ಮಹಾಂತ ಶಿವಯೋಗಿ ಜನ್ಮದಿನ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ

KannadaprabhaNewsNetwork |  
Published : Aug 02, 2026, 01:30 AM IST
1ಎಚ್ಎಸ್ಎನ್10 :  | Kannada Prabha

ಸಾರಾಂಶ

ಯುವಜನತೆ ವ್ಯಸನಗಳಿಂದ ದೂರವಿರುವುದು ಬಹುಮುಖ್ಯ ಆಕಸ್ಮಾತ್ ವ್ಯಸನಗಳಿಗೆ ಬಲಿಯಾಗಿದ್ದಾರೆ ಅದರಿಂದ ಹೊರಬರಲು ಪ್ರಯತ್ನಿಸಿ, ವ್ಯಸನಗಳಿಂದ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ ಅಲ್ಲದೇ ಅಪರಾದ, ಅಪಘಾತ ಸಂಭವಿಸುತ್ತವೆ ಜೊತೆಗೆ ಕುಟುಂಬದಲ್ಲಿ ಬಿರುಕು ಉಂಟಾಗುತ್ತದೆ ಗಂಭೀರವಾಗಿ ಪರಿಗಣಿಸಿ ದುಶ್ಚಟಗಳಿಂದ ದೂರವಿರುವುದು ಅತ್ಯಗತ್ಯವಾಗಿದೆ ಎಂದು ತಿಳಿಸಿದರು. ಇಂದಿನ ದಿನಗಳಲ್ಲಿ ಮಾದಕ ವಸ್ತುಗಳ ಜೊತೆಗೆ ಮೊಬೈಲ್ ಬಳಕೆ ಅಗತ್ಯಕ್ಕಿಂತ ಹೆಚ್ಚು ಉಪಯೋಗ ಮಾಡುತ್ತಿರುವುದು ಕಂಡು ಬರುತ್ತಿದೆ ಇದು ಒಂದು ವ್ಯಸನವಾಗಿ ಮಾರ್ಪಟ್ಟಿದೆ ಇದ್ದರಿಂದ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುತ್ತದೆ, ಮೊಬೈಲ್ ಒಂದು ವಸ್ತು ಆದರೆ ಅದಕ್ಕೆ ನೀವು ವಸ್ತುವಾಗಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಡಾ. ಮಹಾಂತ ಶಿವಯೋಗಿ ಶ್ರೀಗಳು ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಜೋಳಿಗೆಯನ್ನು ಹಿಡಿಯುವ ಮೂಲಕ ದುಶ್ಚಟಗಳಾದ ಮದ್ಯಪಾನ, ತಂಬಾಕು, ಸಿಗರೇಟ್, ಬೀಡಿ, ಇತ್ಯಾದಿ ದುಶ್ಚಟಗಳನ್ನು ಜೋಳಿಗೆ ಹಾಕಿ ಇನ್ನು ಮುಂದೆ ಅವುಗಳಿಂದ ದೂರವಿರಿ ಎಂದು ಮನವಿ ಮಾಡಿ ವ್ಯಸನಗಳಿಂದ ಮುಕ್ತರಾಗಿಸುವ ಮಾದರಿ ಕೆಲಸ ಮಾಡಿದ್ದಾರೆ ಎಂದು ಬಸವ ಕೇಂದ್ರದ ಅಧ್ಯಕ್ಷರಾದ ಬಸವರಾಜ್ ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಾಸನ ಇವರ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಸಭಾಂಗಣದಲ್ಲಿ ಶ್ರೀ.ಮ.ನಿ.ಪ್ರ ಡಾ. ಮಹಾಂತ ಶಿವಯೋಗಿ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಮಾಜದಲ್ಲಿ ಅನೇಕ ಜನರು ದುಶ್ಚಟಗಳಿಗೆ ಬಲಿಯಾಗಿ ಆರ್ಥಿಕ ಸಂಕಷ್ಟದ ಜೊತೆಗೆ ಸಾಮಾಜಿಕ ಹಿನ್ನಡೆ ಕೂಡ ಅನುಭವಿಸುತ್ತಾರೆ. ಈ ನಿಟ್ಟಿನಲ್ಲಿ ಯುವ ಜನತೆ ದುಶ್ಚಟಗಳಿಂದ ದೂರವಿರಿ ಎಂದು ತಿಳಿಸಿದರು.

೧೨ನೇ ಶತಮಾನದ ವಚನಕಾರರ ಸನ್ಮಾರ್ಗದಲ್ಲಿ ನಡೆಯಬೇಕು ದುಶ್ಚಟಗಳಿಗೆ ಒಳಗಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದು ಅಲ್ಲದೆ ಹಲವಾರು ಸಂಸಾರ ಹಾಳಾಗುತ್ತಿವೆ. ಆದ್ದರಿಂದ ದುಶ್ಚಟಗಳನ್ನು ತ್ಯಜಿಸಬೇಕು ಎಂದು ತಿಳಿಸಿದರು. ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ನಿಮ್ಮ ಆದರ್ಶಗಳು ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಮಾಡಬೇಕು ಹಾಗೂ ಸಮಾಜಕ್ಕೆ ಮಾದರಿಯಾಗುವಂತಹ ಕೆಲಸ ಮಾಡಬೇಕು ಎಂದರು. ಮಹಾಂತ ಶಿವಯೋಗಿಗಳು ವ್ಯಸನ ನಿರ್ಮೂಲನೆಗೆ ಮಾತ್ರ ಸೀಮಿತವಾಗಿರಲಿಲ್ಲ ಯಾವುದೇ ಜಾತಿ, ಮತ, ಧರ್ಮ ಭೇದ ಭಾವ ಇಲ್ಲದೆ ಮಕ್ಕಳಿಗೆ ಶಿಕ್ಷಣ, ವಸತಿ ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು. ಹಿಮ್ಸ್ ಮನೋ ವೈದ್ಯಕೀಯ ವಿಭಾಗ ಸಹಾಯಕ ಪ್ರಾಧ್ಯಾಪಕರಾದ ಡಾ ಭಾರತಿ ಅವರು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ ಮಾನಸಿಕ ಸಮಸ್ಯೆಗಳು ಮನಸ್ಸಿನ ಮೇಲೆ ಮಾತ್ರವಲ್ಲದೇ ದೇಹದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ ಅಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಿ ಎಂದರು. ಅವಶ್ಯಕತೆ ಇಲ್ಲದಿರುವ ವಸ್ತುವನ್ನು ಬಳಕೆ ಮಾಡಿದರೆ ದುಶ್ಚಟಗಳಿಗೆ ಒಳಗಾದಂತೆ ಆದ್ದರಿಂದ ಅವಶ್ಯಕತೆ ಇಲ್ಲದೆ ಇರುವ ಯಾವ ವಸ್ತುಗಳನ್ನು ಬಳಸಬಾರದು ಎಂದು ಹೇಳಿದರು. ಪದೇ ಪದೆ ಕಾಫಿ, ಟೀ ಸೇವನೆ ಮಾಡುವುದು ಸಹ ಒಂದು ವ್ಯಸನವಾಗಿದೆ, ಮಂಕು ಬರುವ ಎಲ್ಲಾ ವಸ್ತುಗಳು ಸಹ ದೇಹಕ್ಕೆ ಹಾಗೂ ಜೀವಕ್ಕೆ ಹಾನಿಕಾರಕವಾಗಿರುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ತರಗತಿಯಲ್ಲಿ ದಿನ ದಿನ ಹೆಚ್ಚು ಗೈರು ಹಾಜರಾಗುವುದು ಇಂತಹ ಕೆಟ್ಟ ಚಟಗಳ ಮೊದಲ ಹಂತವಾಗಿರುತ್ತದೆ ಹಾಗೂ ಮದ್ಯಪಾನದಿಂದ ಮಾನಸಿಕ ಸಮಸ್ಯೆಗೆ ಒಳಗಾಗುತ್ತಾರೆ ಆದ್ದರಿಂದ ದಿನದಿಂದ ದಿನಕ್ಕೆ ಕೆಟ್ಟ ಚಟಗಳು ಹೆಚ್ಚಾಗುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿಗಳ ಪ್ರತಿ ಬದಲಾವಣೆ ಶಿಕ್ಷಕರಿಗೆ ತಿಳಿಯುತ್ತದೆ ಇದನ್ನು ಸೂಕ್ಷ್ಮವಾಗಿ ಗಮನಿಸಿ ವಿದ್ಯಾರ್ಥಿಗಳಿಗೆ ದುಶ್ಚಟಗಳಿಂದ ದೂರವಿರುವಂತೆ ತಿಳಿವಳಿಕೆ ನೀಡಬೇಕು ಎಂದರು.

ಯುವಜನತೆ ವ್ಯಸನಗಳಿಂದ ದೂರವಿರುವುದು ಬಹುಮುಖ್ಯ ಆಕಸ್ಮಾತ್ ವ್ಯಸನಗಳಿಗೆ ಬಲಿಯಾಗಿದ್ದಾರೆ ಅದರಿಂದ ಹೊರಬರಲು ಪ್ರಯತ್ನಿಸಿ, ವ್ಯಸನಗಳಿಂದ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ ಅಲ್ಲದೇ ಅಪರಾದ, ಅಪಘಾತ ಸಂಭವಿಸುತ್ತವೆ ಜೊತೆಗೆ ಕುಟುಂಬದಲ್ಲಿ ಬಿರುಕು ಉಂಟಾಗುತ್ತದೆ ಗಂಭೀರವಾಗಿ ಪರಿಗಣಿಸಿ ದುಶ್ಚಟಗಳಿಂದ ದೂರವಿರುವುದು ಅತ್ಯಗತ್ಯವಾಗಿದೆ ಎಂದು ತಿಳಿಸಿದರು. ಇಂದಿನ ದಿನಗಳಲ್ಲಿ ಮಾದಕ ವಸ್ತುಗಳ ಜೊತೆಗೆ ಮೊಬೈಲ್ ಬಳಕೆ ಅಗತ್ಯಕ್ಕಿಂತ ಹೆಚ್ಚು ಉಪಯೋಗ ಮಾಡುತ್ತಿರುವುದು ಕಂಡು ಬರುತ್ತಿದೆ ಇದು ಒಂದು ವ್ಯಸನವಾಗಿ ಮಾರ್ಪಟ್ಟಿದೆ ಇದ್ದರಿಂದ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುತ್ತದೆ, ಮೊಬೈಲ್ ಒಂದು ವಸ್ತು ಆದರೆ ಅದಕ್ಕೆ ನೀವು ವಸ್ತುವಾಗಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕಟ್ಟಾಯ ಶಿವಕುಮಾರ್‌ ಅವರು ಮಾತನಾಡಿ ಅನೇಕ ವಿದ್ಯಾರ್ಥಿಗಳು ಮಾದಕವಸ್ತುಗಳಿಗೆ ಮಾರು ಹೋಗುತ್ತಿದ್ದರೆ, ಆದ್ದರಿಂದ ಶಿವ ಯೋಗಿಗಳ ಉದ್ದೇಶ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂಬುದು ಅವರ ಆಶಯವಾಗಿತ್ತು ಎಂದರು. ಮಕ್ಕಳಿಗೆ ಜಾಗೃತಿ ಮೂಡಿಸಿ ಯುವ ಜನತೆ ಇಂತಹ ಕೆಟ್ಟ ಹಾದಿಗೆ ಹೋಗದಂತೆ ತಡೆಯಬೇಕು ಹಾಗೂ ವ್ಯಸನ ಮುಕ್ತ ಸಮಾಜವಾಗಿ ಮಾಡುವುದು ಕೇವಲ ಸರ್ಕಾರದ ಕೆಲಸ ಮಾತ್ರವಲ್ಲ ಪ್ರತಿಯೊಬ್ಬರ ಕೆಲಸ ಎಂದ ತಿಳಿಸಿದರು.

ಪ್ರತಿಯೊಬ್ಬರಲು ಗುರು ಇದ್ದಾನೆ ಅದನ್ನು ನಾವು ಅರಿಯಬೇಕು ಎಂದು ತಿಳಿಸಿದ ಅವರು ಯುವಜನತೆ ಕೆಟ್ಟ ಚಟಗಳಿಗೆ ಬಲಿಯಾಗಿ ತಮ್ಮ ಅಮೂಲ್ಯವಾದ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.ಜಿಲ್ಲಾ ವಾರ್ತಾಧಿಕಾರಿ ಮೀನಾಕ್ಷಮ್ಮ ಸ್ವಾಗತಿಸಿದರು, ಡಿ.ಟಿ ಶಿವಣ್ಣ ಪ್ರತಿಜ್ಞಾವಿಧಿ ಬೋಧಿಸಿದರು, ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು, ಅನಿಲ್ ಕುಮಾರ್‌ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಡಬ್ಲ್ಯೂಸಿ ಆದೇಶ ಖಂಡಿಸಿ ಕರವೇ ಪ್ರತಿಭಟನೆ
ಕಾಡಾನೆಗಳಿಗೆ ಇನ್ನೆಷ್ಟು ಜನರ ಬಲಿ ಕೊಡ್ತೀರಿ