ಕ್ರೀಡೆಯಲ್ಲಿ ವಿಫುಲ ಅವಕಾಶ

| Published : Nov 23 2025, 02:45 AM IST

ಸಾರಾಂಶ

ಕ್ರಿಕೆಟ್ ದೇವರು ಎಂದೆ ಹೆಸರು ಮಾಡಿದ ಸಚಿನ್ ತಂಡೋಲ್ಕರ್ ಜೀವನ ನೋಡಿದರೇ ಅವರು ಎಷ್ಟು ಎತ್ತರಕ್ಕೆ ಹೋಗಿದ್ದಾರೆ

ಕೊಪ್ಪಳ: ಕ್ರೀಡೆಗೆ ಈ ಹಿಂದೆ ಅಷ್ಟು ಅವಕಾಶ ಇರಲಿಲ್ಲ. ಈಗ ವಿಫುಲ ಅವಕಾಶ ಇದ್ದು, ಇದರಲ್ಲಿಯೂ ಸಾಕಷ್ಟು ಸಾಧನೆ ಮಾಡಬಹುದಾಗಿದೆ ಎಂದು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ್ ಮೈನಳ್ಳಿ ಹೇಳಿದ್ದಾರೆ.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾಗ್ಯನಗರ ನ್ಯಾಷನಲ್ ಆಂಗ್ಲಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಕ್ರಿಕೆಟ್ ದೇವರು ಎಂದೆ ಹೆಸರು ಮಾಡಿದ ಸಚಿನ್ ತಂಡೋಲ್ಕರ್ ಜೀವನ ನೋಡಿದರೇ ಅವರು ಎಷ್ಟು ಎತ್ತರಕ್ಕೆ ಹೋಗಿದ್ದಾರೆ. ಹಾಗೇ ಈ ವರ್ಷ ಮಹಿಳಾ ವಿಶ್ವಕಪ್ ಗೆಲ್ಲುವ ಮೂಲಕ ಮಹಿಳೆಯರು ವಿಶ್ವಮಟ್ಟದ ಸಾಧನೆ ಮಾಡಿದ್ದಾರೆ. ಹೀಗೆ ಕ್ರೀಡೆಯಲ್ಲಿ ಸಾಕಷ್ಟು ಅವಕಾಶ ಇದ್ದು, ಅವುಗಳನ್ನು ಸಾಧಿಸಿ ತೋರಿಸುವ ಛಲ ಬೇಕಾಗಿದೆ ಎಂದರು.

ನಮ್ಮ ಕಾಲದಲ್ಲಿ ಶಿಕ್ಷಣಕ್ಕೆ ಅಷ್ಟು ಒತ್ತು ನೀಡುತ್ತಿರಲಿಲ್ಲ. ಶಾಲೆಗೆ ಕಳುಹಿಸಿದರೇ ಪುಣ್ಯ ಎನ್ನುವ ಕಾಲ ಇತ್ತು. ಆದರೆ, ಈಗ ಕಾಲ ಬದಲಾಗಿದೆ, ಮಕ್ಕಳಿಗೆ ಪಾಲಕರು ಹೆಚ್ಚು ಆದ್ಯತೆ ನೀಡಿ ಉತ್ತಮ ಶಿಕ್ಷಣ ಕೊಡಿಸುತ್ತಾರೆ. ಅದನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ಸಾಧನೆ ಮಾಡಬೇಕು ಎಂದರು.

ಪತ್ರಕರ್ತ ಸೋಮರಡ್ಡಿ ಅಳವಂಡಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಎತ್ತರಕ್ಕೆ ಬೆಳೆಯಲು ಈಗ ಶ್ರದ್ಧೆಯಿಂದ ಅಧ್ಯಯನ ಮಾಡಬೇಕು. ಗುರಿ ತಲುಪಲು ವಿದ್ಯಾರ್ಥಿಗಳು ಶ್ರಮ ವಹಿಸಬೇಕು ಎಂದರು.

ವಿದ್ಯಾರ್ಥಿಗಳಿಗೆ ಸೂಕ್ತ ವಾತಾವರಣ ಕಲ್ಪಿಸಿದರೇ ಖಂಡಿತವಾಗಿಯೂ ಅವರು ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಹೀಗಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಗುರಿಮುಟ್ಟುವ ಭಾವನೆ ಬೆಳಸಬೇಕು. ಇರುವ ದಾರಿ ಹೇಳಿಕೊಡಬೇಕು. ಜಗತ್ತು ಪರಿಚಯಿಸಬೇಕು. ಯಾವುದರಲ್ಲಿ ಆಸಕ್ತಿ ಅದರಲ್ಲಿ ವಿದ್ಯಾರ್ಥಿಗಳು ಮುಂದೆ ಸಾಗುತ್ತಾರೆ. ಹೀಗಾಗಿ ಪ್ರತಿಯೊಂದು ಮಗು ಸಹ ಪ್ರತಿಭೆ ಹೊಂದಿರುತ್ತದೆ. ಆದರೆ ಆ ಮಗುವಿಗೆ ದಾರಿ ತೋರಿಸುವ ಹೊಣೆ ಹೊತ್ತಿರುವ ಶಿಕ್ಷಕರ ಹೇಗೆ ದಾರಿ ತೋರಿಸುತ್ತಾರೆ ಹಾಗೆ ಸಾಗುತ್ತಾರೆ ಎಂದರು.

ನ್ಯಾಷನಲ್ ಸ್ಕೂಲ್ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಪ್ರಹ್ಲಾದ ಅಗಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆ ನಡೆದು ಬಂದ ದಾರಿಯ ಕುರಿತು ವಿವರಣೆ ಮಾಡಿದರು, ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳು ಅತ್ಯದ್ಭುತ ಸಾಧನೆ ಮಾಡುತ್ತಾ ಬಂದಿದ್ದಾರೆ. ಪಠ್ಯದಲ್ಲಿ ಮತ್ತು ಪಠ್ಯೇತರ ಚಟುವಟಿಕೆಯಲ್ಲಿಯೂ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.

ಡಾ.ಕೊಟ್ರೇಶ್ ಶೇಡ್ಮಿ, ಬಿಸರಳ್ಳಿ ಗ್ರಾಪಂ ಅಧ್ಯಕ್ಷ ಮರಿಶಾಂತವೀರಸ್ವಾಮಿ ಚಕ್ಕಡಿ, ಶಾಲಾ ಆಡಳಿತಾಧಿಕಾರಿ ಗುರುರಾಜ್ ಅಗಳಿ, ಮುಖ್ಯೋಪಾಧ್ಯಯ ಕಲ್ಪನಾ ವಿಜಯ್ ಕುಮಾರ್ ಇದ್ದರು.

ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಿದರು.