- ಘೋಷಿತ ಸಾಮರ್ಥ್ಯಕ್ಕಿಂತ ತೀರಾ ಕಡಿಮೆ ಏಕೆ ಎಂದು ಕೇಳಿದ್ದ ಸಂಸದೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ಪರಮಾಣು ಶಕ್ತಿ ಮೂಲಕ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ವಿವರಗಳ ಕುರಿತು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ಪ್ರಧಾನ ಮಂತ್ರಿ ಅವರಿಗೆ ಮಾಹಿತಿ ಕೇಳಿದ್ದಾರೆ. ಹಾಗೂ ಅವರ ಮಾಹಿತಿಗೆ ಪ್ರಧಾನಿ ಕಚೇರಿಯಿಂದ ಉತ್ತರವೂ ಲಭಿಸಿದೆ.ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ದಶಕಗಳ ಹೂಡಿಕೆಯ ಹೊರತಾಗಿಯೂ, ಪರಮಾಣು ಶಕ್ತಿಯು ದೇಶದ ಒಟ್ಟು ವಿದ್ಯುತ್ ಉತ್ಪಾದನೆಗೆ ಕೇವಲ 1.6% ಕೊಡುಗೆ ನೀಡುತ್ತದೆ. ಇದು ಅದರ ಘೋಷಿತ ಸಾಮರ್ಥ್ಯಕ್ಕಿಂತ ತೀರಾ ಕಡಿಮೆಯಾಗಿದ್ದೇಕೆ ಎಂದು ಮಾಹಿತಿ ಕೇಳಿದ್ದಾರೆ. ಇದರೊಂದಿಗೆ ಪ್ರಸ್ತುತ ಸಾಮರ್ಥ್ಯವು ಕೇವಲ **7.5 GW** ಆಗಿದ್ದು, 2031-32ರ ವೇಳೆಗೆ 22.48 **GW** ಗುರಿಯ ವಿರುದ್ಧ 2024 ರ ವೇಳೆಗೆ 8.18 **GW** ಗೆ ಸ್ವಲ್ಪ ಹೆಚ್ಚಾಗುವ ನಿರೀಕ್ಷೆ ಇದೆ. ಇದರಿಂದ ಪರಮಾಣು ಸಾಮರ್ಥ್ಯದ ನಿಧಾನಗತಿಯ ವಿಸ್ತರಣೆಗೆ ಕಾರಣಗಳೇನು? ಪರಮಾಣು ಉಪಕರಣಗಳ ತಯಾರಿಕೆಯಲ್ಲಿ ಮಾತ್ರ ಶೇ.100ರಷ್ಟು ವಿದೇಶಿ ನೇರ ಹೂಡಿಕೆಗೆ ಅವಕಾಶವಿದೆ ಎಂದು ಪರಿಗಣಿಸಿ, ರಿಯಾಕ್ಟರ್ ಕಾರ್ಯಾಚರಣೆಗಳಲ್ಲಿ ಹೆಚ್ಚಿನ ಖಾಸಗಿ ಮತ್ತು ವಿದೇಶಿ ಭಾಗವಹಿಸುವಿಕೆ ಅನುಮತಿಸಲು ಸರ್ಕಾರವು ಪರಮಾಣು ಶಕ್ತಿ ಕಾಯ್ದೆ, 1962ಕ್ಕೆ ತಿದ್ದುಪಡಿ ತರಲು ಪ್ರಸ್ತಾಪಿಸುತ್ತದೆಯೇ ಮತ್ತು ಹಾಗಿದ್ದಲ್ಲಿ, ಅದರ ವಿವರಗಳ ಬಗ್ಗೆ ಮಾಹಿತಿ ಒದಗಿಸುವಂತೆ ತಿಳಿಸಿದ್ದರು.
ಪ್ರಧಾನಿ ಕಚೇರಿ ಉತ್ತರ:ಸಂಸದರ ಈ ಪ್ರಶ್ನೆಗಳಿಗೆ ಪ್ರಧಾನಮಂತ್ರಿ ಕಚೇರಿಯಿಂದ ಉತ್ತರ ಲಭಿಸಿದ್ದು, ಭಾರತದಲ್ಲಿ ಪರಮಾಣು ವಿದ್ಯುತ್ ಉತ್ಪಾದನೆ ಹಲವು ವರ್ಷಗಳಿಂದ ಸುಮಾರು 3% ಮಟ್ಟದಲ್ಲೇ ಇದೆ (2024–25ರಲ್ಲಿ 3.1%). ಆರಂಭಿಕ ನಿಧಾನ ವಿಸ್ತರಣೆಗೆ ಅಂತರ ರಾಷ್ಟ್ರೀಯ ನಿರ್ಬಂಧಗಳು, ತಂತ್ರಜ್ಞಾನ ನಿರಾಕರಣೆ ಮತ್ತು ಸಂಪನ್ಮೂಲ ಸೀಮಿತತೆ ಕಾರಣ ಎಂದು ತಿಳಿಸಲಾಗಿದೆ.
ಪ್ರಸ್ತುತ ಸ್ಥಾಪಿತ ಸಾಮರ್ಥ್ಯ **8.78 GW (RAPS-1** ಹೊರತುಪಡಿಸಿ). ಸ್ವದೇಶಿ **700 MW PHWR** ತಂತ್ರಜ್ಞಾನ ಪರಿಪಕ್ವವಾಗಿದ್ದು, **700 MW** ಮತ್ತು **1000 MW** ರಿಯಾಕ್ಟರ್‌ಗಳ ಸ್ಥಾಪನೆ ಪ್ರಗತಿಯಲ್ಲಿ ಇದೆ. ಯೋಜನೆಗಳು ಪೂರ್ಣಗೊಳ್ಳುವಂತೆ 2031–32ರ ವೇಳೆಗೆ ಸಾಮರ್ಥ್ಯ 22.38 **GW** ಆಗಲಿದೆ.ಸರ್ಕಾರವು 2047ರೊಳಗೆ 100 **GW** ಪರಮಾಣು ಶಕ್ತಿ ಗುರಿ ಘೋಷಿಸಿದೆ. ಪ್ರಸ್ತುತ ಪರಮಾಣು ಶಕ್ತಿಯಲ್ಲಿ **FDI ** ನಿಷಿದ್ಧ ಮತ್ತು ಸುಗಮಗೊಳಿಸಲು ಪರಮಾಣು ಶಕ್ತಿ ಕಾಯ್ದೆ, 1962 ತಿದ್ದುಪಡಿ ಪ್ರಸ್ತಾಪಿಸಲಾಗಿದೆ ಎಂದು ತಿಳಿಸಲಾಗಿದೆ.
- - --12ಕೆಡಿವಿಜಿ31: ಡಾ.ಪ್ರಭಾ ಮಲ್ಲಿಕಾರ್ಜುನ.