ನರ್ಸಿಂಗ್ ವೃತ್ತಿಯಲ್ಲ ಅದೊಂದು ಸೇವೆ: ಡಾ. ಹರೀಶ್‌

KannadaprabhaNewsNetwork |  
Published : Oct 19, 2025, 01:00 AM IST
ಚಿಕ್ಕಮಗಳೂರಿನ ಮೆಡಿಕಲ್ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳ ಓರಿಯೆಂಟೇಶನ್ ಕಾರ್ಯಕ್ರಮವನ್ನು ಡಾ. ಹರೀಶ್‌ ಉದ್ಘಾಟಿಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ನರ್ಸಿಂಗ್ ಬರಿ ವೃತ್ತಿಯಲ್ಲ ಅದೊಂದು ಸೇವೆ. ಇಲ್ಲಿ ಯಶಸ್ಸು ಗಳಿಸಬೇಕಾದರೆ ಶ್ರದ್ಧೆ, ದೃಢಸಂಕಲ್ಪ ಅತಿ ಮುಖ್ಯ ಎಂದು ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ಡೀನ್, ನಿರ್ದೇಶಕ ಡಾ.ಹರೀಶ್ ಹೇಳಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನರ್ಸಿಂಗ್ ಬರಿ ವೃತ್ತಿಯಲ್ಲ ಅದೊಂದು ಸೇವೆ. ಇಲ್ಲಿ ಯಶಸ್ಸು ಗಳಿಸಬೇಕಾದರೆ ಶ್ರದ್ಧೆ, ದೃಢಸಂಕಲ್ಪ ಅತಿ ಮುಖ್ಯ ಎಂದು ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ಡೀನ್, ನಿರ್ದೇಶಕ ಡಾ.ಹರೀಶ್ ಹೇಳಿದರು.ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನಲ್ಲಿ ನಡೆದ 4ನೇ ಬ್ಯಾಚಿನ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ಪರಿಚಯಾತ್ಮಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವುದೇ ಒಂದು ಮೆಡಿಕಲ್ ಕಾಲೇಜು ಅಥವಾ ಆಸ್ಪತ್ರೆ ಪ್ರಸಿದ್ಧಿಯಾಗಲು ಅಲ್ಲಿನ ನರ್ಸ್‌ಗಳು ಮುಖ್ಯ ಕಾರಣ. ಅವರ ಪರಿಶ್ರಮ ಸಾಕಷ್ಟಿರುತ್ತದೆ. ಹೀಗಾಗಿ ಈ ವೃತ್ತಿಗೆ ಮಹಳ ಮಹತ್ವವಿದೆ. ಈ ಹಿಂದೆ ಜಿಲ್ಲೆಯಲ್ಲಿ ನರ್ಸಿಂಗ್ ಕಾಲೇಜುಗಳಿರಲಿಲ್ಲ. ಈಗ ಖಾಸಗಿ ಜತೆಗೆ ಎಲ್ಲ ಮೂಲ ಸೌಕರ್ಯ ಹಾಗೂ ಬೋಧಕ ಸಿಬ್ಬಂದಿ ಹೊಂದಿರುವ ನಮ್ಮ ಸಂಸ್ಥೆಯಲ್ಲಿ ಅತ್ಯುತ್ತಮ ನರ್ಸಿಂಗ್ ಶಿಕ್ಷಣ ದೊರೆಯುತ್ತಿದೆ. ನರ್ಸಿಂಗ್‌ಗೆ ಪ್ರತ್ಯೇಕ ತಂಡವೇ ಇದೆ. ೧೧ ಮಂದಿ ನುರಿತ ಬೋಧಕರಿದ್ದಾರೆ. ಉತ್ತಮ ಲ್ಯಾಬ್, ಗ್ರಂಥಾಲಯ ಅಗತ್ಯ ಪರಿಕರಗಳು ಇವೆ. ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಂಡು ಮುಂದೆ ಬರಬೇಕು ಎಂದರು.

ಜಿಲ್ಲಾ ಸರ್ಜನ್ ಡಾ.ಚಂದ್ರಶೇಖರ್ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ವೈದ್ಯರು ಮೆದುಳಾದರೆ, ನರ್ಸ್‌ಗಳು ಹೃದಯವೇ ಆಗಿದ್ದಾರೆ. ಹಿಂದೆ ನರ್ಸಿಂಗ್ ವೃತ್ತಿಗೆ ಕೇರಳದಿಂದ ಬರುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಈ ಕೋರ್ಸ್ ಯಶಸ್ವಿ ಪೂರೈಸಿ ದಲ್ಲಿ ದೇಶ, ವಿದೇಶಗಳಲ್ಲಿ ಕೆಲಸ ಮಾಡುವ ವಿಫುಲ ಅವಕಾಶಗಳಿವೆ ಎಂದು ಹೇಳಿದರು.

ನರ್ಸಿಂಗ್ ಕಾಲೇಜಿನ ಮುಖ್ಯಸ್ಥರಾದ ಕೆ.ಜೆ.ಜಾಸ್ಮಿನ್ ಮಾತನಾಡಿ, ನರ್ಸಿಂಗ್ ಎನ್ನವುದು 3 ಚಕ್ರದ ರಥವಿದ್ದಂತೆ 1 ವಿದ್ಯಾರ್ಥಿ, 2 ಪೋಷಕರು ಮತ್ತೊಂದು ಆಡಳಿತ ಮಂಡಳಿ ಹೀಗೆ 3 ಚಕ್ರಗಳು ಸಮತೋಲಿತವಾಗಿ ಚಲಿಸಿದರೆ ಮಾತ್ರ ಇಲ್ಲಿ ಯಶಸ್ಸು ಸಾಧ್ಯ ಎಂದರು.

ಜಿಲ್ಲಾಸ್ಪತ್ರೆ ಮೆಡಿಕಲ್ ಅಧಿಕಾರಿ ಡಾ.ಕಲ್ಪನಾ, ನರ್ಸಿಂಗ್ ನೊಡೆಲ್ ಅಧಿಕಾರಿ ಡಾ.ಲೋಹಿತ್, ಕೋ ಆರ್ಡಿನೇಟರ್ ಡಾ. ಗಣೇಶ್, ಸುಬ್ಬಯ್ಯ, ಡಾ.ರಶ್ಮಿ, ಡಾ.ವರಮಹಾಲಕ್ಷ್ಮಿ ,ಡಾ.ದೇಶಪಾಂಡೆ, ವಿಶ್ರೇಯ, ಜೆನ್ನಿಫರ್ ಶೈನಿ ಬೆರೆಟ್ಟೋ , ಸಚಿನ್ ಉಪಸ್ಥಿತರಿದ್ದರು. 16 ಕೆಸಿಕೆಎಂ 4ಚಿಕ್ಕಮಗಳೂರಿನ ಮೆಡಿಕಲ್ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳ ಓರಿಯೆಂಟೇಶನ್ ಕಾರ್ಯಕ್ರಮವನ್ನು ಡಾ. ಹರೀಶ್‌ ಉದ್ಘಾಟಿಸಿದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ