ಕನ್ನಡಪ್ರಭ ವಾರ್ತೆ ಸಿರಿಗೆರೆ
ಸಿರಿಗೆರೆ ಸಮೀಪದ ಗೌರಮ್ಮನಳ್ಳಿ ಗ್ರಾಮದಲ್ಲಿ 1 ಕೋಟಿ ರು. ವೆಚ್ಚದಲ್ಲಿ ಗೋಕಟ್ಟೆ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಭೂಮಿಪೂಜೆ ಮಾಡಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ಈ ಹಿಂದೆ ಗ್ರಾಮದ ಮುಖಂಡರ ಬೇಡಿಕೆಯಂತೆ ಸೂಳೆಕೆರೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಕುಡಿಯುವ ನೀರು ಒದಗಿಸಲಾಗಿದೆ. ವಾಣಿವಿಲಾಸ ಸಾಗರದಿಂದ ಬರುವ ಶುದ್ಧ ನೀರನ್ನು ಗ್ರಾಮದ ಎಲ್ಲಾ ಮನೆಗಳಿಗೂ ನೀಡುವ ಯೋಜನೆ ಇದೆ. ಅದನ್ನು ಮಾಡಲಾಗುವುದು ಎಂದರು.೩೨ ವರ್ಷಗಳ ನನ್ನ ರಾಜಕೀಯ ಬದುಕಿನಲ್ಲಿ ಯಾವ ಸಮುದಾಯಗಳನ್ನೂ ಭಿನ್ನವಾಗಿ ನೋಡಿಲ್ಲ. ನನಗೆ ಎಲ್ಲರೂ ಒಂದೇ, ಒಂದು ಕುಟುಂಬದ ಸದಸ್ಯರಂತೆಯೇ ಬದುಕಿ ಬಾಳಬೇಕು ಎನ್ನುವುದು ನನ್ನ ಅಪೇಕ್ಷೆ. ಹಾಗಾಗಿ ಕ್ಷೇತ್ರದ ಎಲ್ಲಾ ಹಳ್ಳಿಗಳ ಅಭಿವೃದ್ಧಿಯೂ ಚಾಲನೆ ನೀಡಿರುವೆ ಎಂದರು.
ಗೌರಮ್ಮನಹಳ್ಳಿಗೆ ಶಾಲೆ, ಅಂಗನವಾಡಿಯನ್ನು ಮಂಜೂರು ಮಾಡಿಸಿದ್ದೇನೆ. ಓವರ್‍ಹೆಡ್ ಟ್ಯಾಂಕ್ ಕಟ್ಟಿಸಲಾಗಿದೆ. ತಾಲ್ಲೂಕಿನ ಬಹುತೇಕ ಕೆರೆಗಳನ್ನು ತುಂಬಿಸುವ ಕೆಲಸ ನಡೆಯುತ್ತಿದೆ. ಅಜ್ಜಪ್ಪನಹಳ್ಳಿ ಬಳಿ 250 ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ಕಟ್ಟಿಸುತ್ತಿದ್ದೇನೆ ಎಂದರು.
ಭರಮಸಾಗರ ಬಿಜೆಪಿ.ಮಂಡಲ ಅಧ್ಯಕ್ಷ ಎನ್.ಟಿ.ಬಸವರಾಜ್, ಪರ್ವಿಜ್‍ಬೇಗ್, ಸೈಯದ್, ಸಮೀವುಲ್ಲಾಖಾನ್, ಮುಸ್ತಾಕ್‍ಬೇಗ್, ಸಲ್ಲಾಂಬೇಗ್, ಇಬ್ರಾಹಿಂಬೇಗ್, ಹಿರೆಬೆನ್ನೂರು ರಾಜಣ್ಣ, ಕೊಟ್ರೇಶ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು, ಗ್ರಾಮದ ಮುಖಂಡರು ಹಾಜರಿದ್ದರು.
ಸಾಮಾನ್ಯವಾಗಿ ಬಿಜೆಪಿ ಶಾಸಕರೆಂದರೆ ಮೂಗು ಮುರಿಯುವ ಮುಸ್ಲಿಂ ಬಾಂಧವರು, ಇಂದು ಗೌರಮ್ಮಹಳ್ಳಿ ಕಾರ್ಯಕ್ರಮದಲ್ಲಿ ಶಾಸಕರ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಹೊಗಳಿದರು. ವೇದಿಕೆಯಲ್ಲಿ ಮಾತನಾಡಿದ ಇಸಾಕ್‌ಬೇಗ್ ಮತ್ತು ಇಬ್ರಾಹಿಂ ಬೇಗ್ ಶಾಸಕರ ಗುಣಗಾನ ಮಾಡಿದರು.