ಮಾದಕ ವಸ್ತು ವಿರೋಧಿ ದಿನ ಆಚರಣೆ

KannadaprabhaNewsNetwork |  
Published : Jul 03, 2026, 02:45 AM IST
 | Kannada Prabha

ಸಾರಾಂಶ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೋಮವಾರಪೇಟೆ ತಾಲೂಕು ಗುಡ್ಡೆಹೊಸೂರು ವಲಯದ ವ್ಯಾಪ್ತಿಗೆ ಒಳಪಡುವ ಮೂಕಾಂಬಿಕಾ ಶಾಲೆ ಗುಮ್ಮನಕೊಲ್ಲಿ ಯಲ್ಲಿ ಮಾದಕ ವಸ್ತು ವಿರೋಧಿ ದಿನ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಗುಡ್ಡೆಹೊಸೂರು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೋಮವಾರಪೇಟೆ ತಾಲೂಕು ಗುಡ್ಡೆಹೊಸೂರು ವಲಯದ ವ್ಯಾಪ್ತಿಗೆ ಒಳಪಡುವ ಮೂಕಾಂಬಿಕಾ ಶಾಲೆ ಗುಮ್ಮನಕೊಲ್ಲಿ ಯಲ್ಲಿ ಮಾದಕ ವಸ್ತು ವಿರೋಧಿ ದಿನ ಆಚರಿಸಲಾಯಿತು.

ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾದ ಆನ್ಲೈನ್ ಮಾಹಿತಿ ಕಾರ್ಯಕ್ರಮದಲ್ಲಿ ಒಟ್ಟು 150 ವಿದ್ಯಾರ್ಥಿ ಗಳು ಭಾಗವಹಿಸಿದರು. ಪೊಲೀಸ್ ಸೂಪರ್ ಡೆಂಟ್ ವೆಂಕಟೇಶ್ ಅವರು ಟೂಬೇಕೋ ಗುಟ್ಕಾ, ಲಿಕ್ಕರ್ ಸೇವನೆ ಯಿಂದ ಮಾನವನ ದೇಹದ ಮೇಲೆ ಆಗುವ ಪರಿಣಾಮ ವಿಷಯದ ಬಗ್ಗೆ ವಿಡಿಯೋ ಕ್ಲಿಪ್ ಮೂಲಕ ಮಾಹಿತಿ ನೀಡಿದರು.

ಡಾ. ದೇವಿ ಪ್ರಸಾದ್ ಮಾತನಾಡಿ, ಶಾಲಾಮಕ್ಕಳು ಮದ್ಯಪಾನ ಧೂಮಪಾನ ಮುಂತಾದ ದುಶ್ಚಟಗಳಿಗೆ ಬಲಿಯಾಗದೆ ತಮ್ಮ ಜೀವನವನ್ನು ತಾವೇ ರೂಪಿಸಬೇಕು ತಂದೆ ತಾಯಿಗಳು ನಿಮ್ಮ ಮೇಲೆ ಇಟ್ಟಿದ್ದ ನಂಬಿಕೆಗೆ ದ್ರೋಹ ಮಾಡಬಾರದು ಎಂದು ಹೇಳಿದರು.

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಸನ್ನ , ಶಾಲಾ ಮುಖ್ಯ ಶಿಕ್ಷಕರಾದ ಸುರೇಶ, ಸೋಮವಾರ ಪೇಟೆ ತಾಲೂಕಿನ ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಭಾಗವಹಿಸಿದ್ದರು.

ಯೋಜನಾಧಿಕಾರಿ ಹಾಗೂ ಶಾಲಾಶಿಕ್ಷಕರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಡಗಿನಾದ್ಯಂತ ಬಿರುಸು ಪಡೆದ ಮಳೆ
ವಚನ ಸಾಹಿತ್ಯಕ್ಕೆ ಡಾ. ಹಳಕಟ್ಟಿ ಕಾರ್ಯ ಅವಿಸ್ಮರಣೀಯ: ಮೂರ್ತಿ