ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ರಕ್ಷಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. 108 ಆ್ಯಂಬುಲೆನ್ಸ್ ಸರ್ವೀಸ್ ಸಮರ್ಪಕವಾಗಿ ಸೇವೆ ನೀಡುತ್ತಿಲ್ಲ ಎಂಬ ದೂರುಗಳು ಹೆಚ್ಚಾಗಿರುವುದರಿಂದ ಆಸ್ಪತ್ರೆಗೆ ಆ್ಯಂಬುಲೆನ್ಸ್ ಸೇವೆ ಕಲ್ಪಿಸುವಂತೆ ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಕರೆ ಮಾಡಿ ಮಾತನಾಡಿದರು.
ಆರೋಗ್ಯ ಎಲ್ಲರಿಗೂ ಮಹತ್ವದ್ದು. ಸಾರ್ವಜನಿಕರಿಂದ ತಾಲೂಕು ಕಚೇರಿ ಹಾಗೂ ಆಸ್ಪತ್ರೆಯನ್ನು ಸರಿಮಾಡಿ ಎಂದು ದೂರುಗಳು ಬರುತ್ತಿವೆ. ಇಲಾಖೆ ಸಿಬ್ಬಂದಿಯನ್ನು ನಾನು ಬಹಳ ಗೌರವದಿಂದ ಕಾಣುತ್ತೇನೆ. ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.ಆಸ್ಪತ್ರೆ ಆವರಣದಲ್ಲಿ ವಾಹನ ನಿಲುಗಡೆ ಸಮರ್ಪಕವಾಗಿಲ್ಲ. ಔಷಧಿಗಳನ್ನು ಹೊರಗೆ ಬರೆದು ಕೊಡಬೇಡಿ. ಸರ್ಕಾರವು ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹಣ ನೀಡುತ್ತಿದೆ. ನಾನು ಸಹ ಶಾಸಕರ ಅನುದಾನ ನೀಡಿದ್ದೇನೆ. ಸರ್ಕಾರದ ಸವಲತ್ತುಗಳನ್ನು ಉಪಯೋಗಿಸಿಕೊಂಡು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕು. ಆಸ್ಪತ್ರೆಯಲ್ಲಿನ ಎಲ್ಲಾ ಖರೀದಿ ಪ್ರಕ್ರಿಯೆ ಸರ್ಕಾರದ ನಿಯಮಾವಳಿಯಂತೆ ನಡೆಯಬೇಕು ಎಂದರು.
ಡಾ.ಶಿವಕುಮಾರ್ ವಿರುದ್ಧ ದೂರು: ಡಾ.ಶಿವಕುಮಾರ್ ಆಡಳಿತ ವೈದ್ಯಾಧಿಕಾರಿಯಾಗಿದ್ದ ವೇಳೆ ಸಿಸಿ ಕ್ಯಾಮೆರಾ, ಹೊರ ಚೀಟಿ ಬಿಲ್ ಹಣ ಎರಡುವರೆ ಲಕ್ಷ ರು. ಕಾಮಗಾರಿಗೆ ಬಿಲ್ ಮಾಡಿಕೊಡದೇ ಬೇರೆ ಪೂರೈಕೆದಾರರಿಗೆ ನೀಡಿ ವಂಚಿಸಿ, ಹಣ ದುರುಪಯೋಗಿಸಿಕೊಂಡಿರುವುದಾಗಿ ಗುತ್ತಿಗೆದಾರರಾದ ಪ್ರೀತಂ ಹಾಗೂ ವೀರಪ್ಪ ಶಾಸಕರಿಗೆ ದೂರು ನೀಡಿದರು.
ಈ ವೇಳೆ ಶಾಸಕ ಮಂಜು ಆರೋಗ್ಯ ಇಲಾಖೆ ಜಂಟಿ ನಿರ್ದೇಶಕ ಪ್ರಸಾದ್‌ಗೆ ಮೊಬೈಲ್ ಕರೆ ಮಾಡಿ ಡಾ.ಶಿವಕುಮಾರ್ ಕರ್ತವ್ಯ ಲೋಪದ ಬಗ್ಗೆ ಹಾಗೂ ಅವರ ಅಡಳಿತದ ಅವಧಿಯಲ್ಲಿ ಆಗಿರುವ ಹಣಕಾಸಿನ ನಿರ್ವಹಣೆ ಬಗ್ಗೆ ಸಾಕಷ್ಟು ದೂರುಗಳಿವೆ. ಅವರ ಬಗ್ಗೆ ಅವಧಿಯಲ್ಲಿನ ಎಲ್ಲಾ ವ್ಯವಹಾರವನ್ನು ತನಿಖೆ ಮಾಡಿ ನನಗೆ ವರದಿ ನೀಡಬೇಕು ಎಂದು ಸೂಚಿಸಿದರು.