ಉಳ್ಳಾಲ: ಶುಕ್ರವಾರ ಹಸೆಮಣೆ ಏರಿದ ನವ ದಂಪತಿ ಕುಂಪಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಮತಹಕ್ಕು ಚಲಾಯಿಸಿದ್ದಾರೆ. ಗಣೇಶ್ ಮತ್ತು ಕಾವ್ಯ ಜೋಡಿ ಶುಕ್ರವಾರದಂದು ಅಂಬಿಕಾ ರೋಡಿನ ಗಟ್ಟಿ ಸಮಾಜ ಸಭಾ ಭವನದಲ್ಲಿ ವಿವಾಹವಾಗಿದ್ದಾರೆ. ವಿವಾಹ ಕಾರ್ಯ ಮುಗಿದ ತಕ್ಷಣವೇ ನವ ದಂಪತಿ ಕುಂಪಲ ಶಾಲೆಗೆ ತೆರಳಿ ಮತದಾನ ಮಾಡಿದರು.
ಕಿನ್ನ ಗ್ರಾಮ ಬೆಳರಿಂಗೆಯಲ್ಲಿ ಕೈಕೊಟ್ಟ ಇವಿಎಂಉಳ್ಳಾಲ: ಉಳ್ಳಾಲ ತಾಲೂಕಿನ ಕಿನ್ಯ ಗ್ರಾಮದ ಬೆಳರಿಂಗೆ ಸರಕಾರಿ ಪ್ರಾಥಮಿಕ ಶಾಲೆಯ ಬೂತ್ ಸಂಖ್ಯೆ 175 ರ ಇವಿಎಂ ಕೈಕೊಟ್ಟ ಪರಿಣಾಮ ಒಂದು ತಾಸು ಮತದಾನ ರದ್ದಾದ ಘಟನೆ ನಡೆದಿದೆ. ಬೆಳರಿಂಗೆ ಶಾಲೆ ಮತಗಟ್ಟೆಯ ಬೂತ್ ಸಂಖ್ಯೆ 175 ರ ಇವಿಎಂನಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಸಮಸ್ಯೆ ಕಂಡು ಬಂದಿದೆ. ಸುಮಾರು ಒಂದು ಗಂಟೆ ಕಾಲ ಮತದಾನ ಸ್ಥಗಿತಗೊಂಡು ಮತದಾರರು ಉರಿ ಬಿಸಿಲಲ್ಲೇ ಸರತಿ ಸಾಲಲ್ಲಿ ಕಾಯುವಂತಾಯಿತು. ಬಳಿಕ ಚುನಾವಣಾಧಿಕಾರಿಗಳು ತ್ವರಿತವಾಗಿ ಬದಲಿ ಇವಿಎಂ ವ್ಯವಸ್ಥೆ ಕಲ್ಪಿಸಿದ್ದು ಮತ್ತೆ ಮತದಾನ ಪ್ರಕ್ರಿಯೆಯು ಸಾಂಗವಾಗಿ ನಡೆಯಿತು.ಕಲ್ಲಾಪು ಮತಗಟ್ಟೆಯಲ್ಲಿ ನಾರಿ ಶಕ್ತಿ ಬೂತ್ ಶಕ್ತಿ
ಉಳ್ಳಾಲ: ಮಂಗಳೂರು ವಿಧಾನ ಸಭಾ ಕ್ಷೇತ್ರದ ವಿವಿಧ ಮತಗಟ್ಟೆಗಳಲ್ಲಿ ಬಿಜೆಪಿಯ ‘ನಾರಿ ಶಕ್ತಿ ಬೂತ್ ಶಕ್ತಿ ಅಭಿಯಾನ’ ಅಂಗವಾಗಿ ಶುಕ್ರವಾರ ಮತದಾನ ಆರಂಭವಾದ 7 ಗಂಟೆಗೆ ಸರದಿ ಸಾಲಿನಲ್ಲಿ ನಿಂತು ಪ್ರಥಮವಾಗಿ ನವನಾರಿಯರು ಉತ್ಸಾಹದಿಂದ ಮತ ಚಲಾಯಿಸಿದರು. ಉಳ್ಳಾಲ ತಾಲೂಕಿನ ಕಲ್ಲಾಪು ಪಟ್ಲ ಉರ್ದು ಶಾಲೆ, ಕುಂಪಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಿಲಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಅನೇಕ ಮತಗಟ್ಟೆಗಳಲ್ಲಿ ನಾರಿಯರು ಪ್ರಥಮವಾಗಿ ಮತ ಚಲಾಯಿಸಿದರು.