ಆಂಜನೇಯ ಮೂರ್ತಿಗೆ ಪ್ರಭಾವಳಿ ಅರ್ಪಣೆ

KannadaprabhaNewsNetwork |  
Published : Nov 23, 2025, 02:45 AM IST
ಫೋಟೊ ೨೨ಕೆಆರ್‌ಟಿ-೧: ಕಾರಟಗಿ ಪಟ್ಟಣದ ಶರಣ ಬಸವೇಶ್ವರ ಕಲ್ಯಾಣ ಮಂಟಪದ ಆವರಣದಲ್ಲಿನ ಶ್ರೀ ಆಂಜನೇಯ ದೇವಸ್ಥಾನಕ್ಕೆ ಸ್ಥಳಿಯ ಏಕದಂತ ಯುವಸೇನೆ ಹಿತ್ತಾಳೆಯ ಪ್ರಭಾವಳಿಯ ಮೆರವಣಿಗೆ ನಡೆಸಿದರು. | Kannada Prabha

ಸಾರಾಂಶ

ಶ್ರೀ ಶರಣ ಬಸವೇಶ್ವರ, ಶ್ರೀ ಆಂಜನೇಯ ಸಕಲರಿಗೂ ಸದ್ಬುದ್ಧಿ, ಸಮೃದ್ಧಿ ದಯಪಾಲಿಸಲಿ

ಕಾರಟಗಿ: ಪಟ್ಟಣದ ಆರಾಧ್ಯದೈವ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದ ಆಂಜನೇಯ ಸ್ವಾಮಿ ಮೂರ್ತಿಗೆ ಹಿತ್ತಾಳೆ ಪ್ರಭಾವಳಿಯನ್ನು ಇಲ್ಲಿನ ಏಕದಂತ ಯುವಸೇನೆಯಿಂದ ಶನಿವಾರ ಅರ್ಪಿಸಲಾಯಿತು.

ಏಕದಂತ ಯುವ ಸೇನೆ ಸದಸ್ಯರು ಸೇರಿ ಹಿತ್ತಾಳೆ ಪ್ರಭಾವಳಿಯನ್ನು ದೇವಸ್ಥಾನಕ್ಕೆ ನೀಡಿದರು. ನೆರೆಯ ಆಂಧ್ರಪ್ರದೇಶದ ಆದೋನಿಯಲ್ಲಿ ಈ ಪ್ರಭಾವಳಿ ನಿರ್ಮಿಸಲಾಗಿದೆ. ಶನಿವಾರ ಪಟ್ಟಣಕ್ಕೆ ತಂದ ಪ್ರಭಾವಳಿಗೆ ಪಟ್ಟಣದ ನವಲಿ ರಸ್ತೆಯ ಕರಿಯಪ್ಪ ತಾತನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ವಿವಿಧ ವಾದ್ಯ ಮೇಳದೊಂದಿಗೆ ಪ್ರಭಾವಳಿಯ ಮೆರವಣಿಗೆ ನಡೆಸುವ ಮೂಲಕ ದೇವಸ್ಥಾನಕ್ಕೆ ತರಲಾಯಿತು.

ಆನಂತರ ದೇವಸ್ಥಾನದ ಅರ್ಚಕ ಮುತ್ತಯ್ಯ ಸ್ವಾಮಿ ಹಿರೇಮಠ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರಭಾವಳಿ ಪೂಜೆ ಸಲ್ಲಿಸಿ, ದೇವಸ್ಥಾನದ ಅರ್ಚಕರಿಗೆ ಸಮರ್ಪಿಸಿದರು.

ಈ ವೇಳೆ ಏಕದಂತ ಯುವಸೇನೆಯ ಪ್ರಮುಖ ಕಿರಣಕುಮಾರ ಮಾತನಾಡಿ, ಪ್ರತಿವರ್ಷ ಶ್ರೀ ಶರಣ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ವಿವಿಧ ಸೇವೆ ನಡೆಸುತ್ತಿದ್ದು, ಈ ಬಾರಿ ಶರಣ ಬಸವೇಶ್ವರ ದೇವಸ್ಥಾನದ ಶ್ರೀ ಆಂಜನೇಯ ಮೂರ್ತಿಗೆ ಹಿತ್ತಾಳೆಯ ಪ್ರಭಾವಳಿ ಸೇವೆ ಸಲ್ಲಿಸಿದ್ದೇವೆ. ಶ್ರೀ ಶರಣ ಬಸವೇಶ್ವರ, ಶ್ರೀ ಆಂಜನೇಯ ಸಕಲರಿಗೂ ಸದ್ಬುದ್ಧಿ, ಸಮೃದ್ಧಿ ದಯಪಾಲಿಸಲಿ ಎಂದರು.

ಯುವಸೇನೆಯ ಬಸವರಾಜ ಚಿಂತಾ, ಶ್ರೀಶೈಲ ಚಿನಿವಾಲ್, ದೇವರಾಜ ಅಂಗಡಿ, ಪ್ರಕಾಶ ಸಿದ್ರಾಂಪುರ, ಮಂಜುನಾಥ ಶೆಟ್ಟರ್, ಮಾರುತಿ ಉಪ್ಪಾರ, ಮಂಜುನಾಥ ಕುಲಕರ್ಣಿ, ಹಾಲೇಶ, ಶಿವಕುಮಾರ ಟಿ.ಎಂ., ಶಿವಕುಮಾರ, ಪ್ರಸನ್ನ, ಸುರೇಶ ದಿದ್ದಗಿ, ಶರಣ ಬಸವ ಉದ್ಯಾಳ, ದೊಡ್ಡಬಸವ ರಾಜಗುರು, ಕೀರ್ತಿರಾಜ ಸಜ್ಜನ, ಸಂಗನಗೌಡ ಪಾಟೀಲ್, ಶಿವಕುಮಾರ ಮೇಟಿ, ನಾಗರಾಜ ಇಚನಾಳ, ರಮೆಶ ಹತ್ತಿಕಾಳ, ನಂದೀಶ, ನೇಮಿರಾಜ್, ರವಿ ಕೆ., ಯೋಗೇಶ ಬಾಲ್ಕಿ, ಶರಣಬಸವ ಸೋಮನಾಳ, ಮಂಜುನಾಥ ಸಾವಜಿ, ರವಿ ಸಾವಜಿ, ಮಹಂತೇಶ ಶೀಲವಂತರ ಇದ್ದರು.

PREV

Recommended Stories

ಪರೀಕ್ಷೆ ಮುಗಿದ ಬೆನ್ನಲ್ಲೆ ಫಲಿತಾಂಶ ಪ್ರಕಟ: ದಾಖಲೆ ಬರೆದ ಜಾನಪದ ವಿಶ್ವವಿದ್ಯಾಲಯ
ಕ್ರೀಡೆಯಲ್ಲಿ ವಿಫುಲ ಅವಕಾಶ