ಸೋಲಾರ್ ಫೆನ್ಸಿಂಗ್ ಅಳವಡಿಕೆಗೆ ಅಡ್ಡಿ

KannadaprabhaNewsNetwork |  
Published : Mar 23, 2025, 01:31 AM IST
22ಕೆಬಿಪಿಟಿ.1.ಬಂಗಾರಪೇಟೆ ತಾಲೂಕಿನ ಮಲ್ಲೇಶನಪಾಳ್ಯದ ಬಳಿ ಸೋಲಾರ್ ಫೆನ್ಸಿಂಗ್ ಅಳವಡಿಕೆಗೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆಳಿದಿರುವುದು. | Kannada Prabha

ಸಾರಾಂಶ

ತಮಿಳುನಾಡು ಅರಣ್ಯ ಪ್ರದೇಶದಿಂದ ಬರುವಂತಹ ಕಾಡಾನೆಗಳು ರೈತರ ಬೆಳೆಗಳನ್ನು ನಾಶಪಡಿಸುವುದರ ಜೊತೆಗೆ ರೈತರನ್ನು ಸಹ ಬಲಿ ತೆಗೆದುಕೊಳ್ಳುತ್ತಿದೆ. ಸಾವುನೋವುಗಳನ್ನು ತಪ್ಪಿಸಲು ಮತ್ತು ಬೆಳೆ ಹಾನಿಯನ್ನು‌ ನಿಯಂತ್ರಿಸುವ ಸಲುವಾಗಿ ಬಾಕಿ‌ ಇರುವಂತಹ ಸ್ಥಳದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸೋಲಾರ್ ಫೆನ್ಸಿಂಗ್ ಅಳವಡಿಸಲು ಮುಂದಾಗಿದ್ದಾರೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಗಡಿ ಭಾಗದಲ್ಲಿ ಆನೆಗಳು ಗ್ರಾಮಗಳತ್ತ ನುಸುಳದಂತೆ ತಡೆಯಲು ಬಾಕಿ ಇರುವ ಸೋಲಾರ್ ಫೆನ್ಸಿಂಗ್ ಅಳವಡಿಕೆಗೆ ಮುಂದಾಗಿರುವ ಅರಣ್ಯ ಇಲಾಖೆಗೆ ಮಲ್ಲೇಶನಪಾಳ್ಯ ಗ್ರಾಮಸ್ಥರು ಅಡ್ಡಿಪಡಿಸುತ್ತಿರುವುದರಿಂದ ಫೆನ್ಸಿಂಗ್ ಕಾರ್ಯಕ್ಕೆ ಹಿನ್ನಡೆಯಾಗಿದೆ. ತಾಲೂಕಿನ‌ ಗಡಿಭಾಗ ದೋಣಿಮಡಗು ಗ್ರಾಮ ಪಂಃಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಅವುಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಸೋಲಾರ್ ಫೆನ್ಸಿಂಗ್ ಅಳವಡಿಕೆ ಮಾಡಿದೆ. ಆದರೆ ತಳೂರು ಮತ್ತು ಮಲ್ಲೇಶನಪಾಳ್ಯಕ್ಕೆ ಹೊಂದಿಕೊಂಡಂತೆ ಸುಮಾರು ಮೂರು ಕಿ.ಮೀ ಸೋಲಾರ್ ಫೆನ್ಸಿಂಗ್ ಕಾರ್ಯ ಬಾಕಿ ಉಳಿದಿದೆ.

ಅನೆಗಳು ಬರುವ ಮಾರ್ಗ

ಈ ಮಾರ್ಗದಲ್ಲಿ ತಮಿಳುನಾಡು ಅರಣ್ಯ ಪ್ರದೇಶದಿಂದ ಬರುವಂತಹ ಕಾಡಾನೆಗಳು ರೈತರ ಬೆಳೆಗಳನ್ನು ನಾಶಪಡಿಸುವುದರ ಜೊತೆಗೆ ರೈತರನ್ನು ಸಹ ಬಲಿ ತೆಗೆದುಕೊಳ್ಳುತ್ತಿದೆ. ಸಾವುನೋವುಗಳನ್ನು ತಪ್ಪಿಸಲು ಮತ್ತು ಬೆಳೆ ಹಾನಿಯನ್ನು‌ ನಿಯಂತ್ರಿಸುವ ಸಲುವಾಗಿ ಬಾಕಿ‌ ಇರುವಂತಹ ಸ್ಥಳದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸೋಲಾರ್ ಫೆನ್ಸಿಂಗ್ ಅಳವಡಿಸಲು ಮುಂದಾಗಿದ್ದಾರೆ.

ಒತ್ತುವರಿ ತೆರವು ಅನುಮಾನ

ಆದರೆ ಮಲ್ಲೇಶನಪಾಳ್ಯದ ಬಳಿ ಕೆಲವು ಗ್ರಾಮಸ್ಥರು ಅರಣ್ಯ ಪ್ರದೇಶಕ್ಕೆ ಸೇರಿದ ಭೂಮಿಯನ್ನು‌ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪವೂ ಇದೆ. ಆದ್ದರಿಂದ ಒತ್ತುವರಿ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದೆ ಎಂಬ ಅನುಮಾನದಿಂದ ಗ್ರಾಮಸ್ಥರು ಸೋಲಾರ್ ಫೆನ್ಸಿಂಗ್ ಅಳವಡಿಕೆ ಕಾರ್ಯಕ್ಕೆ ಬಂದಾಗ ಅಡ್ಡಿಪಡಿಸಲು ಮುಂದಾಗಿದ್ದಾರೆ. ಕಾಡಾನೆಗಳನ್ನು ನಿಯಂತ್ರಿಸಲು ಸೋಲಾರ್ ಫೆನ್ಸಿಂಗ್ ಅಳವಡಿಕೆ ಕಡ್ಡಾಯವಾಗಿ ಬೇಕಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರಿಗೆ ಎಷ್ಟೇ ಮನವರಿಕೆ ಮಾಡಿದರೂ ಫೆನ್ಸಿಂಗ್ ಅಳವಡಿಕೆ ಕಾರ್ಯಕ್ಕೆ ಅಡ್ಡಿಪಡಿಸುತ್ತಲೇ ಇದ್ದಾರೆ. ಕಾಡಂಚಿನಲ್ಲಿ ಸೋಲಾರ್ ಫೆನ್ಸಿಂಗ್ ಕಾರ್ಯ ಪೂರ್ಣಗೊಳ್ಳದೇ ಹೋದರೆ ಕಾಡಾನೆಗಳು ಕಾಡಿನಿಂದ ನಾಡಿಗೆ ಬಂದು ರೈತರ ಬೆಳೆಗಳನ್ನು‌ ನಾಶಮಾಡುವುದು ಮುಂದುವರೆಯಲಿದೆ.

ಸಹಕಾರ ಕೋರಿದ ಅಧಿಕಾರಿಗಳು

ಇದರಿಂದಾಗಿ ಅರಣ್ಯ ಇಲಾಖೆಗೂ ಮತ್ತು ರೈತರಿಗೂ ಸಹ ಲಕ್ಷಾಂತರ ರೂ ನಷ್ಟ ಉಂಟಾಗಲಿದೆ. ಆದ ಕಾರಣ‌ ಸೋಲಾರ್ ಫೆನ್ಸಿಂಗ್ ಕಾರ್ಯಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಅಧಿಕಾರಿಗಳು ವಲಯ ಅರಣ್ಯಾಧಿಕಾರಿ ಶ್ರೀಲಕ್ಷ್ಮೀ ಮನವಿ ಮಾಡಿದ್ದಾರೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ