ಕುಮಟಾದಲ್ಲಿ ಪೋಷಣ ಅಭಿಯಾನಕ್ಕೆ ಚಾಲನೆ

KannadaprabhaNewsNetwork |  
Published : Oct 01, 2024, 01:31 AM IST
ಕುಮಟಾದ ತಾಪಂ ಸಭಾಭವನದಲ್ಲಿ ಸೋಮವಾರ ಪೋಷಣಾ ಅಭಿಯಾನವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಕುಮಟಾದ ತಾಪಂ ಸಭಾಭವನದಲ್ಲಿ ಸೋಮವಾರ ಪೋಷಣ ಅಭಿಯಾನ ಕಾರ್ಯಕ್ರಮ ನಡೆಯಿತು.

ಕುಮಟಾ: ಮಕ್ಕಳಲ್ಲಿ ಪೌಷ್ಟಿಕತೆಯ ಕೊರತೆ ನೀಗಲು ಬಿಜೆಪಿ ಸರ್ಕಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೋಷಣ ಅಭಿಯಾನದ ಈ ಕಾರ್ಯಕ್ರಮವನ್ನು ಇಂದಿಗೂ ಅನೂಚಾನವಾಗಿ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಪೋಷಕಾಂಶದ ಕೊರತೆ ಅಲ್ಲಲ್ಲಿ ಕಾಣುತ್ತಿದ್ದು, ಅಭಿಯಾನದ ಮಹತ್ವ ಇಂದಿಗೂ ಮುಂದುವರಿದಿದೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.

ಇಲ್ಲಿನ ತಾಪಂ ಸಭಾಭವನದಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ತಾಲೂಕು ಕಾನೂನು ಸೇವಾ ಪ್ರಾಧಿಕಾರ ಮತ್ತು ಆರೋಗ್ಯ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೋಷಣ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಬಿಇಒ ಹಾಗೂ ಪ್ರಭಾರ ತಾಪಂ ಇಒ ರಾಜೇಂದ್ರ ಎಲ್. ಭಟ್ ಅಧ್ಯಕ್ಷತೆ ವಹಿಸಿ, ಪೋಷಣ ಅಭಿಯಾನದ ಮಹತ್ವ ಹಾಗೂ ಪ್ರಸ್ತುತತೆಯನ್ನು ವಿವರಿಸಿದರು. ಗ್ರೇಡ್ ೨ ತಹಸೀಲ್ದಾರ್ ಸತೀಶ ಗೌಡ, ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ತಾಲೂಕು ಆರೋಗ್ಯ ಅಧಿಕಾರಿ ಡಾ. ಆಜ್ಞಾ ನಾಯಕ, ಸಮಾಜ ಕಲ್ಯಾಣ ಅಧಿಕಾರಿ ಭಾರತಿ ಆಚಾರಿ, ಶಿಶು ಅಭಿವೃದ್ಧಿ ಅಧಿಕಾರಿ ನೀಲಾ ಕೆ. ಪಾಟೀಲ್ ಇತರರು ಇದ್ದರು.---

ದತ್ತು ಯೋಜನೆಯಡಿ 7 ಸ್ಮಾರಕಗಳ ಆಯ್ಕೆ

ಕಾರವಾರ: ರಾಜ್ಯದಲ್ಲಿರುವ ಸ್ಮಾರಕಗಳ ಸಂರಕ್ಷಣೆ ಮಾಡಲು ಮತ್ತು ಅವುಗಳಿಗೆ ಮೂಲ ಸೌಕರ್ಯಗಳ ಒದಗಿಸಿ ಅಭಿವೃದ್ಧಿಪಡಿಸಲು ಈ ಸ್ಮಾರಕಗಳನ್ನು ಆಸಕ್ತ ಕಂಪನಿಗಳು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮಗಳ ಅಡಿಯಲ್ಲಿ ದತ್ತು ಪಡೆಯುವ ಯೋಜನೆಗೆ ಸರ್ಕಾರದ ತಾತ್ವಿಕ ಅನುಮೋದನೆ ನೀಡಿದ್ದು, ಯೋಜನೆಯಡಿ ಜಿಲ್ಲೆಯ 7 ಸ್ಮಾರಕಗಳನ್ನು ಅಯ್ಕೆ ಮಾಡಲಾಗಿದೆ.ಜಿಲ್ಲೆಯ ಗಂಗಾ ಕಾಮೇಶ್ವರ ದೇವಸ್ಥಾನ ಅಂಕೋಲಾ, ರಾಮತೀರ್ಥ ಮತ್ತು ರಾಮಲಿಂಗ ಬಸವರಾಜದುರ್ಗಾ ದೇವಸ್ಥಾನ, ಹೊನ್ನಾವರ, ಮುಸುಕಿನ ಬಾವಿಯ ದೇವಸ್ಥಾನ ಶಿರಸಿ, ಮಹಾಂತಿ ಮಠ, ಸೋಂದಾ ಶಿರಸಿ, ಶಂಕರನಾರಾಯಣ ದೇವಸ್ಥಾನ ಶಿರಸಿ, ಮುರುಗದ್ದೆ ದೇವಸ್ಥಾನ ಅಂಕೋಲಾ, ಸದಾಶಿವಗಡ ಕೋಟೆ ಕಾರವಾರ ಇವುಗಳನ್ನು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ದತ್ತು ನೀಡಿ, ಅಭಿವೃದ್ಧಿಗೊಳಿಸಲು ರಾಜ್ಯದ ಸ್ಮಾರಕಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಯೋಜನೆಯ ಮಾರ್ಗಸೂಚಿಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆಗೆ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯನ್ನು ಯೋಜನೆಯ ನೋಡಲ್ ಇಲಾಖೆಯನ್ನಾಗಿ ನೇಮಿಸಲಾಗಿದೆ.ಸ್ಮಾರಕ ಮಿತ್ರರಾಗಿ ಆಯ್ಕೆಯಾದ ಆರಂಭದಲ್ಲಿ ಐದು ವರ್ಷಗಳ ಅವಧಿಗೆ ಈ ಸೌಲಭ್ಯಗಳನ್ನು ಒದಗಿಸಲು ಸ್ಮಾರಕಗಳನ್ನು ಸ್ಮಾರಕ ಮಿತ್ರರ ಸುಪರ್ದಿಗೆ ಒಪ್ಪಿಸಲಾಗುವುದು ಮತ್ತು ಈ ಅವಧಿಯಲ್ಲಿ ಕಾರ್ಯಾಚರಣೆಯು ನಿಯಮಿತ ಪರಿಶೀಲನೆಗೆ, ಪ್ರವಾಸಿಗರು ಮತ್ತು ಇತರ ಭಾಗಿದಾರರ ಪ್ರತಿಕ್ರಿಯೆ, ಮಾಹಿತಿ ಸೇರಿದಂತೆ ಅಗತ್ಯ ಪರಿಶೀಲನೆ ನಡೆಸಲಾಗುವುದು.

ಜಿಲ್ಲೆಯು ಅಗಾಧವಾದ ಪ್ರಾಕೃತಿಕ, ಸಾಂಸ್ಕೃತಿಕ, ಧಾರ್ಮಿಕ, ಐತಿಹಾಸಿಕ, ವನ್ಯಜೀವಿ ಮತ್ತು ಸಮುದ್ರ ಜೀವಿಗಳನ್ನು, ಕಡಲತೀರ, ಜಲಪಾತ ಹಾಗೂ ಸಾಹಸಮಯ ಪ್ರವಾಸಿ ಚಟುವಟಿಕೆಗಳಿಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಒಳಗೊಂಡ ಮತ್ತು ಸಾಕಷ್ಟು ವೈವಿಧ್ಯ ಹೊಂದಿದ್ದು, ರಾಜ್ಯದ ಪ್ರಮುಖ ಪ್ರವಾಸಿ ಜಿಲ್ಲೆಗಳಲ್ಲಿ ಒಂದಾಗಿದೆ. ಪ್ರಸ್ತುತ ಸ್ಮಾರಕ ದತ್ತು ಯೋಜನೆಗೆ ಆಯ್ಕೆಗೊಂಡಿರುವ ಜಿಲ್ಲೆಯ ಸ್ಥಳಗಳನ್ನು ದತ್ತು ಪಡೆದು ಅಭಿವೃದ್ಧಿಗೊಳಿಸಲು ಆಸಕ್ತಿಯುಳ್ಳ ಸರ್ಕಾರೇತರ ಸಂಘ ಸಂಸ್ಥೆಗಳಿಗೆ ಮುಕ್ತ ಅವಕಾಶ ನೀಡಲಾಗಿದೆ.ಪ್ರವಾಸೋದ್ಯಮದ ಬೆಳವಣಿಗೆ: ಸ್ಮಾರಕಗಳನ್ನು ದತ್ತು ಪಡೆದು ಸ್ಮಾರಕ ಮಿತ್ರರಾಗುವವವರು ಈ ಸ್ಮಾರಕಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ಜಿಲ್ಲೆಗೆ ಪ್ರವಾಸಿಗರನ್ನು ಅಕರ್ಷಿಸುವ ಮೂಲಕ ಜಿಲ್ಲೆಯ ಪ್ರವಾಸೋದ್ಯಮದ ಬೆಳವಣಿಗೆಗೆ ತಮ್ಮ ಕೊಡುಗೆ ನೀಡಬೇಕಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ವಿ. ಜಯಂತ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!