ದ್ವಾರಸಮುದ್ರ ಕೆರೆಗೆ ಸೋಮವಾರ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯ ಮೂಲಕ ಈ ಭಾಗದ ರೈತರಿಗೆ ನೀಡಿದ ದೊಡ್ಡ ಕೊಡುಗೆಯಾಗಿದೆ. ಸತತ ಪ್ರಯತ್ನದಿಂದಾಗಿ ದ್ವಾರಸಮುದ್ರ ಕೆರೆ ತುಂಬಿಸುವಂತಹ ಪ್ರಾಮಾಣಿಕ ಕಾರ್ಯವನ್ನ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡಿದೆ. ಕೆರೆಯ ಪ್ರದೇಶವನ್ನು ಸ್ವಚ್ಛವಾಗಿರಿಸಿ ದ್ವಾರಸಮುದ್ರ ಕೆರೆ ಕೋಡಿ ಹರಿಯುವ ಸ್ಥಳ ಕೆರೆ ಏರಿ ಪ್ರದೇಶ ಎಲ್ಲವನ್ನೂ ಅಚ್ಚುಕಟ್ಟಾಗಿ ಸ್ವಚ್ಛವಾಗಿ ಇಟ್ಟುಕೊಳ್ಳುವುದರಿಂದ ಕೆರೆಯ ಸೌಂದರ್ಯ ಹೆಚ್ಚುತ್ತದೆ. ಜೊತೆಗೆ ವಾಯು ವಿಹಾರಕ್ಕೆ ತೆರಳುವ ಸ್ಥಳೀಯರಿಗೆ ವೃದ್ಧರಿಗೂ ಒಳ್ಳೆಯ ವಾತಾವರಣ ಕಲ್ಪಿಸಿ ಕೊಟ್ಟಂತಾಗುತ್ತದೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಹಳೇಬೀಡು
ಎತ್ತಿನಹೊಳೆ ಯೋಜನೆ ಮೂಲಕ ದ್ವಾರಸಮುದ್ರ ಕೆರೆಗೆ ನೀರು ಹರಿಸಿ ಎರಡನೆ ಬಾರಿಗೆ ಈ ಕೆರೆ ಕೋಡಿ ಹರಿಯಲು ಕಾಂಗ್ರೆಸ್ ಸರ್ಕಾರ ಕಾರಣವಾಗಿದೆ. ಈ ಮೂಲಕ ಭೂಮಿತಾಯಿಯನ್ನೇ ನಂಬಿ ಬದುಕುತ್ತಿರುವ ರೈತರ ಬದುಕು ಹಸನಾಗಲಿ ಎಂದು ಮಾಜಿ ಸಚಿವ ಬಿ ಶಿವರಾಂ ರವರು ತಿಳಿಸಿದ್ದಾರೆ. ದ್ವಾರಸಮುದ್ರ ಕೆರೆಗೆ ಸೋಮವಾರ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯ ಮೂಲಕ ಈ ಭಾಗದ ರೈತರಿಗೆ ನೀಡಿದ ದೊಡ್ಡ ಕೊಡುಗೆಯಾಗಿದೆ. ಸತತ ಪ್ರಯತ್ನದಿಂದಾಗಿ ದ್ವಾರಸಮುದ್ರ ಕೆರೆ ತುಂಬಿಸುವಂತಹ ಪ್ರಾಮಾಣಿಕ ಕಾರ್ಯವನ್ನ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡಿದೆ. ಕೆರೆಯ ಪ್ರದೇಶವನ್ನು ಸ್ವಚ್ಛವಾಗಿರಿಸಿ ದ್ವಾರಸಮುದ್ರ ಕೆರೆ ಕೋಡಿ ಹರಿಯುವ ಸ್ಥಳ ಕೆರೆ ಏರಿ ಪ್ರದೇಶ ಎಲ್ಲವನ್ನೂ ಅಚ್ಚುಕಟ್ಟಾಗಿ ಸ್ವಚ್ಛವಾಗಿ ಇಟ್ಟುಕೊಳ್ಳುವುದರಿಂದ ಕೆರೆಯ ಸೌಂದರ್ಯ ಹೆಚ್ಚುತ್ತದೆ. ಜೊತೆಗೆ ವಾಯು ವಿಹಾರಕ್ಕೆ ತೆರಳುವ ಸ್ಥಳೀಯರಿಗೆ ವೃದ್ಧರಿಗೂ ಒಳ್ಳೆಯ ವಾತಾವರಣ ಕಲ್ಪಿಸಿ ಕೊಟ್ಟಂತಾಗುತ್ತದೆ ಎಂದು ತಿಳಿಸಿದರು. ಹಾಸನ ಜಿಲ್ಲಾ ಕುರುಬರ ಸಂಘದ ನಿರ್ದೇಶಕ ಕಾಂಗ್ರೆಸ್ ಮುಖಂಡ ಬಿ. ಎಲ್ ಸಂತೋಷ್ ಮಾತನಾಡಿ, ಅಧಿಕಾರ ಇರಲಿ ಇಲ್ಲದಿರಲಿ ಜನಸಾಮಾನ್ಯರ ಜೊತೆಗೆ ಕ್ಷೇತ್ರದ ಉದ್ದಗಲಕ್ಕೂ ಅವರ ಸಮಸ್ಯೆಗಳನ್ನು ಆಲಿಸಿ ರೈತರ ಕಷ್ಟ ಸುಖಗಳಿಗೆ ಸ್ಪಂದಿಸುವ ಮೂಲಕ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಸಚಿವರಾದ ಬಿ ಶಿವರಾಮ್ ಮಹತ್ವಕಾಂಕ್ಷೆಯ ಎತ್ತಿನಹೊಳೆ ಯೋಜನೆ ಮೂಲಕ ದ್ವಾರಸಮುದ್ರ ಕೆರೆಗೆ ನೀರು ತರಲು ಕಾರಣೀಭೂತರಾಗಿದ್ದಾರೆ. ಅವರಿಗೆ ರೈತರ ಜನಸಾಮಾನ್ಯರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದರು. ಜೀಪ್ ಚಂದ್ರಶೇಖರ್ ಮಾತನಾಡುತ್ತ, ಹೊಯ್ಸಳೇಶ್ವರ ಆಶೀರ್ವಾದದಿಂದ ದ್ವಾರಸಮುದ್ರ ಕೆರೆ ಭರ್ತಿಯಾಗಿದ್ದು, ಮೊದಲ ಬಾರಿಗೆ ಮಾಜಿ ಸಚಿವ ಬಿ ಶಿವರಾಂ ರವರು ಬಾಗಿನ ಅರ್ಪಿಸಿರುವುದು ಸಂತಸ ತಂದಿದೆ. ಪ್ರತಿ ವರ್ಷವೂ ಭಗವಂತನ ದಯೆಯಿಂದ ಕೆರೆ ಭರ್ತಿಯಾಗಿ ರೈತರ ಬದುಕು ಹಸನಾಗಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಬೇಲೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ದೇಶಾಣಿ ಆನಂದ್, ಬೇಲೂರು ಯುವ ಕಾಂಗ್ರೆಸ್ ಅಧ್ಯಕ್ಷ ಶರತ್, ಪಕ್ಷದ ಮುಖಂಡರಾದ ಎಚ್.ಎಮ್.ಮಂಜಪ, ನಿಜಗುಣ, ಕೆ.ಎಮ್. ವೀರಣ್ಣ, ಬೈರೇಶ್, ಕುಮಾರ್, ಯತೀಶ್, ಜಗದೀಶ್ ಮುಂತಾದವರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.