ಮದಕರಿ ನಾಯಕರ ಪವಿತ್ರ ಭೂಮಿಯಲ್ಲಿ ಓಬವ್ವ ಅಜರಾಮರ

KannadaprabhaNewsNetwork |  
Published : Nov 12, 2025, 01:45 AM IST
11 ಜೆ.ಜಿ.ಎಲ್.1)) ಜಗಳೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ವೀರ ವನಿತೆ ಒನಕೆ ಓಬವ್ವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿದರು. | Kannada Prabha

ಸಾರಾಂಶ

ರಾಜವೀರ ಮದಕರಿ ನಾಯಕರು ಆಳಿದ ಪವಿತ್ರ ಭೂಮಿಯಲ್ಲಿ ಓಬವ್ವನ ಹೆಜ್ಜೆ ಗುರುತುಗಳು ಅಜರಾಮರ. ಮಹಾನ್ ನಾಯಕರ ಜೀವನ ಗುಡಿಸಲಲ್ಲಿ ಹುಟ್ಟಿ, ಅರಮನೆಯಲ್ಲಿ ಅಂತ್ಯವಾಗಿರುವುದಕ್ಕೆ ಅನೇಕ ಮಹಾನ್ ವ್ಯಕ್ತಿಗಳ ಸಾಧನೆಯೇ ಸಾಕ್ಷಿಯಾಗಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

- ಜಗಳೂರು ತಾ.ಪಂ.ನ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ದೇವೇಂದ್ರಪ್ಪ

- - -

ಕನ್ನಡಪ್ರಭ ವಾರ್ತೆ ಜಗಳೂರು

ರಾಜವೀರ ಮದಕರಿ ನಾಯಕರು ಆಳಿದ ಪವಿತ್ರ ಭೂಮಿಯಲ್ಲಿ ಓಬವ್ವನ ಹೆಜ್ಜೆ ಗುರುತುಗಳು ಅಜರಾಮರ. ಮಹಾನ್ ನಾಯಕರ ಜೀವನ ಗುಡಿಸಲಲ್ಲಿ ಹುಟ್ಟಿ, ಅರಮನೆಯಲ್ಲಿ ಅಂತ್ಯವಾಗಿರುವುದಕ್ಕೆ ಅನೇಕ ಮಹಾನ್ ವ್ಯಕ್ತಿಗಳ ಸಾಧನೆಯೇ ಸಾಕ್ಷಿಯಾಗಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು. ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ವೀರವನಿತೆ ಒನಕೆ ಓಬವ್ವ ಜಯಂತ್ಯುತ್ಸವ ಹಿನ್ನೆಲೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಮನಮೋಹಕ ಬತೇರಿ ಹೊಂದಿರುವ ಉಕ್ಕಿನಂತಹ ಏಳು ಸುತ್ತಿನ ಕೋಟೆಗೆ ಹೈದರಾಲಿ ಸೈನ ಒಳಸಂಚು ರೂಪಿಸಿ, ಕೋಟೆ ಪ್ರವೇಶಿಸಿತ್ತು. ಆಗ ದುರ್ಗದ ಜನರನ್ನು ರಕ್ಷಿಸಲು ಧೀರ ಮಹಿಳೆ ಓಬವ್ವ ಒನಕೆ ಹಿಡಿದು ನೂರಾರು ಎದುರಾಳಿಗಳನ್ನು ಕೊಂದು, ಇತಿಹಾಸ ಪುಟಗಳಲ್ಲಿ ತನ್ನ ಹೆಜ್ಜೆಗುರುತುಗಳನ್ನು ಬಿಟ್ಟುಹೋಗಿದ್ದಾರೆ. ಎಂದರು.

ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಮಾತನಾಡಿ, ಧೀರ ಮಹಿಳೆಯರ ಸಾಹಸವನ್ನು ನಾವೆಲ್ಲ ಗೌರವಿಸುತ್ತೇವೆ. ಆದರೆ, ಕೆಲವರು ಮನೆಯಲ್ಲಿ ಹೆಂಡತಿ, ತಾಯಿ, ಸಹೋದರಿಯರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ. ಹೀಗಾದರೆ ಸ್ತ್ರೀ ಕುಲಕ್ಕೆ ನೀವು ಕೊಡುವ ಗೌರವ ಇದೆನಾ? ತಾಯಿಯ ಗರ್ಭದಲ್ಲಿ ಹುಟ್ಟಿದ ನಾವೆಲ್ಲ ಸ್ತ್ರೀಯರಿಗೆ ಗೌರವ ಸಲ್ಲಿಸಿದರೆ ಮಹಿಳಾ ಕುಲಕ್ಕೆ ಗೌರವ ಸಲ್ಲಿಸಿದಂತೆ ಎಂದರು.

ಕೆಪಿಸಿಸಿ ಎಸ್‌ಟಿ ಘಟಕದ ಮಾಜಿ ಅಧ್ಯಕ್ಷ ಕೆ.ಪಿ. ಪಾಲಯ್ಯ, ಧನ್ಯಕುಮಾರ್, ಮಾದೀಹಳ್ಳಿ ಮಂಜಪ್ಪ, ವೀರಸ್ವಾಮಿ, ಎನ್.ಟಿ. ಎರ‍್ರಿಸ್ವಾಮಿ, ಮಾತನಾಡಿದರು.

ಕಾರ್ಯಕ್ರಮದಲ್ಲಿ ಛಲವಾದಿ ಸಂಘಟನೆಯ ತಾಲೂಕು ಅಧ್ಯಕ್ಷ ನಿಜಲಿಂಗಪ್ಪ, ಮುಖಂಡರಾದ ಬಿ.ಮಹೇಶ್ವರಪ್ಪ, ಓಮಣ್ಣ, ಶಿವನಗೌಡ, ಶಂಷೀರ್ ಅಹಮದ್, ಬಸವರಾಜ್, ಅಜ್ಜಪ್ಪ ನಾಡಿಗೇರ್, ತಾನಾಜಿ ಗೋಸಾಯಿ, ಸಿ.ಲಕ್ಷ್ಮಣ, ಪ್ರೊ.ನಾಗಲಿಂಗಪ್ಪ, ನಾಗೇಶ್, ಹಾಲಮೂರ್ತಿ, ಇಒ ಕೆಂಚಪ್ಪ, ಹರಿಹರಪ್ಪ, ಶಾಂತಮ್ಮ, ಬಸವರಾಜ್, ಮೋಹನ್, ಬಿದರಕೆರೆ ಬಸವರಾಜ್ ಇತರರು ಇದ್ದರು.

- - -

-11ಜೆಜಿಎಲ್1:

ಒನಕೆ ಓಬವ್ವ ಜಯಂತ್ಯುತ್ಸವದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ