ತುಂಗಭದ್ರಾ ನದಿಗೆ ಮಾಜಿ ಶಾಸಕ ಸೋಮಲಿಂಗಪ್ಪ ಬಾಗಿನ ಅರ್ಪಣೆ

KannadaprabhaNewsNetwork |  
Published : Jul 11, 2025, 01:47 AM IST
ಸಿರುಗುಪ್ಪ ತಾಲೂಕಿನ ಕೆಂಚನಗುಡ್ಡ ಗ್ರಾಮದ ಬಳಿಯ ತುಂಗಭದ್ರಾ ನದಿಗೆ ಬಾಗಿನ ಸಮರ್ಪಿಸುವ ಮುನ್ನ ಜರುಗಿದ ಪೂಜಾ ಕೈಂಕರ್ಯದಲ್ಲಿ ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರು ಪಾಲ್ಗೊಂಡಿದ್ದರು.  | Kannada Prabha

ಸಾರಾಂಶ

ಸಿರುಗುಪ್ಪ ತಾಲೂಕಿನ ಕೆಂಚನಗುಡ್ಡ ಗ್ರಾಮದ ಬಳಿಯ ತುಂಗಭದ್ರಾ ನದಿಗೆ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಅವರು ಬಾಗಿನ ಅರ್ಪಿಸಿದರು. ಈ ಬಾರಿ ರೈತರ ಬೆಳೆಗಳು ಸಮೃದ್ಧಿಯಾಗಿ ಬರಲಿ ಎಂದು ಹಾರೈಸಿದರು.

ಸಿರುಗುಪ್ಪ: ಈ ಬಾರಿ ರೈತರ ಬೆಳೆಗಳು ಸಮೃದ್ಧಿಯಾಗಿ ಬರಲಿ ಎಂದು ಹಾರೈಸಿ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಅವರು ತುಂಗಭದ್ರಾ ನದಿಗೆ ಬಾಗಿನ ಅರ್ಪಿಸಿದರು.

ತಾಲೂಕಿನ ಕೆಂಚನಗುಡ್ಡ ಗ್ರಾಮದ ಬಳಿಯ ತುಂಗಭದ್ರಾ ನದಿಗೆ ಮೊರದಲ್ಲಿ ಅಕ್ಕಿ, ಬೆಲ್ಲ, ತೆಂಗಿನಕಾಯಿ, ಹೂವು, ಹಣ್ಣುಗಳನ್ನು ಇಟ್ಟು ನದಿಗೆ ಬಾಗಿನ ಸಮರ್ಪಿಸಿದ ಬಳಿಕ ಮಾತನಾಡಿದ ಸೋಮಲಿಂಗಪ್ಪ ಅವರು, ತುಂಗಭದ್ರಾ ಜಲಾಶಯವು ಬಳ್ಳಾರಿ ಜಿಲ್ಲೆಯ ಜನರ ಜೀವನಾಡಿಯಾಗಿದೆ. ಜಲಾಶಯ ಭರ್ತಿಯಿಂದ ಈ ಬಾರಿ ಉತ್ತಮ ಬೆಳೆ ಬರುವ ನಿರೀಕ್ಷೆ ಹೊಂದಲಾಗಿದೆ. ಈ ಬಾರಿ ಯಾವುದೇ ರೋಗ-ರುಜಿನಗಳು ಬರದೆ ಬೆಳೆ ಸಮೃದ್ಧಿಯಾಗಲಿ ಬರಲಿ. ರೈತರ ಬದುಕು ಹಸನಾಗಲಿ ಎಂದು ಹಾರೈಸಿ ಬಾಗಿನ ಅರ್ಪಿಸಲಾಯಿತು ಎಂದರು.

ಬಾಗಿನ ಅರ್ಪಿಸುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ. ನದಿಯನ್ನು ಪೂಜಿಸುವುದು ಭಾರತೀಯ ಸಂಸ್ಕೃತಿಯಲ್ಲಿ ಒಂದು ಪ್ರಮುಖ ಆಚರಣೆಯಾಗಿದೆ. ರೈತರ ಬೆಳೆಗಳು ಸಮೃದ್ಧಿಯಾದರೆ ಜನಜೀವನವೂ ಸಮೃದ್ಧಿಯಾಗಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಂ.ಎಸ್. ಸಿದ್ದಪ್ಪ, ನಗರಸಭೆಯ ಸದಸ್ಯರಾದ ಮೋಹನ್ ರೆಡ್ಡಿ, ಮೇಕೆಲ ವೀರೇಶ್, ನಟರಾಜ್, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಶೇಖರಗೌಡ, ಮುಖಂಡರಾದ ಇಬ್ರಾಹಿಂಪುರ ವೀರನಗೌಡ, ವೀರಭದ್ರಗೌಡ, ಚಿರಂಜೀವಿ ರೆಡ್ಡಿ, ನಾಗೇಶಪ್ಪ, ಮಹದೇವ ಹೊನ್ನಪ್ಪ, ರಾಮರಾಜ, ಗಂಗಣ್ಣ, ರವಿಗೌಡ, ಮಂಜುನಾಥ, ಶರಣಬಸನಗೌಡ, ಸಿರಿಗೆರೆ ವಿರೂಪಾಕ್ಷಪ್ಪ, ಎಚ್. ಶೇಖಪ್ಪ, ಶಂಕ್ರಪ್ಪ, ಬೆಳಗಲ್ ಶಿವಪ್ಪ, ರಾರಾವಿ ಮಾರೇಶ, ಸೋಮಯ್ಯ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು