲಿ, ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಎನ್‌ಎಸ್‌ಯುಐ ಕ್ಯಾಂಪಸ್ ಗೇಟ್ ಮೀಟ್ ಕಾರ್ಯಕ್ರಮ ಅಯೋಜಿಸಿ, ರಾಜ್ಯಾದ್ಯಂತ ಪ್ರವಾಸ ಕೈಗೊಂಡು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಸರ್ಕಾರದ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನ ಮಾಡಲಾಗುವುದು ಎಂದು ಎನ್‌ಎಸ್‌ಯುಎ ರಾಜ್ಯಾಧ್ಯಕ್ಷ ಹಾಗೂ ಡಿ.ದೇವರಾಜು ಅರಸ್ ನಿಗಮದ ಅಧ್ಯಕ್ಷ ಕೀರ್ತಿ ಗಣೇಶ್ ಹೇಳಿದರು.

ನಗರದ ಸರ್ಕಾರಿ ಮಹಿಳಾ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಭೇಟಿ ವಿದ್ಯಾರ್ಥಿಗಳಿಂದ ಸಮಸ್ಯೆ ಆಲಿಸಿ ಮಾತನಾಡಿ, ರಾಜ್ಯಾದ್ಯಂತ ವಿದ್ಯಾರ್ಥಿಗಳ ಸಮಸ್ಯೆ ಆಲಿಸುವ ನಿಟ್ಟಿನಲ್ಲಿ ಎನ್‌ಎಸ್‌ಯು ಐ ಕ್ಯಾಂಪಸ್ ಗೇಟ್ ಮೀಟ್ ಕಾರ್ಯಕ್ರಮ ಹಮ್ಮಿಕೊಂಡು ಈಗಾಗಲೇ ಮಂಗಳೂರಿನಲ್ಲಿ ಚಾಲನೆಗೊಂಡಿದ್ದು, ಉಡುಪಿ, ಚಿಕ್ಕಮಗಳೂರು, ಮಂಡ್ಯ ಜಿಲ್ಲೆಗಳ ಪ್ರವಾಸ ಮಾಡಲಾಗಿದ್ದು, ವಿದ್ಯಾರ್ಥಿಗಳಿಂದ ಬಸ್ ಸಮಸ್ಯೆ, ವಿದ್ಯಾರ್ಥಿನಿಲಯ ಸಮಸ್ಯೆ, ವಿದ್ಯಾರ್ಥಿವೇತನ ಸಮಸ್ಯೆ ಕೇಳಿ ಬಂದಿದ್ದು, ಚಾಮರಾಜನಗರದಲ್ಲೂ ಕೂಡ ಬಸ್ ಸಮಸ್ಯೆ, ಹಾಸ್ಟೆಲ್, ವಿದ್ಯಾರ್ಥಿವೇತನ ಬಂದಿಲ್ಲರುವುದು ಕೇಳಿಬಂದಿದೆ. ರಾಜ್ಯಾದ್ಯಂತ ಪ್ರವಾಸ ಮುಗಿದ ಮೇಲೆ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ವಿದ್ಯಾರ್ಥಿಗಳ ಸಮಸ್ಯೆ ಏನೇ ಇದ್ದರೂ ಎನ್‌ಎಸ್‌ಯುಐಗೆ ತಿಳಿಸಿ:

ವಿದ್ಯಾರ್ಥಿಗಳೇ ಕಾಲೇಜು, ಹಾಸ್ಟೆಲ್, ವಿಶ್ವವಿದ್ಯಾಲಯಗಳಲ್ಲಿ ಸಮಸ್ಯೆ ಇದೀಯಾ ಎನ್‌ಎಸ್‌ಯುಐ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಮಾಹಿತಿ ಭರ್ತಿಮಾಡಿ వాట్సా ಮೂಲಕ ನೀವು ನಮಗೆ ನಿಮ್ಮ ಸಮಸ್ಯೆ ತಿಳಿಬಹುದು. ವಾಟ್ಸಾಪ್‌ನಲ್ಲಿ ನೋಂದಾಯಿತ ವಿದ್ಯಾರ್ಥಿಗಳಿಗೆ ನೀಟ್, ಪಿಎಸ್‌ಐ, ಕೆಎಎಸ್, ಪಿಡಪೊ, ಕಾಲೇಜು, ಕ್ಯಾಂಪಸ್, ವಿಶ್ವವಿದ್ಯಾಲಯ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ಹಾಗೂ ಸರ್ಕಾರಿ ಉದ್ಯೋಗಗಳ ಮಾಹಿತಿ ಒದಗಿಸಲಾಗುತ್ತದೆ. ಇದು ಎನ್‌ಎಸ್‌ಯುಐ ಉದ್ದೇಶವಾಗಿದೆ ಎಂದರು.

ಮನವಿ:

ಸರ್ಕಾರಿ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಬಿಡುಗಡೆಯಾಗಿರುವ 5 ಕೋಟಿ ರೂ. ಅನುದಾನ ಕಡಿಮೆಯಾಗಿರುವುದರಿಂದ ಕಾಮಗಾರಿ ಆರಂಭವಾಗಿಲ್ಲ. ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿಕೊಡಬೇಕು ಅಲ್ಲದೆ ವಿದ್ಯಾರ್ಥಿಗಳ, ಶಿಕ್ಷಕರ ಬೇಡಿಕೆಯಾದ ಮಹಿಳಾ ಕಾಲೇಜು ವಿದ್ಯಾರ್ಥಿನಿಲಯವನ್ನು ನಿರ್ಮಾಣ ಮಾಡಿಕೊಡಬೇಕು ಎಂದು ಕೀರ್ತಿ ಗಣೇಶ್ ಅವರಲ್ಲಿ ಜಿಲ್ಲಾಧ್ಯಕ್ಷ ಮೋಹನ್ ಮನವಿ ಮಾಡಿದರು.

ಬೈಕ್ ರ್‍ಯಾಲಿ:

ಇದಕ್ಕೂ ಮುನ್ನಾ ನಗರದ ಪ್ರವಾಸಿ ಮಂದಿರದಿಂದ ಎನ್‌ಎಸ್‌ಯುಐ ಜಿಲ್ಲಾ ಘಟಕದ ವತಿಯಿಂದ ಬೈಕ್ ರ್ಯಾಲಿ ಹೊರಟು ಸತ್ತಿರಸ್ತೆ, ಡಿವಿಯೇಷನ್ ರಸ್ತೆ, ಭುವನೇಶ್ವರಿ ವೃತ್ತ, ಬಿ. ರಾಚಯ್ಯ ಜೋಡಿರಸ್ತೆ ಮೂಲಕ ರಾಮಸಮುದ್ರಕ್ಕೆ ತೆರಳಿ ಅಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಸನ್ಮಾನ:

ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ, ಡಿ.ದೇವರಾಜು ಅರಸ್ ನಿಗಮದ ಅಧ್ಯಕ್ಷ ಕೀರ್ತಿ ಗಣೇಶ್ ಅವರಿಗೆ ಶಾಲು ಹೊದಿಸಿ, ಮೈಸೂರುಪೇಟ ತೊಡಿಸಿ, ದೊಡ್ಡ ಗುಲಾಬಿ ಹೂವಿನ ಹಾರಹಾಕಿ ಸನ್ಮಾನಿಸಲಾಯಿತು.

ಕರಿನಂಜನಪುರ ಬಿಸಿಎಂ ಬಾಲಕಿಯರ ವಿದ್ಯಾರ್ಥಿನಿಲಯ, ಮಹದೇಶ್ವರ ಬಡಾವಣೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ, ಬೇಡರಪುರ ಎಂಜಿನಿಯರ್ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ರಫೀಕ್ ಅಲಿ, ನಗರ ಉಸ್ತುವಾರಿ ಉಮನಾಶ್ರೀ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಎನ್.ಲೋಕೇಶ್, ಪೋಷಕ ನಾಗೇಂದ್ರ, ಯುವ ಕಾಂಗ್ರೆಸ್ ಮುಖಂಡರಾದ ಶ್ರೀನಿವಾಸ್, ಸುನಿಲ್ ಕುಮಾರ್, ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಸೈಯದ್ ಮುಸಾಹಿಬ್, ಜಿಲ್ಲಾಧ್ಯಕ್ಷ ಮೋಹನ್ ನಗು, ಉಪಾಧ್ಯಕ್ಷರಾದ ಮಹಮ್ಮದ್ ದಸ್ತಗಿರ್, ಮುತ್ತುರಾಮು, ಜಿಲ್ಲಾ ಪ್ರಧಾನ‌ ಕಾರ್ಯದರ್ಶಿ ಪ್ರದೀಪ್, ಕಾರ್ಯದರ್ಶಿ ನವೀನ್, ತಾಲೂಕು ಶಶಾಂಕ್, ಸುಜನ್, ಸುನಿಲ್ ಕುಮಾರ್, ಅಪ್ಪು ಹಾಜರಿದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ