ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಕೆ

KannadaprabhaNewsNetwork |  
Published : Jul 24, 2024, 12:16 AM IST
23ಕೆಎಂಎನ್ ಡಿ20 | Kannada Prabha

ಸಾರಾಂಶ

ಭಕ್ತಾದಿಗಳು ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ಲಕ್ಷ್ಮಿ ದೇವಿಯಲ್ಲಿ ಪ್ರಾರ್ಥಿಸಿ, ತಮ್ಮ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುವಂತೆ ಹರಕೆ ಹೊತ್ತು ತಂದಿದ್ದ ತೆಂಗಿನಕಾಯಿಯನ್ನು ಹೋಮದ ಕೊಂಡಕ್ಕೆ ಹಾಕಿ, ಬೆಲ್ಲದ ದೀಪದಾರತಿಯನ್ನು ಎತ್ತಿ, ಲಕ್ಷ್ಮೀನಾರಾಯಣ ಸ್ವಾಮಿ ಶ್ಲೋಕದ ಜೊತೆ ಶಿರಡಿ ಸಾಯಿಬಾಬಾ ದೇವರ ಭಜನೆ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹಲಗೂರು

ಡಿ.ಹಲಸಹಳ್ಳಿ ಗೇಟಿನ ಬಳಿ ಇರುವ ಶ್ರೀಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಗುರು ಪೌರ್ಣಿಮೆ ಅಂಗವಾಗಿ ಹೋಮ ಹವನ ಜೊತೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.

ದೇವಸ್ಥಾನದ ಆವರಣದಲ್ಲಿ ಲಕ್ಷ್ಮೀದೇವಿಗೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ಮಂತ್ರ ಘೋಷಗಳೊಡನೆ ಹೋಮ ಹವನ ನಡೆಸಿ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು.

ಭಕ್ತಾದಿಗಳು ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ಲಕ್ಷ್ಮಿ ದೇವಿಯಲ್ಲಿ ಪ್ರಾರ್ಥಿಸಿ, ತಮ್ಮ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುವಂತೆ ಹರಕೆ ಹೊತ್ತು ತಂದಿದ್ದ ತೆಂಗಿನಕಾಯಿಯನ್ನು ಹೋಮದ ಕೊಂಡಕ್ಕೆ ಹಾಕಿ, ಬೆಲ್ಲದ ದೀಪದಾರತಿಯನ್ನು ಎತ್ತಿ, ಲಕ್ಷ್ಮೀನಾರಾಯಣ ಸ್ವಾಮಿ ಶ್ಲೋಕದ ಜೊತೆ ಶಿರಡಿ ಸಾಯಿಬಾಬಾ ದೇವರ ಭಜನೆ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು.

ನಂತರ ಲಕ್ಷ್ಮಿದೇವರ ಮೂರ್ತಿಯನ್ನು ದೇವಸ್ಥಾನದ ಆವರಣದ ಒಳಗೆ ಮೆರವಣಿಗೆ ನಡೆಸಲಾಯಿತು. ಮಹಾ ಮಂಗಳಾರತಿ ನಂತರ ಬಂದ ಭಕ್ತಾಧಿಗಳಿಗೆ ಪ್ರಸಾದ ವಿತರಿಸಲಾಯಿತು.

ದೇವಸ್ಥಾನದ ಧರ್ಮದರ್ಶಿ ಹಾಗೂ ಸಂಸ್ಥಾಪಕ ಶಿವಕುಮಾರ್ ಮಾತನಾಡಿ, ಶಿರಡಿ ಸಾಯಿಬಾಬಾ ಭಕ್ತರ ಕೋರಿಕೆಯನ್ನು ಈಡೇರಿಸುತ್ತಾ ಅಪಾರ ಭಕ್ತಾದಿಗಳನ್ನು ಒಳಗೊಂಡಿದೆ. ಪ್ರತಿ ಅಮಾವಾಸ್ಯೆ ದಿನ ಲಕ್ಷ್ಮಿ ಪೂಜೆ ಹಾಗೂ ಹೋಮ, ಹುಣ್ಣಿಮೆ ದಿನದಂದು ಕೂಡ ಹೋಮ ಹವನಗಳನ್ನು ನಡೆಸಿ ಸತ್ಯನಾರಾಯಣ ಪೂಜೆ ಮಾಡಲಾಗುತ್ತಿದೆ. ಮುತ್ತೈದೆಯರು ಭಾಗವಹಿಸಿ ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ಪೂಜೆ ಸಲ್ಲಿಸುತ್ತಾರೆ. ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಗುತ್ತಿದೆ ಎಂದು ಹೇಳಿದರು.ಡೆಂಘೀ ಜ್ವರ ನಿಯಂತ್ರಿಸಲು ಶಿಕ್ಷಕರ ಸಹಕಾರ ಅಗತ್ಯ: ಡಾ.ಅಜಿತ್

ಕೆ.ಆರ್.ಪೇಟೆ:ಡೆಂಘೀ ಜ್ವರ ನಿಯಂತ್ರಿಸಲು ಶಿಕ್ಷಕರ ಸಹಕಾರ ಅತ್ಯಗತ್ಯ ಎಂದು ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಅಜಿತ್ ತಿಳಿಸಿದರು.

ಪಟ್ಟಣದ ಶಿಕ್ಷಕರ ಭವನದಲ್ಲಿ ರಾಷ್ಟ್ರೀಯ ಡೆಂಘೀ ಜ್ವರ ನಿಯಂತ್ರಣದ ಅಂಗವಾಗಿ ಆರೋಗ್ಯ ಇಲಾಖೆಯಿಂದ ತಾಲೂಕಿನ ವಿಜ್ಞಾನ ಶಿಕ್ಷಕರಿಗೆ ಆಯೋಜಿಸಿದ್ದ ಡೆಂಘೀ ಜ್ವರ ನಿಯಂತ್ರಣ ಕುರಿತು ಅಡ್ವೋ ಕೆಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಪಿಪಿಟಿ ಮೂಲಕ ಡೆಂಘೀ ಜ್ವರ ಹರಡುವ ಸೊಳ್ಳೆ ಜೀವನ ಚಕ್ರದ ಬಗ್ಗೆ, ಡೆಂಘೀ ಜ್ವರ ನಿಯಂತ್ರಣ, ಶಾಲೆಗಳಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಬಗ್ಗೆ ವಿವರಿಸಿದರು.

ಡೆಂಘೀ ವೈರಸ್‌ನಿಂದ ಹರಡುವ ಮಾರಣಾಂತಿಕ ಸಾಂಕ್ರಾಮಿಕ ರೋಗ. ಈಡೀಸ್ ಗಂಡು ಸೊಳ್ಳೆಯು ಕಚ್ಚುವುದರಿಂದ ರೋಗವು ಹರಡುತ್ತದೆ. ಆದ್ದರಿಂದ ನಮ್ಮ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಂಡು ರೋಗವು ಬರದಂತೆ ಎಚ್ಚರ ವಹಿಸಬೇಕು ಎಂದರು.ಶಿಕ್ಷಕರು ಶಾಲೆಗಳಲ್ಲಿ ಡೆಂಘೀ ಸೇರಿದಂತೆ ಸೊಳ್ಳೆ, ನೊಣ ಮತ್ತಿತರ ಕಿಟಗಳಿಂದ ಹರಡುವ ರೋಗಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರೆ ಮಕ್ಕಳು ತಮ್ಮ ಮನೆ ಮತ್ತು ಸುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಾರೆ ಎಂದರು.

ಶ್ರೀಸಾಮಾನ್ಯರು ತಮ್ಮ ಮನೆ ಹಾಗೂ ಸುತ್ತಲಿನ ಪರಿಸರದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಚ್ಚರ ವಹಿಸಬೇಕು. ಸೊಳ್ಳೆಗಳ ಕಡಿತದಿಂದ ದೂರವಾಗಿದ್ದು ಅಮೂಲ್ಯವಾದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ ಜ್ಞಾನೇಶ್, ಹಿರಿಯ ಆರೋಗ್ಯ ನಿರಕ್ಷಣಾಧಿಕಾರಿಗಳಾದ ಎಸ್.ಎಲ್.ಸತೀಶ್, ಧಮೇಂದ್ರ ಮತ್ತು ವಿಜ್ಞಾನ ಶಿಕ್ಷಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ