ಕನ್ನಡಪ್ರಭ ವಾರ್ತೆ ಜಮಖಂಡಿ
ನಗರದ ಸಿದ್ದು ನ್ಯಾಮಗೌಡ ಸೌಹಾರ್ದ ಸಹಕಾರಿ ಬ್ಯಾಂಕ್ ಸಭಾಭವನದಲ್ಲಿ ದಿ.ಸಿದ್ದು ನ್ಯಾಮಗೌಡ ಅವರ 8ನೇ ಪುಣ್ಯಸ್ಮರಣೆ ನಿಮಿತ್ತ ಸಿದ್ದು ನ್ಯಾಮಗೌಡ ಕ್ರೀಡಾ ಅಕಾಡೆಮಿಗೆ ₹5 ಲಕ್ಷ ಮೊತ್ತದ ಕಬಡ್ಡಿ ಮ್ಯಾಟ್ ವಿತರಿಸಿ ಅವರು ಮಾತನಾಡಿದರು.
ಕ್ರೀಡೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸಹಕಾರಿ ಸಂಸ್ಥೆ ನಿರಂತರವಾಗಿ ಕ್ರೀಡಾಪಟುಗಳಿಗೆ ನೆರವು ನೀಡುತ್ತ ಬಂದಿದೆ. 2022-23ನೇ ಸಾಲಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿ ಸಿದ್ದು ನ್ಯಾಮಗೌಡ ಕ್ರೀಡಾ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದ ಬಡ ಕ್ರೀಡಾಪಟುಗಳ ಊಟ ಮತ್ತು ವಸತಿ ವ್ಯವಸ್ಥೆಗಾಗಿ ಸಹಕಾರಿ ವತಿಯಿಂದ ₹1.25 ಸಾವಿರ ಧನಸಹಾಯ ನೀಡಲಾಗಿದೆ ಎಂದು ತಿಳಿಸಿದರು. 2023-24ನೇ ಸಾಲಿನಲ್ಲಿ ಜಮಖಂಡಿ ತಾಲೂಕಿನ ಆಲಬಾಳ ಗ್ರಾಮದ ಗ್ರಾಮೀಣ ಯುವ ಸೈಕ್ಲಿಂಗ್ ಪಟು ಆಯಿಷಾ ಮೋಮಿನ್ ಅವರು ಕಿರಿಯ ವಯಸ್ಸಿನಲ್ಲಿ ಸೈಕ್ಲಿಂಗ್ ಕ್ಷೇತ್ರದಲ್ಲಿ ತೋರಿದ ಸಾಧನೆ ಗುರುತಿಸಿ ₹5 ಲಕ್ಷ ಮೌಲ್ಯದ ರೇಸಿಂಗ್ ಸೈಕಲ್ ಅನ್ನು ಸಹಕಾರಿ ವತಿಯಿಂದ ನೀಡಲಾಗಿದೆ ಎಂದು ತಿಳಿಸಿದರು. 2024-25ನೇ ಸಾಲಿನಲ್ಲಿ ಜಮಖಂಡಿ ತಾಲೂಕಿನ ಗಣಿ ಗ್ರಾಮದ ಬಡ ಜೂಡೋ ಕ್ರೀಡಾಪಟು ರಕ್ಷಿತಾ ರವೀಂದ್ರ ಕೋಮಾರ ಅವರಿಗೆ ಉಜ್ವಲ ಭವಿಷ್ಯ ನಿರ್ಮಾಣಕ್ಕಾಗಿ ₹1 ಲಕ್ಷ ಧನಸಹಾಯ ಒದಗಿಸಲಾಗಿದೆ ಎಂದು ಹೇಳಿದರು.ಸಹಕಾರಿ ಸಂಸ್ಥೆ ರೈತರ ಅನುಕೂಲಕ್ಕಾಗಿ ರಸಗೊಬ್ಬರ, ಬೀಜ ಹಾಗೂ ಕೀಟನಾಶಕ ಮಾರಾಟ ಮಳಿಗೆ ಸ್ಥಾಪಿಸಿದ್ದು, ಯೋಗ್ಯ ದರದಲ್ಲಿ ರೈತರಿಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಬಸವರಾಜ ನ್ಯಾಮಗೌಡ, ನೆಮಿನಾಥ ಜಕನೂರ, ಗುರಪ್ಪ ಗಲಗಲಿ, ಈಶ್ವರ ಚೌಶರಿ, ಭಾಸ್ಕರ ಬಡಿಗೇರ, ಮೂರ್ತಿ ಕರಾಜಗೋಳ, ನಿಂಗಪ್ಪ ಕಡಪಟ್ಟಿ, ರವಿ ಯಡಹಳ್ಳಿ, ಭೀಮಪ್ಪ ಬೆಳಗಲಿ, ಅನ್ವರ್ ಮೊಮಿನ್ ಸೇರಿದಂತೆ ಬ್ಯಾಂಕ್ ಸಿಬ್ಬಂದಿ ಉಪಸ್ಥಿತರಿದ್ದರು.ಏಳು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಿದ್ದು ನ್ಯಾಮಗೌಡ ಸೌಹಾರ್ದ ಸಹಕಾರಿ 2025-26ನೇ ಸಾಲಿನಲ್ಲಿ ಸುಮಾರು ₹5 ಕೋಟಿವರೆಗೆ ಉತ್ತಮ ಲಾಭ ಗಳಿಸುತ್ತ ಜನಪರ ಸೇವೆ ನೀಡುತ್ತಿದೆ ಎಂದು ಮಾಜಿ ಶಾಸಕ ಅನಂದ ನ್ಯಾಮಗೌಡ ಹೇಳಿದರು