ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ಮೂರ್ನಾಡು ಮಾರುತಿ ವಿದ್ಯಾಸಂಸ್ಥೆ 2025 -26ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘಕ್ಕೆ ನಡೆದ ಮತದಾನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಮುಂಡಂಡ ಕೆ.ಅಪ್ಪಚ್ಚುರವರು ವಿದ್ಯಾರ್ಥಿ ನಾಯಕರಿಗೆ ಪ್ರಮಾಣವಚನ ಬೋಧಿಸಿದರು.
ಬಳಿಕ ಮಾತನಾಡಿದ ಅವರು , ವಿದ್ಯಾರ್ಥಿದೆಸೆಯಲ್ಲಿ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು. ಚುನಾವಣೆಯ ಮೂಲಕ ಆಯ್ಕೆಆದ ವಿದ್ಯಾರ್ಥಿ ಪ್ರತಿನಿಧಿಗಳು ಪ್ರಾಮಾಣಿಕ, ಮತ್ತು ಪಾರದರ್ಶಕವಾಗಿ ತಮ್ಮ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕು ಎಂದು ಕಿವಿ ಮಾತು ಹೇಳಿದರು.ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಚೇಂದ್ರಿಮಡ ಗಿಲ್ ಸೋಮಯ್ಯ , ಕಾರ್ಯದರ್ಶಿಗಳಾದ ಬಡುವಂಡ ಅರುಣ್ ಅಪ್ಪಚ್ಚು, ನಿರ್ದೇಶಕರಾದ ಮುಂಡಂಡ ನೀಲವ್ವ ಮುತ್ತಣ್ಣ, ಪ್ರಾಂಶುಪಾಲರಾದ ಸುಮಿತ್ರ ಎಂ.ಎ ಉಪಪ್ರಾಂಶುಪಾಲರಾದ ಹೇಮಾವತಿ ಎಂ ಡಿ, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಆಯ್ಕೆಯಾದ ನೂತನ ವಿದ್ಯಾರ್ಥಿ ನಾಯಕರು: ಪ್ರೌಢ ಶಾಲಾ ವಿಭಾಗದಲ್ಲಿ ಶಾಲಾ ನಾಯಕ ಅಭಿಷೇಕ್ ರೈ ಬಿ.ಎ., ಶಾಲಾ ಉಪನಾಯಕಿ ಹಬೀಬಾ ಎಂ.ಯು.,ಶಾಲಾ ಶಿಸ್ತು ನಾಯಕ ಸುರೇಶ ಎ.ನ್., ಶಾಲಾ ಉಪ ಶಿಸ್ತು ನಾಯಕಿ ಮಾಚಮ್ಮಸಿ .ಟಿ., ಸಾಂಸ್ಕೃತಿಕ ನಾಯಕಿ ಪ್ರಕೃತಿ ಆರ್., ಸಾಂಸ್ಕೃತಿಕ ಉಪನಾಯಕಿ ಸ್ಪಂದನ ಪಿ.ಪಿ., ಕ್ರೀಡಾನಾಯಕ ಅಪ್ಸಲ್ ಬಿ ಎ, ಕ್ರೀಡಾ ಉಪನಾಯಕ ಆಶೀರ್, ಕಾಲೇಜು ವಿಭಾಗದಲ್ಲಿ ಕಾಲೇಜು ನಾಯಕಿ ಅನುಶಿಕ, ಉಪನಾಯಕಿ ಮೋನಿಷಾ, ಶಿಸ್ತು ನಾಯಕಿ ಧನ್ಯ, ಉಪನಾಯಕಿ ಶಾಲಿನಿ, ಸಾಂಸ್ಕೃತಿಕ ನಾಯಕಿ ಕುಶ್ಮಿತಾ, ಉಪನಾಯಕಿ ನಿಂಚನ, ಕ್ರೀಡಾನಾಯಕ ತೋಹಿಬ್, ಉಪನಾಯಕ ಆಫ್ನಾಜ್