ಪೌಷ್ಟಿಕ ಆಹಾರ ಮಕ್ಕಳ ಬೌದ್ಧಿಕ ಬೆಳವಣಿಗೆ ಸಹಕಾರಿ

KannadaprabhaNewsNetwork | Published : Sep 29, 2024 1:35 AM

ಸಾರಾಂಶ

ಮಕ್ಕಳಲ್ಲಿನ ಆರೋಗ್ಯದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಮತೋಲಿತ ಆಹಾರ ಪ್ರಮುಖ

ಲಕ್ಷ್ಮೇಶ್ವರ: ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ವಿತರಣೆ ಮಾಡುವುದರಿಂದ ವಿದ್ಯಾರ್ಥಿಗಳು ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ.1ರಲ್ಲಿ ಶನಿವಾರ ಅಜಿಮ್ ಪ್ರೇಮಾಂಜಲಿ ಫೌಂಡೇಶನ್ ವತಿಯಿಂದ ವಾರದಲ್ಲಿ ನಾಲ್ಕು ದಿನಗಳ ಕಾಲ ಪೂರಕ ಆಹಾರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮೊಟ್ಟೆ, ಶೆಂಗಾ ಚಕ್ಕೆ, ಬಾಳೆ ಹಣ್ಣು ಮಕ್ಕಳಿಗೆ ವಿತರಿಸಿ ಮಾತನಾಡಿದ ಅವರು, ಮಕ್ಕಳಲ್ಲಿನ ಆರೋಗ್ಯದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಮತೋಲಿತ ಆಹಾರ ಪ್ರಮುಖವಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯಕ ಮಾತನಾಡಿ, ಮಕ್ಕಳು ಸರ್ಕಾರ ನೀಡುವ ಸೌಲಭ್ಯ ಬಳಸಿಕೊಂಡು ಉತ್ತಮವಾಗಿ ವಿದ್ಯಾಭ್ಯಾಸ ಮಾಡಬೇಕೆಂದು ತಿಳಿಸಿದರು.

ಪುರಸಭೆ ಸದಸ್ಯೆ ಪೂರ್ಣಿಮಾ ಪಾಟೀಲ ಮಾತನಾಡಿ, ಸರ್ಕಾರ ಯೋಜನೆಗೆ ಸಹಾಯ ನೀಡಿದ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಗೆ ಧನ್ಯವಾದ ತಿಳಿಸಿದ ಅವರು, ಸರ್ಕಾರಿ ಅನುದಾನಿತ ಶಾಲಾ ಮಕ್ಕಳಿಗೆ ಉಚಿತ ಗುಣಮಟ್ಟದ ಶಿಕ್ಷಣದ ಜತೆಗೆ ಮದ್ಯಾಹ್ನದ ಪೌಷ್ಟಿಕ ಬಿಸಿಯೂಟದೊಂದಿಗೆ ವಾರದ 6 ದಿನವೂ ಮೊಟ್ಟೆ ವಿತರಣೆ ಮಾಡುತ್ತಿದೆ. ಈ ಕಾರ್ಯಕ್ರಮ ಮಕ್ಕಳಲ್ಲಿನ ಅಪೌಷ್ಟಿಕತೆಯ ಕೊರತೆ ನಿವಾರಿಸಲು ಸಹಕಾರಿಯಾಗಿದೆ ಎಂದರು.

ಬಿಸಿಯೂಟದ ಅಧಿಕಾರಿ ಎಚ್.ಎಸ್. ರಾಮನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಬಸವರಾಜ ಗೋಡಿ, ಬಿ.ಎಂ. ಕುಂಬಾರ, ಡಿ.ಎನ್. ದೊಡ್ಡಮನಿ, ಸಿ.ಆರ್.ಪಿ ಸತೀಶ್ ಬೋಮಲೆ, ಎನ್.ಎ. ಮುಲ್ಲಾ, ಎಸ್.ಎಸ್. ಮುಳಗುಂದ, ಎಸ್.ಎಸ್. ಮಹಾಲಿಂಗಶೆಟ್ಟರ, ಈ.ಎಚ್. ಪೀಟರ್, ಸವಿತಾ ಬೋಮಲೆ, ಚೈತನ್ಯ ಮುದುಗಲ್, ಎಂ.ಎನ್. ಭರಮಗೌಡ್ರ, ಎಂ.ಎಸ್. ಹಿರೇಮಠ, ಎನ್.ಎನ್. ಶಿಗ್ಲಿ ಇದ್ದರು. ಸಿ.ಆರ್.ಪಿ.ಉಮೇಶ ನೇಕಾರ ಸ್ವಾಗತಿಸಿದರು. ಆರ್.ಬಿ. ಅಡರಕಟ್ಟಿ ನಿರೂಪಿಸಿದರು. ಡಿ.ಎನ್. ದೊಡ್ಮನಿ ವಂದಿಸಿದರು.

Share this article